Home_Page_Advt
Home_Page_Advt
Home_Page_Advt

ಲಾಕ್‌ಡೌನ್ ಹಿನ್ನೆಲೆ: ಎರಡು ತಿಂಗಳ ಬಾಡಿಗೆ ಬಿಟ್ಟು ಮಾನವೀಯತೆ ಮೆರೆದ ಕೆಯ್ಯೂರು ಬ್ರಹ್ಮಶ್ರೀ ಕಾಂಪ್ಲೆಕ್ಸ್‌ನ ಮಾಲೀಕ ಜಯಂತ ಪೂಜಾರಿ ಕೆಂಗುಡೇಲು

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಕೊರೋನಾ ಲಾಕ್‌ಡೌನ್‌ನಿಂದಾಗಿ ಕಂಗಾಲಾಗಿರುವ ಜನರಿಗೆ ಉದ್ಯಮಿಗಳು, ದಾನಿಗಳು, ಸಂಘ ಸಂಸ್ಥೆಗಳು ವಿವಿಧ ಕಡೆಗಳಲ್ಲಿ ನೆರವು ನೀಡಿದ್ದಾರೆ. ಅನೇಕ ಕಟ್ಟಡಗಳ ಮಾಲೀಕರು ತಮ್ಮ ಬಾಡಿಗೆದಾರರಿಗೆ ಒಂದು ತಿಂಗಳ ಬಾಡಿಗೆ ಮನ್ನಾ ಮಾಡಿ ಮಾನವೀಯತೆ ಮೆರೆದಿದ್ದಾರೆ. ಆದರೆ ಕೆಯ್ಯೂರಿನಲ್ಲಿ ಬ್ರಹ್ಮಶ್ರೀ ಕಾಂಪ್ಲೆಕ್ಸ್‌ನ ಮಾಲೀಕ ಜಯಂತ ಪೂಜಾರಿ ಕೆಂಗುಂಡೇಲು ಅವರು ತಮ್ಮ ಕಟ್ಟಡದಲ್ಲಿ ಬಾಡಿಗೆಗೆ ಇರುವ ಬಾಡಿಗೆದಾರರಿಗೆ ಎರಡು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದಾರೆ.

ಇವರ ಕಟ್ಟಡದಲ್ಲಿ 6 ಬಾಡಿಗೆ ಕೊಠಡಿಗಳಿದ್ದು ಎಲ್ಲರಿಗೂ 2 ತಿಂಗಳ ಬಾಡಿಗೆಗೆ ವಿನಾಯಿತಿ ನೀಡಿದ್ದಾರೆ. ಕೆದಂಬಾಡಿ ಗ್ರಾ.ಪಂ ಮಾಜಿ ಸದಸ್ಯರೂ ಆಗಿರುವ ಜಯಂತ ಪೂಜಾರಿ ಅವರ ಈ ನಡೆ ಸ್ಥಳೀಯವಾಗಿ ಮೆಚ್ಚುಗೆಗೆ ಪಾತ್ರವಾಗಿದೆ. 

42 ಕುಟುಂಬಗಳಿಗೆ ಕಿಟ್ ವಿತರಣೆ:
ಜಯಂತ ಪೂಜಾರಿ ಕೆಂಗುಂಡೇಲು ಅವರು ಕೊರೋನಾ ಲಾಕ್‌ಡೌನ್‌ನಿಂದ ಸಮಸ್ಯೆಗೆ ಒಳಗಾಗಿದ್ದ ಆಯ್ದ 42 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ಕೂಡಾ ವಿತರಿಸಿ ಬಡವರ ಕಣ್ಣೀರೊರೆಸುವ ಕಾರ್ಯವನ್ನು ಮಾಡಿದ್ದಾರೆ. ಮಾತ್ರವಲ್ಲದೇ ಸ್ಥಳೀಯ ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ಡಯಾಲಿಸಿಸ್ ಮಾಡಲು ಐದು ಬಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬ್ರಹ್ಮಶ್ರೀ ಕಾಂಪ್ಲೆಕ್ಸ್‌ನಲ್ಲಿರುವ ಬಾಡಿಗೆದಾರರಿಗೆ ಎರಡು ತಿಂಗಳ ಬಾಡಿಗೆ ಮನ್ನಾ ಮಾಡಿದ್ದೇನೆ. ಲಾಕ್‌ಡೌನ್‌ನಿಂದಾಗಿ ವ್ಯಾಪರಸ್ಥರೂ ಕೂಡಾ ಕಷ್ಟದಲ್ಲಿದ್ದಾರೆ, ಜನರ ಸಮಸ್ಯೆಗೆ ನಾವು ಸ್ಪಂಧಿಸಬೇಕು. ಈ ನಿಟ್ಟಿನಲ್ಲಿ ಎರಡು ತಿಂಗಳ ಬಾಡಿಗೆಯನ್ನು ಸಂಪೂರ್ಣ ಮನ್ನಾ ಮಾಡಿರುತ್ತೇನೆ. ಅಲ್ಲದೇ ಅನೇಕ ಕುಟುಂಬಗಳಿಗೆ ನನ್ನಿಂದಾಗುವ ನೆರವನ್ನು ಕೂಡಾ ನೀಡಿದ್ದೇನೆ ಜಯಂತ ಪೂಜಾರಿ ಕೆಂಗುಂಡೇಲು, ಮಾಲಕರು ಬ್ರಹ್ಮಶ್ರೀ ಕಾಂಪ್ಲೆಕ್ಸ್, ಕೆಯ್ಯೂರು

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.