ಪುತ್ತೂರು: ಕೆಯ್ಯೂರು ಅಂಗನವಾಡಿ ಕೇಂದ್ರದ ಕುಡಿಯುವ ನೀರಿನ ಟ್ಯಾಂಕ್ನ್ನು ಸಾಮಾಜಿಕ ಕಾರ್ಯಕರ್ತ ಖಾದರ್ ಮಾಡಾವು ಅವರು ಸ್ವಚ್ಚಗೊಳಿಸಿ ಸ್ಥಳೀಯವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೂ.೬ರಂದು ಟ್ಯಾಂಕ್ನ್ನು ಖಾದರ್ ಮಾಡಾವು ಅವರು ತೊಳೆದು ಸ್ವಚ್ಛಗೊಳಿಸಿದ್ದು ಅವರ ಮಾದರಿ ಕಾರ್ಯಕ್ಕೆ ಅಂಗನವಾಡಿ ಶಿಕ್ಷಕಿ ಹಾಗೂ ಊರವರು ಅಭಿನಂದನೆ ಸಲ್ಲಿಸಿದ್ದಾರೆ.
ಖಾದರ್ ಮಾಡಾವು ಅವರು ಇತ್ತೀಚೆಗೆ ಕೆಯ್ಯೂರು ಪರಿಸರದಲ್ಲಿ ಗಾಯಗೊಂಡು ಚರಂಡಿಯೊಂದರಲ್ಲಿ ಬಿದ್ದಿದ್ದ ನವಿಲೊಂದನ್ನು ಉಪಚರಿಸಿ ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸುವ ಕಾರ್ಯ ಮಾಡಿದ್ದರು.