Home_Page_Advt
Home_Page_Advt
Home_Page_Advt

ಜೂ.8ರಿಂದ ಧಾರ್ಮಿಕ ಕೇಂದ್ರಗಳು, ವಾಣಿಜ್ಯ ಸಂಸ್ಥೆಗಳು, ಹೊಟೇಲ್‌ಗಳು ಪಾಲಿಸಬೇಕಾದ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರಕಾರ

Puttur_Advt_NewsUnder_1
Puttur_Advt_NewsUnder_1

2 ತಿಂಗಳ ನಂತರ ಜೂ.8ರಂದು ತೆರೆಯಲಿರುವ ಧಾರ್ಮಿಕ, ವಾಣಿಜ್ಯ ಸಂಸ್ಥೆಗಳು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಕೇಂದ್ರ ಸರಕಾರ ಪ್ರಕಟಿಸಿದೆ. 2 ಹಂತಗಳಲ್ಲಿ ಲಾಕ್ ಡೌನ್ ಅನ್ ಲಾಕ್ ಆಗಲಿದ್ದು, ಮೊದಲನೆ ಹಂತದಲ್ಲಿ ಧಾರ್ಮಿಕ ಸ್ಥಳಗಳು, ಹೊಟೇಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ತೆರೆಯಲು ಅವಕಾಶ ನೀಡಲಾಗಿದೆ. ಈಗಾಗಲೇ ಕೆಲವು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಮಾರ್ಗಸೂಚಿಗಳು ಎಲ್ಲರೂ ಪಾಲಿಸಬೇಕಾದದ್ದು:

  • ಆಗಾಗ 40ರಿಂದ 60 ಸೆಕೆಂಡುಗಳ ಕಾಲ ಕೈಗಳನ್ನು ಸೋಪುಗಳಿಂದ ತೊಳೆಯುತ್ತಿರಬೇಕು.
  • ಕೆಮ್ಮುವಾಗ, ಸೀನುವಾಗ ಟಿಶ್ಯು, ಕರವಸ್ತ್ರಗಳಿಂದ ಮೂಗು, ಬಾಯಿಗಳನ್ನು ಮುಚ್ಚಬೇಕು, ಬಳಕೆಯಾದ ಟಿಶ್ಯುಗಳನ್ನು ಸರಿಯಾಗಿ ಎಸೆಯಬೇಕು.
  • ಉಗುಳುವುದು ಸಂಪೂರ್ಣ ನಿಷಿದ್ಧ.
  • ಶಾಪಿಂಗ್ ಮಾಲ್ ಗಳು ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಇರಲೇಬೇಕು.
  • ಕೋವಿಡ್ 19ನ ಯಾವುದೇ ಲಕ್ಷಣಗಳು ಇಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರವೇಶಿಸಲು ಅವಕಾಶ ನೀಡಬೇಕು.
  • ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶಿಸಲು ಅವಕಾಶ.
  • ಕೋವಿಡ್ 19 ತಡೆಗಟ್ಟುವ ಕುರಿತು ಮಾಹಿತಿ ನೀಡುವ ಪೋಸ್ಟರ್‌ಗಳನ್ನು, ಫಲಕಗಳನ್ನು ಅಳವಡಿಸಬೇಕು.
  • ಕೋವಿಡ್ 19 ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆಡಿಯೋ ಮತ್ತು ವಿಡಿಯೋ ಕ್ಲಿಪ್‌ಗಳನ್ನು ಆಗಾಗ ಪ್ಲೇ ಮಾಡುತ್ತಿರಬೇಕು.
  • ಗ್ರಾಹಕರು ತಮ್ಮ ಪಾದರಕ್ಷೆಗಳನ್ನು ತಮ್ಮ ವಾಹನಗಳಲ್ಲಿ ಕಳಚುವುದು ಸೂಕ್ತ.
