Home_Page_Advt
Home_Page_Advt
Home_Page_Advt

ಡಿಕೆಶಿ ಪದಗ್ರಹಣ: ಪುತ್ತೂರು ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣದ ಉಸ್ತುವಾರಿಯಾಗಿ ಜಗದೀಶ್ ಕಜೆ ನೇಮಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ರವರ ಪದಗ್ರಹಣ ಕಾರ್ಯಕ್ರಮಕ್ಕೆ ಸಂಬಂಧಿಸಿ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿಯಾಗಿ ಜಗದೀಶ್ ಕಜೆರವರು ನೇಮಕಗೊಂಡಿದ್ದಾರೆ.

ರಾಷ್ಟ್ರೀಯ ವಿಧ್ಯಾರ್ಥಿ ಸಂಘ(ಎನ್.ಎಸ್.ಯು.ಐ)ದ ಜಿಲ್ಲಾ ಪ್ರತಿನಿಧಿಯಾಗಿ ಇಂಟಕ್ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ ಅನುಭವವುಳ್ಳ ಬೆಳ್ಳಿಪ್ಪಾಡಿ ಗ್ರಾಮದ ಕಜೆ ನಿವಾಸಿ ಜಗದೀಶರವರು  2003ರಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಕಾಂಗ್ರೆಸ್ ಮುಂದಾಳು ಡಾ.ಬಿ.ರಘುರವರ ಗರಡಿಯಲ್ಲಿ ವಿವಿಧ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಜನತೆ ಡಾಟ್ ಕಾಮ್ ವೆಬ್ ಸೈಟ್ ಮುಖ್ಯಸ್ಥರಾಗಿರುವ ಜಗದೀಶ್ ಕಜೆರವರನ್ನು  ಸಾಮಾಜಿಕ ಜಾಲತಾಣದ ಉಸ್ತುವಾರಿಯಾಗಿ ಕಾವು ಹೇಮನಾಥ್ ಶೆಟ್ಟಿಯವರ ಶಿಫಾರಸ್ಸಿನಂತೆ ದಕ್ಷಿಣ ಕನ್ನಡ ಜಿಲ್ಲಾ ಸಾಮಾಜಿಕ ಜಾಲತಾಣದ ಉಸ್ತುವಾರಿ ನಿತ್ಯಾನಂದ ಶೆಟ್ಟಿ ಬನ್ನೂರು ಹಾಗೂ ರಾಜ್ಯ ಉಸ್ತುವಾರಿ ಎ.ಎನ್ ನಟರಾಜ್ ರವರ ಮೂಲಕ ಡಿ ಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.