HomePage_Banner
HomePage_Banner
HomePage_Banner
HomePage_Banner

ಶಾಲೆಗಳನ್ನು ಪ್ರಾರಂಭಿಸಲು ಅವಸರ ಬೇಡ, ಸರಕಾರಕ್ಕೆ ಶಕುಂತಳಾ ಶೆಟ್ಟಿ ಒತ್ತಾಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಸೋಂಕಿನಿಂದ ರಾಜ್ಯ ಸೇರಿದಂತೆ ಇಡೀ ದೇಶ ಜರ್ಜರಿತವಾಗಿದೆ. ಅದು ನಿಯಂತ್ರಣಕ್ಕೆ ಬಾರದೆ ಶಾಲೆಗಳನ್ನು ಆರಂಭಿಸಲು ಸರಕಾರ ಆತುರದ ನಿರ್ಧಾರ ಕೈಗೊಳ್ಳದೆ ಮಕ್ಕಳ ಹಿತದೃಷ್ಟಿಯಿಂದ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕವೇ ಶಾಲೆಗಳನ್ನು ಆರಂಭಿಸುವಂತಾಗಬೇಕು ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಸರಕಾರಕ್ಕೆ ಒತ್ತಾಯಿಸಿದ್ದಾರೆ. ಜೂ.4ರಂದು ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ಅವಸರದಿಂದ ಶಾಲೆಗಳನ್ನು ಆರಂಭಿಸಿದ್ದಲ್ಲಿ ಚಿಕ್ಕ-ಚಿಕ್ಕ ಮಕ್ಕಳಿಂದ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗದು ಇದರಿಂದಾಗಿ ಅವರ ಭವಿಷ್ಯ ಮಂಕಾಗಲಿದೆ ಎಂದು ಹೆತ್ತವರು ದಿಗಿಲುಗೊಂಡಿದ್ದಾರೆ ಎಂದು ಹೇಳಿದರು.

ಹೋಮ್‌ಗಾರ್ಡ್ ಗಳನ್ನು ಕಿತ್ತು ಹಾಕಿದ್ದು ಸರಿಯಲ್ಲ: ಎಷ್ಟೋ ವರ್ಷಗಳಿಂದ ಪೊಲೀಸ್ ಇಲಾಖೆಯೊಂದಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದ ಗೃಹರಕ್ಷಕ ದಳದ ಸಿಬಂದಿಗಳನ್ನು ಕೆಲಸದಿಂದ ಕಿತ್ತು ಹಾಕಿರುವ ಸರಕಾರದ ಕ್ರಮ ಸರಿಯಲ್ಲ. ಹೋಮ್ ಗಾರ್ಡ್ ಗಳು ಅತ್ಯಲ್ಪ ಸಂಬಳಕ್ಕೆ ಕೆಲಸ ಮಾಡುತ್ತಾ ಬರುತ್ತಿದ್ದು ಮಾತ್ರವಲ್ಲದೆ ಕೊರೋನಾ ವಾರಿಯರ್ಸ್‌ಗಳಾಗಿಯೂ ಕೆಲಸ ಮಾಡುತ್ತಾ ಜೀವನ ನಿರ್ವಹಿಸುತ್ತಿದ್ದು ಕೆಲಸದಿಂದ ಕಿತ್ತು ಹಾಕುವ ಮೂಲಕ ಅವರನ್ನು ನಿರ್ಗತಿಕರನ್ನಾಗಿ ಮಾಡಲಾಗಿದೆ. ತಮ್ಮ ಜೀವನ ನಿರ್ವಹಣೆಗೆ ಅವರಿಗೆ ಬೇರೆ ಯಾವುದೇ ಕೆಲಸ ಇಲ್ಲದಿರುವುದರಿಂದಾಗಿ ಅವರ ಕುಟುಂಬವನ್ನು ಚಿಂತೆಗೀಡು ಮಾಡಿದೆ. ಸರಕಾರ ಹೋಮ್ ಗಾರ್ಡ್‌ಗಳ ಬಾಳಿಗೆ ಬೆಳಕಾಗುವ ನಿಟ್ಟಿನಲ್ಲಿ ತಕ್ಷಣ ಅವರಿಗೆ ಮರು ಉದ್ಯೋಗ ಕಲ್ಪಿಸಿಕೊಡಬೇಕಾಗಿದೆ ಎಂದು ಶಕುಂತಳಾ ಶೆಟ್ಟಿ ಹೇಳಿದರು.

