Home_Page_Advt
Home_Page_Advt
Home_Page_Advt

ಜೇನು ವ್ಯವಸಾಯಗಾರರ ಸಹಕಾರ ಸಂಘದ ವಿಸ್ತೃತ ಕಛೇರಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುಸಜ್ಜಿತವಾಗಿ ವಿಸ್ತೃತಗೊಂಡ ದ.ಕ ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಪ್ರಧಾನ ಕಚೇರಿಯು ಗಣಪತಿ ಹವನ ಹಾಗೂ ಲಕ್ಷ್ಮೀ ಪೂಜೆ ನಡೆಸುವ ಮುಖಾಂತರ ಸರಳ ಕಾರ್ಯಕ್ರಮದೊಂದಿಗೆ ಜೂ.3ರಂದು ಶುಭಾರಂಭಗೊಂಡಿತು.

1938ರಲ್ಲಿ ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಸ್ಥಾಪನೆಗೊಂಡ ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘವು ಜೇನು ಕೃಷಿಕರ ಅಭ್ಯುದಯಕ್ಕಾಗಿ ಶ್ರಮಿಸುತ್ತಿದೆ. ಕಳೆದು 81 ವರ್ಷಗಳಿಂದ ಜೇನು ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಂಘವು ಮಹತ್ತರ ಪಾತ್ರವಹಿಸಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಸಂಘವು 2760 ಜೇನು ಕೃಷಿಕರು ಸದಸ್ಯರಾಗಿ ಸಂಘದಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಜೇನು ವ್ಯವಸಾಯಗಾರರೇ ಕಟ್ಟಿ ಬೆಳೆಸಿದ ಸಹಕಾರಿ ಸಂಘವು ಇಂದು ತನ್ನ ಉತ್ಕೃಷ್ಠ ಗುಣಮಟ್ಟದ ಜೇನಿನ ಮೂಲಕ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದೆ. `ಮಾಧುರಿ’ ಎನ್ನುವ ಹೆಸರಿನ ಮುಖಾಂತರ ದ.ಕ ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಜೇನು ಇಂದು ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದೆ.

 

ಕಳೆದ ಹಲವು ವರ್ಷಗಳಿಂದ ನಗರದ ಚಿನ್ನರ ಪಾರ್ಕ್ ಬಳಿ ಸ್ವಂತ ಕಟ್ಟಡದಲ್ಲಿ ವ್ಯವಹರಿಸುತ್ತಿದ್ದು ಗ್ರಾಹಕರ ಅನುಕೂಲಕ್ಕಾಗಿ ಸಂಘದ ಮೇಲಂತಸ್ಥಿನಲ್ಲಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ವಿಸ್ತೃತ ಕಚೇರಿಯು ನಿರ್ಮಾಣಗೊಂಡಿದೆ. ಬ್ಯಾಂಕಿಂಗ್ ವಿಭಾಗ, ಮೀಟಿಂಗ್ ಹಾಲ್, ಅಧ್ಯಕ್ಷ, ಉಪಾಧ್ಯಕ್ಷರ ಕೊಠಡಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಪ್ರಥಮ ಮಹಡಿಯಲ್ಲಿ ಜೇನಿನ ವಿವಿಧ ಉತ್ಪನ್ನಗಳ ಮಾರಾಟ ವಿಭಾಗವು ಕಾರ್ಯನಿರ್ವಹಿಸಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಕೆಮ್ಮಿಂಜೆ ನಾಗೇಶ ತಂತ್ರಗಳ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳ ನೆರವೇರಿತು. ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ನಿರ್ದೇಶಕರಾದ ಪಾಂಡುರಂಗ ಹೆಗ್ಡೆ, ತನಿಯಪ್ಪ ಗೌಡ ನೇರಳಕಟ್ಟೆ, ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಮನಮೋಹನ ಅರಂಭ್ಯ, ಹರೀಶ್ ಕೊಡ್ಲ, ಶಿವಾನಂದ ಉಜಿರೆ, ಜಿ.ಪಿ ಶ್ಯಾಂ ಭಟ್, ಶ್ರೀಶಾ ಕೊಡವೂರು, ಸುಂದರ ಗೌಡ ಹೆಚ್. ಆಡಳಿತ ನಿರ್ದೇಶಕ ತಿಮ್ಮಯ್ಯ ಪಿಂಡಿಮನೆ, ಸಿಬಂದಿಗಳು ಹಾಗೂ ಮತ್ತಿತರರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ನೂತನ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿಯ ಸಭೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.