  • ಅಗತ್ಯವಿದ್ದರೆ ಪ್ರತಿ ವ್ಯಕ್ತಿ ಅಥವಾ ಕುಟುಂಬದವರು ಅವುಗಳನ್ನು ಪ್ರತ್ಯೇಕ ಸ್ಲಾಟ್‌ಗಳಲ್ಲಿ ಇರಿಸಬೇಕು.
  • ಪಾರ್ಕಿಂಗ್ ಸ್ಲಾಟ್‌ಗಳಲ್ಲಿ ಗುಂಪುಗಳನ್ನು ನಿಯಂತ್ರಿಸಬೇಕು ಮತ್ತು ಆವರಣದ ಹೊರಗೆ ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ಬಗ್ಗೆ ವ್ಯವಸ್ಥೆಗಳನ್ನು ಮಾಡಬೇಕು.
  • ಆವರಣದಲ್ಲಿರುವ ಅಥವಾ ಹೊರಗಿರುವ ಯಾವುದೇ ಅಂಗಡಿಗಳು, ಸ್ಟಾಲ್‌ಗಳು, ಕೆಫೆಟೇರಿಯಾಗಳು ಇತ್ಯಾದಿ ಎಲ್ಲಾ ಸಮಯಗಳಲ್ಲೂ ಸುರಕ್ಷಿತ ಅಂತರಗಳನ್ನು ಪಾಲಿಸಲಾಗುತ್ತಿದೆಯೇ ಎಂದು ನೋಡಿಕೊಳ್ಳಬೇಕು.
  • ಕ್ಯೂಗಳನ್ನು ನಿರ್ವಹಿಸಲು ಮತ್ತು ಸುರಕ್ಷಿತ ಅಂತರಗಳನ್ನು ಪಾಲಿಸುವುದಕ್ಕಾಗಿ ಸೂಕ್ತ ಅಂತರದ ಮಾರ್ಕಿಂಗ್‌ಗಳನ್ನು ಮಾಡಬಹುದು.
  • ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ವ್ಯವಸ್ಥೆ ಮಾಡಬೇಕು.
  • ಪ್ರವೇಶಕ್ಕಾಗಿ ಕ್ಯೂಗಳಲ್ಲಿ ನಿಲ್ಲುವಾಗ ಕನಿಷ್ಠ 6 ಅಡಿ ಸುರಕ್ಷಿತ ಅಂತರವನ್ನು ಪಾಲಿಸಬೇಕು.
  • ಆವರಣ ಪ್ರವೇಶಿಸುವುದಕ್ಕೆ ಮೊದಲು ಜನರು ಸಾಬೂನು ಮತ್ತು ನೀರು ಬಳಸಿ ತಮ್ಮ ಕೈ ಮತ್ತು ಕಾಲುಗಳನ್ನು ತೊಳೆದುಕೊಳ್ಳಬೇಕು.
  • ಸುರಕ್ಷಿತ ಅಂತರ ನಿಯಮ ಪಾಲಿಸಿ ಆಸನದ ವ್ಯವಸ್ಥೆಗಳನ್ನು ಮಾಡಬೇಕು.
  • ಏರ್ ಕಂಡಿಶನಿಂಗ್ ಮತ್ತು ವೆಂಟಿಲೇಶನ್‌ಗಾಗಿ ಏರ್ ಕಂಡಿಶನ್ ಗಳಲ್ಲಿ 24-30 ಡಿಗ್ರಿ ಸೆಲ್ಸಿಯಸ್ ಗಳ ಸರಾಸರಿಯಲ್ಲಿ ತಾಪಮಾನವನ್ನು ನಿಗದಿಗೊಳಿಸಬೇಕು ಎನ್ನುವ ಸಿಪಿಡಬ್ಲ್ಯುಡಿ ಮಾರ್ಗಸೂಚಿಗಳನ್ನು ಪಾಲಿಸಬೇಕು.