ಬಿಪಿಎಲ್ ಕಾರ್ಡ್ ಗೊಂದಲ ನಿವಾರಿಸಿ: ಬಿಪಿಎಲ್ ಕಾರ್ಡ್ ಗೆ ಹಾಗೂ ಬಿಪಿಎಲ್ ಬದಲಾವಣೆಗೆ ಅರ್ಜಿ ಹಾಕಿದ್ದು ಈಗ ಬಿಪಿಎಲ್ ಕಾರ್ಡ್ ಇಲ್ಲದೆ ಬಡವರು ಗೊಂದಲಕ್ಕೀಡಾಗಿದ್ದು, ತಕ್ಷಣ ಗೊಂದಲವನ್ನು ನಿವಾರಿಸಿ ಅರ್ಹರಿಗೆ ಬಿಪಿಎಲ್ ಕಾರ್ಡ್ ಸಿಗುವಂತಾಗಬೇಕು. ಕೆಲವರು ಎಪಿಎಲ್ ಕಾರ್ಡ್ ದಾರರು ಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕಿದ್ದು ಒಂದು ಕಡೆ ಬಿಪಿಎಲ್ ಇಲ್ಲದೆ ಮತ್ತೊಂದು ಕಡೆ ಎಪಿಎಲ್ ಕೂಡಾ ಇಲ್ಲದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಹಾಗೂ ಮತ್ತೊಂದು ಕಡೆ ಕೇವಲ ಎಪಿಎಲ್ ಕಾರ್ಡ್ ಮಾತ್ರ ಕೊಡಲಾಗುತ್ತಿದೆ. ಸರಕಾರ ಈ ಎಲ್ಲಾ ಗೊಂದಲಗಳನ್ನು ಪರಿಹರಿಸಿ ಅರ್ಹರಿಗೆ ಬಿಪಿಎಲ್ ಕಾರ್ಡ್ ಸಿಗುವಂತಾಗಬೇಕು ಎಂದು ಹೇಳಿದರು.

ಪ್ರತೀ ಕೃಷಿ ಕಾರ್ಮಿಕರಿಗೆ ಸರಕಾರ ೧೦ ಸಾವಿರ ನೀಡಬೇಕು: ರಿಕ್ಷಾ ಚಾಲಕರು ಸಹಿತ ಸರಕಾರವು ಎಲ್ಲಾ ವರ್ಗದ ಜನರಿಗೆ ೫ ಸಾವಿರದಂತೆ ನೀಡುವುದಾಗಿ ಘೋಷಿಸಿದ್ದು ಶ್ಲಾಘನೀಯವಾಗಿದ್ದರೂ ಎಷ್ಟು ಮಂದಿ ರಿಕ್ಷಾ ಚಾಲಕರಿಗೆ ಹಣ ಬಂದಿದೆ ಯಾರಿಗೆಲ್ಲಾ ಸಿಕ್ಕಿದೆ ಎಂದು ಒಂದೂ ಗೊತ್ತಾಗುವುದಿಲ್ಲ ಎಂದ ಶಕುಂತಳಾ ಶೆಟ್ಟಿ ಅವರು ರೈತರ, ಕೃಷಿಕರ ಕೂಲಿ ಕಾರ್ಮಿಕರಿಗೆ ಏನೂ ವ್ಯವಸ್ಥೆಯಾಗದೆ ಅವರು ತೀವ್ರ ಕಂಗಾಲಾಗಿದ್ದು ಸರಕಾರ ತಕ್ಷಣ ಕೃಷಿಕರ ಕೂಲಿಕಾರ್ಮಿಕರಿಗೆ ತಲಾ ರೂ. ಹತ್ತು ಸಾವಿರದಂತೆ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ರಾಜಕಾರಣಿಗಳು ಇಂದು ಮೆರೆಯುತ್ತಿದ್ದರೆ ಅದಕ್ಕೆ ಕೃಷಿ ಕಾರ್ಮಿಕರೂ ಕಾರಣ. ಸರಕಾರವು ಇಂತಹ ಕಾರ್ಮಿಕರ ಬಾಳಿಗೆ ಬೆಳಕಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಹೊರ ರಾಜ್ಯದಿಂದ ಬರುವವರಿಗೆ ಸ್ವಾಗತ: ಹೊರರಾಜ್ಯದಿಂದ ನಮ್ಮ ರಾಜ್ಯಕ್ಕೆ ಬರುವವರಿಗೆ ನಾವು ಸ್ವಾಗತಿಸುತ್ತೇವೆ ಆದರೆ ಅವರನ್ನು ಸುರಕ್ಷಿತವಾಗಿ ಇರಲು ಅನುಕೂಲ ಮಾಡಿ ಕೊಡುವುದು ಸರಕಾರದ ಕರ್ತವ್ಯವಾಗಿದೆ ಎಂದು ಶಕುಂತಳಾ ಶೆಟ್ಟಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ವಹಿಸಿದ್ದರು.

