ವರದಿ: ಉಮಾಪ್ರಸಾದ್ ರೈ ನಡುಬೈಲು
ಪುತ್ತೂರು: ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕುದ್ಮಾರು ಎಂಬಲ್ಲಿ ಯುವ ಉದ್ಯಮಿ ಚೆನ್ನಪ್ಪ ಗೌಡ ನೂಜಿರವರ ಮಾಲಕತ್ವದ ಸ್ಕಂದಶ್ರೀ ಪೆಟ್ರೋಲ್ ಬಂಕ್ ಜೂ. 5ರಂದು ಬೆ. 8.30ಕ್ಕೆ ಉದ್ಘಾಟನೆಯಾಗಲಿದೆ.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈರವರು ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ ಮಾಡಲಿದ್ದಾರೆ. ಸುಳ್ಯ ಶಾಸಕ ಎಸ್. ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಜಿ,ಪಂ, ಸದಸ್ಯೆ ಪ್ರಮೀಳಾ ಜನಾರ್ಧನ್, ತಾ.ಪಂ, ಉಪಾಧ್ಯಕ್ಷೆ ಲಲಿತಾ ಈಶ್ವರ್, ಬೆಳಂದೂರು ಗ್ರಾ.ಪಂ, ಅಧ್ಯಕ್ಷೆ ಉಮೇಶ್ವರಿ ಅಗಳಿ ಸಹಿತ ಜನಪ್ರತಿನಿಧಿಗಳು, ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಂದಾಳುಗಳು, ಉದ್ಯಮಿಗಳು ಸಹಿತ ಅನೇಕ ಮಂದಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ಕಂದಶ್ರೀ ಪೆಟ್ರೋಲ್ ಬಂಕ್ ಮಾಲಕರಾದ ಚೆನ್ನಪ್ಪ ಗೌಡ ನೂಜಿ ಹಾಗೂ ಪವಿತ್ರ ಚೆನ್ನಪ್ಪ ಗೌಡ ನೂಜಿರವರುಗಳು ತಿಳಿಸಿದ್ದಾರೆ.
ಸಾಮಾಜಿಕ ಮುಂದಾಳು, ಯುವ ಉದ್ಯಮಿ ಚೆನ್ನಪ್ಪ ಗೌಡ ನೂಜಿರವರಿಂದ ಉದ್ಯಮ ಕ್ಷೇತ್ರಕ್ಕೆ ಕೊಡುಗೆ: ಸವಣೂರು ಸಿ.ಎ.ಬ್ಯಾಂಕ್ ಅಧ್ಯಕ್ಷ ಹಾಗೂ ಬೆಳಂದೂರು ಗ್ರಾ.ಪಂ, ಉಪಾಧ್ಯಕ್ಷರಾಗಿ ಸಹಕಾರಿ, ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಿ, ಅಪಾರ ಜನ ಬೆಂಬಲ ಹಾಗೂ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದ ಯುವ ಉದ್ಯಮಿ ಚೆನ್ನಪ್ಪ ಗೌಡ ನೂಜಿರವರು ತಮ್ಮ ಹುಟ್ಟೂರು ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಈಗಾಗಲೇ ಸ್ಕಂದಶ್ರೀ ಕಾಂಪ್ಲೆಕ್ಸ್ ನಿರ್ಮಾಣ ಮಾಡಿ, 5 ಮನೆಗಳನ್ನು ನಿರ್ಮಿಸಿ, ಮಿತದರದಲ್ಲಿ ಬಾಡಿಗೆಗೆ ನೀಡಿದ್ದಾರೆ, ಇದೀಗ ಜನರಿಗೆ ಅವಶ್ಯಕವಾಗಿ ಬೇಕಾಗಿರುವ ಸ್ಕಂದಶ್ರೀ ಪೆಟ್ರೋಲ್ ಬಂಕ್ ಜೂ. 5ರಂದು ಉದ್ಘಾಟನೆಯಾಗಲಿದೆ. ಈ ಪೆಟ್ರೋಲ್ ಬಂಕ್ ಬೆಳಿಗ್ಗೆ 6 ರಿಂದ ರಾತ್ರಿ 10ರ ತನಕ ಕಾರ್ಯನಿರ್ವಹಿಸಲಿದೆ.