  • ಶಾಪಿಂಗ್ ಮಾಲ್‌ಗಳಲ್ಲಿ ಎಲ್ಲಾ ಸಮಯಗಳಲ್ಲೂ ಫೇಸ್ ಮಾಸ್ಕ್ ಗಳನ್ನು ಬಳಸಬೇಕು
  • ಹೋಮ್ ಡೆಲಿವರಿ ಮಾಡಲು ಹೊರಡುವ ಮುನ್ನ ಸಿಬ್ಬಂದಿಯನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಬೇಕು
  • ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಗ್ರಾಹಕರು ಅಂಗಡಿಗಳ ಒಳಗಿರಲು ಅವಕಾಶ ನೀಡಬೇಕು
  • ಲಿಫ್ಟ್ ಗಳಲ್ಲಿ ಕಡಿಮೆ ಸಂಖ್ಯೆಯ ಜನರಿರಬೇಕು
  • ವಾಶ್ ರೂಮ್‌ಗಳನ್ನು ಸ್ವಚ್ಛಗೊಳಿಸುತ್ತಿರಬೇಕು
  • ಫುಡ್ ಕೋರ್ಟ್ ಮತ್ತು ರೆಸ್ಟಾರೆಂಟ್‌ಗಳಲ್ಲಿ 50 ಶೇಕಡಕ್ಕಿಂತ ಹೆಚ್ಚಿನ ಆಸನ ವ್ಯವಸ್ಥೆ ಮಾಡಬಾರದು
  • ಫುಡ್ ಕೋರ್ಟ್ ಸಿಬ್ಬಂದಿ ಮಾಸ್ಕ್ ಧರಿಸಿ, ಹ್ಯಾಂಡ್ ಗ್ಲೌಸ್‌ಗಳನ್ನು ಧರಿಸಬೇಕು

ಧಾರ್ಮಿಕ ಕೇಂದ್ರಗಳು:
  • ಪ್ರತಿಮೆಗಳು, ಮೂರ್ತಿಗಳು ಮತ್ತು ಪವಿತ್ರ ಗ್ರಂಥಗಳ್ನು ಮುಟ್ಟಬಾರದು
  • ಕೊರೋನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ರೆಕಾರ್ಡ್ ಮಾಡಿದ ಭಕ್ತಿಗೀತೆಗಳು, ಪ್ರಾರ್ಥನೆಗಳನ್ನು ಹಾಡಬೇಕು. ಒಟ್ಟಾಗಿ , ಗುಂಪಾಗಿ ಹಾಡುವುದಕ್ಕೆ ಅವಕಾಶವಿಲ್ಲ
  • ಸಾಮಾನ್ಯ ಪ್ರಾರ್ಥನೆಯ ಚಾಪೆಗಳನ್ನು ಬಳಸಲು ಅವಕಾಶವಿಲ್ಲ. ಪ್ರತಿಯೊಬ್ಬರು ಅವರದ್ದೇ ಆದ ಚಾಪೆಗಳನ್ನು ತರಬೇಕು.
  • ಪ್ರಸಾದ ವಿತರಣೆ, ಪವಿತ್ರ ನೀರು ಸಿಂಪಡಣೆಗೆ ಅವಕಾಶವಿಲ್ಲ
  • ಕಮ್ಯುನಿಟಿ ಕಿಚನ್‌ಗಳು, ಧಾರ್ಮಿಕ ಸ್ಥಳಗಳಲ್ಲಿ ಅನ್ನದಾನ ಇತ್ಯಾದಿಗಳ ವೇಳೆ ಆಹಾರ ತಯಾರಿಸುವಾಗ ಮತ್ತು ವಿತರಿಸುವಾಗ ಸುರಕ್ಷಿತ ಅಂತರ ನಿಯಮಗಳನ್ನು ಪಾಲಿಸಬೇಕು
  • ಆವರಣದ ನೆಲವನ್ನು ಹಲವು ಬಾರಿ ಸ್ವಚ್ಛಗೊಳಿಸಬೇಕು
  • ಆವರಣದಲ್ಲಿ ಯಾವುದಾದರೂ ಶಂಕಿತ, ದೃಢಪಟ್ಟ ಸೋಂಕು ಪ್ರಕರಣಗಳು ಕಂಡುಬಂದಲ್ಲಿ ಇತರರಿಗಿಂತ ದೂರವಿರುವ ಕೋಣೆಯೊಂದರಲ್ಲಿ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಇರಿಸಬೇಕು
