Home_Page_Advt
Home_Page_Advt
Home_Page_Advt

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪುತ್ತೂರು ತಾಲೂಕಿನಲ್ಲಿ ಸಂಪೂರ್ಣ ಸಿದ್ಧತೆ

Puttur_Advt_NewsUnder_1
Puttur_Advt_NewsUnder_1
  • 5007 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ
  • 13 ಪರೀಕ್ಷಾ ಕೇಂದ್ರಗಳು
  • ಪ್ರತೀ ಪರೀಕ್ಷಾ ಕೋಣೆಯಲ್ಲಿ 20 ಮಕ್ಕಳು
  • ಮಕ್ಕಳಿಗೆ ಆರೋಗ್ಯ ಪರೀಕ್ಷೆ, ಸ್ಯಾನಿಟರ್ ವ್ಯವಸ್ಥೆ
  • 320 ಮಂದಿ ಶಿಕ್ಷಕರ ವ್ಯವಸ್ಥೆ
  • 11 ಶಾಲೆಯ 70 ಮಕ್ಕಳು ಕೇರಳ ರಾಜ್ಯದವರು

ಪುತ್ತೂರು: ಪುತ್ತೂರು ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿ ಎಲ್ಲಾ ಪೂರ್ವ ತಯಾರಿ ಮಾಡಲಾಗಿದೆ. ತಾಲೂಕಿನಿಂದ 5007 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ತಾಲೂಕಿನಲ್ಲಿ 13 ಪರೀಕ್ಷಾ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತೀ ಪರೀಕ್ಷಾ ಕೋಣೆಯಲ್ಲಿ 20 ಮಕ್ಕಳಿಗೆ ಪರೀಕ್ಷೆ ಬರೆಯಲು ಅನುಕೂಲ ಮಾಡಲಾಗಿದೆ. ಇವರ ಆರೋಗ್ಯ ಪರೀಕ್ಷೆ, ಸ್ಯಾನಿಟರ್ ವ್ಯವಸ್ಥೆ ಮಾಡಲಾಗಿದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಸಿ. ತಿಳಿಸಿದ್ದಾರೆ.


13 ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗಾಗಿ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಪುತ್ತೂರು ತಾಲೂಕಿನಲ್ಲಿ 4970 ಮಕ್ಕಳು ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ರಾಜ್ಯ ಸರಕಾರದ ಸೂಚನೆಯಂತೆ ವಿದ್ಯಾರ್ಥಿಗಳು ಪ್ರಸ್ತುತ ಇರುವ ಸ್ಥಳಗಳಲ್ಲಿಯೇ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡುವ ಹಿನ್ನಲೆಯಲ್ಲಿ ಇತರ ತಾಲೂಕು-ಜಿಲ್ಲೆಗಳ 37 ಮಕ್ಕಳು ಪುತ್ತೂರು ತಾಲೂಕಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಹಾಗಾಗಿ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹಾಗೆಯೇ 181 ಮಕ್ಕಳು ಪುತ್ತೂರು ತಾಲೂಕಿನ ಪ್ರೌಢಶಾಲೆಗಳ 10 ತರಗತಿಯಲ್ಲಿ ಕಲಿಯುತ್ತಿದ್ದವರು ಪ್ರಸ್ತುತ ಬೇರೆ ಜಿಲ್ಲೆಗಳಲ್ಲಿದ್ದು, ಈ ಮಕ್ಕಳು ಅವರು ಇರುವ ಸ್ಥಳದಲ್ಲಿಯೇ ಪರೀಕ್ಷೆ ಬರೆಯುವ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಪರೀಕ್ಷೆ ಬರೆಯಲಿರುವ ಮಕ್ಕಳ ಸಂಖ್ಯೆಯಲ್ಲಿ ಕಡಿಮೆಯಾಗುವ ಸಾಧ್ಯತೆಯೂ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
320 ಮಂದಿ ಶಿಕ್ಷಕರ ವ್ಯವಸ್ಥೆ:
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿ 320 ಶಿಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. 268 ಮಂದಿ ಶಿಕ್ಷಕರು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿ ಕೆಲಸ ಮಾಡಲಿದ್ದಾರೆ. 13 ಮಂದಿ ಅಧೀಕ್ಷಕರಾಗಿ, 13 ಮಂದಿ ಉಪ ಅಧೀಕ್ಷಕರಾಗಿ, 13 ಮಂದಿ ಮೊಬೈಲ್ ಸ್ವಾಧೀನ ಅಧಿಕಾರಿಗಳಾಗಿ ಹಾಗೂ 13 ಮಂದಿ ಜಾಗೃತ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಎಲ್ಲಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಲಾಗಿದೆ. ಇದರೊಂದಿಗೆ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯ ಸಿಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
11 ಶಾಲೆಯ 70 ಮಕ್ಕಳು ಕೇರಳ ರಾಜ್ಯದವರು
ಪುತ್ತೂರು ತಾಲೂಕು ಮತ್ತು ಕೇರಳ ರಾಜ್ಯದ ಗಡಿ ಭಾಗದ ೧೧ ಪ್ರೌಢಶಾಲೆಗಳಲ್ಲಿ ೭೦ ವಿದ್ಯಾರ್ಥಿಗಳು ಪ್ರಸ್ತುತ ಕೇರಳ ರಾಜ್ಯದಲ್ಲಿದ್ದಾರೆ. ಈ ಮಕ್ಕಳು ಪುತ್ತೂರು ತಾಲೂಕಿನ ಶಾಲೆಗಳಲ್ಲಿ ಕಲಿಯುತ್ತಿದ್ದರೂ, ಕೇರಳ ರಾಜ್ಯದ ನಿವಾಸಿಗಳಾಗಿದ್ದಾರೆ. ಪ್ರಸ್ತುತ ಕರ್ನಾಟಕ-ಕೇರಳ ರಾಜ್ಯದ ಗಡಿ ಬಂದ್ ಆಗಿದೆ. ಹಾಗಾಗಿ ಈ ೭೦ ಮಕ್ಕಳು ಪರೀಕ್ಷೆ ಬರೆಯಲು ಕೇರಳ ರಾಜ್ಯದ ಅನುಮತಿಯೂ ಬೇಕಾಗಿದೆ. ಇದು ರಾಜ್ಯ ಮಟ್ಟದಲ್ಲಿ ತೀರ್ಮಾನವಾಗಬೇಕಾಗಿದೆ. ಈ ಬಗ್ಗೆ ನಮಗೆ ಇದುವರೆಗೆ ಯಾವುದೇ ಸ್ಪಷ್ಟ ಮಾಹಿತಿಗಳು ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಉಪಹಾರದ ವ್ಯವಸ್ಥೆ: 10ನೇ ತರಗತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಸಾರಿಗೆ ಇಲಾಖೆಯಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಇಲಾಖೆ ಮಾಹಿತಿ ನೀಡಿದೆ. ಇದರೊಂದಿಗೆ ಪರೀಕ್ಷಾ ಕೇಂದ್ರದ ಆವರಣದೊಳಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು. – ಸಿ.ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.