Home_Page_Advt
Home_Page_Advt
Home_Page_Advt

ಉಭಯ ತಾಲೂಕಿನ ವಿವಿಧ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಅರ್ಜಿ ಆಹ್ವಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 1997ರ ಕಲಂ 25ರ ಅನ್ವಯ ‘ಸಿ’ ಪ್ರವರ್ಗದ ದೇವಸ್ಥಾನಗಳಿಗೆ 9 ಸದಸ್ಯರ ವ್ಯವಸ್ಥಾಪನಾ ಸಮಿತಿ ರಚಿಸಲು ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ನಡೆದ ತೀರ್ಮಾನದಂತೆ ಪುತ್ತೂರು ಮತ್ತು ಕಡಬ ವಿವಿಧ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಮುಂದಿನ ಮೂರು ವರ್ಷಗಳ ಅವಧಿಗಾಗಿ 9 ಜನ ಸದಸ್ಯರನ್ನು ಒಳಗೊಂಡು ವ್ಯವಸ್ಥಾಪನಾ ಸಮಿತಿ ರಚಿಸುವುದಕ್ಕಾಗಿ ಆಸಕ್ತಿವುಳ್ಳ ಭಕ್ತಾದಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಭಕ್ತಾದಿಗಳು ನಿಗಧಿತ ಅರ್ಜಿ ನಮೂನೆಯನ್ನು ಭರ್ತಿ ಮಡಿ ಜು.30ರ ಸಂಜೆಯ ಒಳಗಾಗಿ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ದ.ಕ ಮಂಗಳೂರು ಇಲ್ಲಿಗೆ ಸ್ವೀಕೃತವಾಗುವಂತೆ ಸಲ್ಲಿಸಬೇಕೆಂದು ಆಯುಕ್ತರು ತಿಳಿಸಿದ್ದಾರೆ.

ಯಾವೆಲ್ಲಾ ದೇವಸ್ಥಾನಗಳು …
ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ ಕಡಬ, ಶ್ರೀ ಪಡುಮಲೆ ಶಾಸ್ತಾವು ದೇವಸ್ಥಾನ ಪಡುವನ್ನೂರು, ಶ್ರೀ ಮೂಡ್ನೂರು ಮುಂಡ್ಯ ಶಾಸ್ತರ ದೇವಸ್ಥಾನ ನೆಟ್ಟಣಿಗೆ, ಕಸ್ಪಾಡಿ ಕಪಿಲೇಶ್ವರ ದೇವಸ್ಥಾನ ಚಾರ್ವಾಕ, ಶ್ರೀ ಮುಡ್ನೂರು ಪಂಚಲಿಂಗೇಶ್ವರ ದೇವಸ್ಥಾನ ನೆಟ್ಟಣಿಗೆ, ಶ್ರೀ ಸಂಪುಟ ನರಸಿಂಹ ದೇವ ದೇವಸ್ಥಾನ ಮತ್ತು ಯಜ್ಞಮೂರ್ತಿ ದೇವಸ್ಥಾನ ಬಳ್ಪ, ಶ್ರೀ ಸದಾಶಿವ ಜೋಡು ದೇವರು ದೇವಸ್ಥಾನ ಚಾರ್ವಾಕ, ಸರವು ಸುಬ್ರಹ್ಮರ್ಣಯ ದೇವಸ್ಥಾನ, ಸರವು, ಶಾಸ್ತವು ಸುಬ್ರಾಯ ದೇವಸ್ಥಾನ ಪುತ್ತೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮರ್ದಾಳ ಬಂಟ್ರಗ್ರಾಮ, ಶ್ರೀ ಶಾಸ್ತವು ದೇವಸ್ಥಾನ ಮುನ್ನೂರು ಗ್ರಾಮ, ಶ್ರೀ ಬಳಿಯೂರು ವೆಂಕಟ್ರಮಣ ದೇವಸ್ಥಾನ ಬಲ್ನಾಡು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಎಲಿಯ, ಶ್ರೀ ಸದಾಶಿವ ದೇವಸ್ಥಾನ ಮುಂಡೂರು, ಶ್ರೀ ಕೂವೆ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆ, ಶ್ರೀ ಸದಾಶಿವ ದೇವಸ್ಥಾನ ಪಿಜಕಳ, ಶ್ರೀ ರಾಮಕುಂಜೇಶ್ವರ ದೇವಸ್ಥಾನ ರಾಮಕುಂಜ, ಶ್ರೀ ದುರ್ಗಾಂಬಾ ದೇವಸ್ಥಾನ ಕಡಬ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನ ಬಲ್ನಾಡು, ಶ್ರೀ ಶ್ರೀಕಂಠ ಸ್ವಾಮಿ ಮಹಾಗಣಪತಿ ದೇವಸ್ಥಾನ ಕಡಬ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಿಳಿನೆಲೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೆಯ್ಯೂರು, ಶ್ರೀ ಬೀಡಿನ ದೈವಗಳ ದೇವಸ್ಥಾನ ಇಚ್ಲಂಪಾಡಿ, ಶ್ರೀ ತಲೇಕಿ ಶ್ರೀನಿವಾಸ ದೇವಸ್ಥಾನ ಕುಟ್ರುಪಾಡಿ, ಶ್ರೀ ಬರೆಪ್ಪಾಡಿ ಪಂಚಲಿಂಗೇಶ್ವರ ದೇವಸ್ಥಾನ ಕುದ್ಮಾರು, ಶ್ರೀ ವಳಾಲು ಪಂಚಲಿಂಗೇಶ್ವರ ದೇವಸ್ಥಾನ ಬಜತ್ತೂರು, ಮುದ್ಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಜತ್ತೂರು, ಶ್ರೀ ದಂಡತೀರ್ಥ ಹನುಮಂತ ದೇವಸ್ಥಾನ ರಾಮಕುಂಜ, ಶ್ರೀ ಪೆರ್ಲ ಷಣ್ಮುಖ ಹನುಮಂತ ದೇವಸ್ಥಾನ ಆಲಂತಾಯ, ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ ನೂಜಿ ಬಾಳ್ತಿಲ, ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ ಕುಟ್ರುಪಾಡಿ, ಶ್ರೀ ಸುಬ್ರಹಣ್ಯ ಷಣ್ಮುಖ ನರಸಿಂಹ ದೇವಸ್ಥಾನ ಕೊಂಬಾರು, ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ ಬಿಳಿನೆಲೆ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಐತೂರು, ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ ಐತೂರು, ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ ಕೋಡಿಂಬಾಳ, ಶ್ರೀ ವೀರಮಂಗಲ ವಿಷ್ಣುಮೂರ್ತಿ ದೇವಸ್ಥಾನ ಶಾಂತಿಗೋಡು, ಶ್ರೀ ಕಾರ್ಪಾಡಿ ಸದಾಶಿವ ದೇವಸ್ಥಾನ ಚಾರ್ವಾಕ, ಶ್ರೀ ಆತೂರು ಸದಾಶಿವ ದೇವಸ್ಥಾನ ಕೊಲ, ಶ್ರೀ ಮೂಡ್ನೂರು ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನ ನೆಟ್ಟಣಿಗೆ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕಾವು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕುಂಜೂರು ಆರ್ಯಾಪು, ಶ್ರೀ ಕಲ್ಲೇಗ ಕಲ್ಕುಡ ದೈವಸ್ಥಾನ ಪುತ್ತೂರು, ಜನಾರ್ದನ ದೇವಸ್ಥಾನ ಕೊಡಿಪ್ಪಾಡಿ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಪೂಮಾಣಿ ಕಿನ್ನಿಮಾಣಿ ದೈವಗಳ ಕದಿಕೆ ಚಾವಡಿ ಇರ್ದೆ, ಪಡುಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಬಡಗನ್ನೂರು, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಕೆಮ್ಮಿಂಜೆ, ಶ್ರೀ ಮದಗಜನಾರ್ಧನ ದೇವಸ್ಥಾನ ಪಡ್ನೂರುನ, ಶ್ರೀ ಷಣ್ಮುಖ ದೇವಸ್ಥಾನ ಬಾಯಂಬಾಡಿ, ಶ್ರೀ ಅಮ್ಮಾಜೆ ದುರ್ಗಾಪರಮೇಶ್ವರಿ ದೇವಸ್ಥಾನ ಶಿರಾಡಿ, ಶ್ರೀ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನ ಮರಕತ ನಾಲ್ಕೂರು, ಶ್ರೀ ಮಠದ ಬೆಟ್ಟು ದುರ್ಗಾಪಮರೇಶ್ವರಿ ದೇವಿ ದೇವಸ್ಥಾನ ಬೆಳ್ಳಿಪ್ಪಾಡಿ ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ ಸಲ್ಲಿಸುವ ಕುರಿತು ಆಯಾಯ ದೇವಸ್ಥಾನಗಳಿಗೆ ಇಲಾಖೆಯಿಂದ ಪತ್ರ ರವಾಣೆಯಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.