  • ವೈದ್ಯರು ಪರೀಕ್ಷೆ ನಡೆಸುವವರಿಗೆ ಆ ವ್ಯಕ್ತಿಗೆ ಮಾಸ್ಕ್ ಗಳನ್ನು ನೀಡಬೇಕು
  • ಸ್ಥಳೀಯ ವೈದ್ಯಕೀಯ ಅಧಿಕಾರಿಗಳಿಗೆ, ರಾಜ್ಯ ಅಥವಾ ಜಿಲ್ಲಾ ಹೆಲ್ಪ್ ಲೈನ್ ಗಳಿಗೆ ತಕ್ಷಣ ಕರೆ ಮಾಡಬೇಕು
  • ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್
  • ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದಕ್ಕೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ

ಹೊಟೇಲ್‌ಗಳಿಗೆ
  • ಪ್ರವೇಶ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇರಬೇಕು
  • ಯಾವುದೇ ಲಕ್ಷಣಗಳನ್ನು ಹೊಂದಿಲ್ಲದ ಸಿಬ್ಬಂದಿ ಮತ್ತು ಗ್ರಾಹಕರಿಗೆ ಮಾತ್ರ ಅವಕಾಶ
  • ಎಲ್ಲಾ ಸಿಬ್ಬಂದಿ ಮತ್ತು ಅತಿಥಿಗಳು ಮಾಸ್ಕ್ ಧರಿಸಬೇಕು
  • ಸುರಕ್ಷಿತ ಅಂತರ ನಿಯಮ ಪಾಲನೆಗಾಗಿ ಸಾಕಷ್ಟು ಜನರನ್ನು ನೇಮಿಸಬೇಕು
  • ಸಿಬ್ಬಂದಿಗಳು ಗ್ಲೌಸ್ ಧರಿಸಬೇಕು
  • ಹಿರಿಯ ಸಿಬ್ಬಂದಿ, ಗರ್ಭಿಣಿ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸಿಬ್ಬಂದಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು
  • ಅವರು ಸಾರ್ವಜನಿಕವಾಗಿ ನೇರ ಸಂಪರ್ಕದಲ್ಲಿರುವ ಯಾವುದೇ ಕೆಲಸಗಳನ್ನು ಮಾಡಬಾರದು
  • ರೆಸ್ಟೋರೆಂಟ್‌ಗಳು ಪಾರ್ಸಲ್ ಸರ್ವಿಸ್‌ಗಳಿಗೆ ಆದ್ಯತೆ ನೀಡಬೇಕು. ಫುಡ್ ಡೆಲಿವರಿ ಸಿಬ್ಬಂದಿ ಗ್ರಾಹಕರ ಮನೆ ಬಾಗಿಲುಗಳಲ್ಲಿ ಪ್ಯಾಕೆಟ್‌ಗಳನ್ನು ಇರಿಸಬೇಕು. ನೇರವಾಗಿ ಗ್ರಾಹಕರ ಕೈಗೆ ಆಹಾರದ ಪ್ಯಾಕೇಟ್‌ಗಳನ್ನು ನೀಡಬೇಡಿ
  • ಹೋಮ್ ಡೆಲಿವರಿಗೂ ಮುನ್ನ ಡೆಲಿವರಿ ಸಿಬ್ಬಂದಿಯ ಥರ್ಮಲ್ ಸ್ಕ್ರೀನಿಂಗ್
  • ಶಾಪಿಂಗ್ ಮಾಲ್‌ಗಳಿಗೆ ಸೂಚಿಸಲಾದ ಸುರಕ್ಷೆಗೆ ಸಂಬಂಧಿಸಿದ ಇತರ ನಿಯಮಗಳನ್ನು ಧಾರ್ಮಿಕ ಕೇಂದ್ರಗಳು, ಹೊಟೇಲ್‌ಗಳು, ರೆಸ್ಟೋರೆಂಟ್‌ಗಳೂ ಪಾಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.