ಡಿಕೆಶಿ ಪದಗ್ರಹಣ ಕಾರ್ಯಕ್ರಮ ಮುಂದೂಡಿಕೆ: ಜೂ.7ರಂದು ರಾಜ್ಯಾದ್ಯಂತ ವಿಶಿಷ್ಟ ರೀತಿಯಲ್ಲಿ ಆಚರಿಸಲು ಉದ್ದೇಶಿಸಲಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಮಾರಂಭವು ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು ಮುಂದಿನ ದಿನಾಂಕವನ್ನು ಶೀಘ್ರವಾಗಿ ತಿಳಿಸಲಾಗುವುದು ಎಂದು ಶಕಿಂತಲಾ ಶೆಟ್ಟಿಯವರು ಹೇಳಿದರು.

ಸಂತಾಪ ಸೂಚಕ ಸಭೆ: ಜೂನ್ 4 ರಂದು ನಿಧನರಾದ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ, ಮಾಜಿ ಎಪಿಎಂಸಿ ನಿರ್ದೇಶಕ ಮಾಣಿಕ್ಯ ರಾಜ್ ಪಡಿವಾಳ್ ಹಾಗೂ ಇತ್ತೀಚೆಗೆ ನಿಧನರಾದ ಹಿರಿಯ ಕಾಂಗ್ರೆಸಿಗ, ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಮಾಜಿ ಸದಸ್ಯ , ನಗರಸಭೆ ಗುತ್ತಿಗೆದಾರರಾಗಿದ್ದ ಸಾಲ್ಮರ ಪಿ. ಎಸ್. ಅಬೂಬಕ್ಕರ್ ಮುಸ್ಲಿಯಾರ್ ಮತ್ತು ಯುವ ಕಾಂಗ್ರೆಸ್ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ಮಾಡಾವು ಅರೆಕಿಲ ಅಚ್ಚು ಯಾನೆ ಅಶ್ರಫ್ ರವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮೃತರ ಗುಣಗಾನ ಮಾಡಿದರು.

ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯ ಎಮ್. ಬಿ. ವಿಶ್ವನಾಥ ರೈ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಮಲಾ ರಾಮಚಂದ್ರ, ಯುವಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಆರ್ಷದ್ ದರ್ಬೆ, ಇಸಾಕ್ ಸಾಲ್ಮರ, ಸಂತೋಷ್ ರೈ ಚಿಲ್ಮೆತ್ತಾರು, ದಿನೇಶ್ ಪಿ. ವಿ., ಗಂಗಾಧರ ಶೆಟ್ಟಿ ಎಲಿಕ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.