ಪುತ್ತೂರು: ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರಿನಿಂದ ಬಂದಿದ್ದ ಪುತ್ತೂರು ನಿವಾಸಿಯೊಬ್ಬರ ಕೊರೋನಾ ವರದಿ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಸೃಷ್ಟಿಗೊಂಡ ಆತಂಕ ದೂರವಾಗಿದೆ.
ಬೆಂಗಳೂರಿನಿಂದ ಇತ್ತೀಚೆಗೆ ಬಂದಿದ್ದ ಪೋಳ್ಯದ ವ್ಯಕ್ತಿಯೊಬ್ಬರು ಆನಾರೋಗ್ಯದ ನಿಮಿತ್ತ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಜ್ವರ, ಕೆಮ್ಮು, ಶೀತ ಲಕ್ಷಣ ಕಂಡು ಬಂದಿದ್ದರಿಂದ ಅವರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಕುರಿತು ಮಾಹಿತಿ ಕಳೆ ಹಾಕಿದಾಗ ವ್ಯಕ್ತಿ ಆಸ್ಪತ್ರೆಯ ದಾಖಲಾಗುವ ವೇಳೆ ತಪ್ಪು ವಿಳಾಸ ನೀಡಿರುವುದಾಗಿ ಆರೋಪಿಸಲಾಗಿತ್ತು. ಆದರೆ ವ್ಯಕ್ತಿಯ ವೈದ್ಯಕೀಯ ಪರೀಕ್ಷೆ ಮತ್ತು ಸ್ಕ್ಯಾನಿಂಗ್ ವೇಳೆ ಅಪೆಂಡಿಕ್ಸ್ ಇರುವುದು ಬೆಳಕಿಗೆ ಬಂದು ವೈದ್ಯರು ನೀಡಿದ ಚಿಕಿತ್ಸೆಯಿಂದ ಅವರು ಗುಣಮುಖರಾಗಿದ್ದಾರೆ. ಆದರೆ ವ್ಯಕ್ತಿ ಬೆಂಗಳೂರಿನಿಂದ ಇತ್ತೀಚೆಗೆ ಬಂದಿದ್ದ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಅವರ ಗಂಟಲು ದ್ರವ ಮಾದರಿಯ ಪರೀಕ್ಷೆಯನ್ನು ಸಂಗ್ರಹಿಸಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇದೀಗ ಜೂ.2ರಂದು ಅವರ ವರದಿ ನೆಗೆಟಿವ್ ಬಂದಿದ್ದು, ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.