HomePage_Banner
HomePage_Banner
HomePage_Banner
HomePage_Banner

ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಕಾರ್ಯಾಚರಿಸಲಿರುವ ಪೌರ ರಕ್ಷಣಾ ಪಡೆ ಅಸ್ಥಿತ್ವಕ್ಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಂತ್ರಸ್ಥರ ರಕ್ಷಣೆ, ಬೆಂಕಿ ಅವಘಡದಂತ ಸಂದರ್ಭದಲ್ಲಿ ಜನರ ಪ್ರಾಣ, ಆಸ್ತಿ, ಪಾಸ್ತಿ ರಕ್ಷಣೆಗಾಗಿ ಕಾರ್ಯನಿರ್ವಹಿಸಲಿರುವ ಪೌರ ರಕ್ಷಣಾ ಪಡೆಯ ಅಸ್ಥಿತ್ವಕ್ಕೆ ಬಂದಿದ್ದು ಇದರ ಉದ್ಘಾಟನೆಯು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಿತು ಎಂದು ಪೌರ ರಕ್ಷಣಾ ವಿಭಾಗದ ಚೀಫ್ ವಾರ್ಡ್‌ನ ಡಾ|ಮುರಳಿಕೃಷ್ಣ ಚೂಂತಾರು ಹೇಳಿದರು.

ಜೂ.5ರಂದು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೌರ ರಕ್ಷಣಾ ತಂಡವನ್ನು ನಿಯೋಜಿಸಿ ಅವರಿಗೆ ಸೂಕ್ತ ತರಬೇತಿಯನ್ನು ನೀಡಲಾಗುತ್ತದೆ. ಜಿಲ್ಲೆಯಲ್ಲಿ ಅವಘಡಗಳು ಸಂಭವಿಸಿದಾಗ ಜನರ, ಆಸ್ಥಿಪಾಸ್ತಿ ರಕ್ಷಣೆಗಾಗಿ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತದೆ. ಪೌರ ರಕ್ಷಣಾ ಪಡೆಯು ಗೃಹ ರಕ್ಷಕ, ಪೌರ ರಕ್ಷಣೆ ಹಾಗೂ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆಯಡಿಯಲ್ಲಿ ಪೌರ ರಕ್ಷಣಾ ಪಡೆಯು ಕಾರ್ಯನಿರ್ವಹಿಸಲಿದೆ. ಬೆಂಗಳೂರು, ರಾಯಚೂರಿನ ಶಕ್ತಿನಗರ ಹಾಗೂ ಕಾರವಾರದ ಕೈಗಾದಲ್ಲಿ ಮಾತ್ರ ಪೌರ ರಕ್ಷಣಾ ಪಡೆಯು ಈತನಕ ಕಾರ್ಯನಿರ್ವಹಿಸುತ್ತಿತ್ತು. ಮುಂದೆ ದಕ್ಷಿಣ ಕನ್ನಡ ಜಿಲ್ಲೆ ಸಹಿತ ದಾರವಾಡ, ಬೆಳಗಾವಿಯಲ್ಲಿ ಕಾರ್ಯಾಚರಿಸಲು ಪೊಲೀಸ್ ಮಹಾನಿರ್ದೇಶಕರು ಮತ್ತು ಗೃಹರಕ್ಷಕ ದಳದ ಮಹಾ ಸಮಾದೇಷ್ಟರು ಹಾಗೂ ಪೌರ ರಕ್ಷಣೆ ನಿರ್ದೇಶಕರು ಆದೇಶ ನೀಡಿರುತ್ತಾರೆ.

ತಾಲೂಕು ಕೇಂದ್ರ ಹಾಗೂ ಜನ ಸಂಖ್ಯೆ ಅಧಿಕವಿರುವ ಪ್ರದೇಶಗಳಲ್ಲಿ ಪೌರ ರಕ್ಷಣಾ ಪಡೆಯನ್ನು ರಚಿಸಿಕೊಳ್ಳಲಾಗುವುದು. ಇದನ್ನು ಮುಂದೆ ಬೆಂಕಿ ಅವಘಡ ಹಾಗೂ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಜನರ ಪ್ರಾಣ ಹಾಗೂ ಆಸ್ತಿ ಪಾಸ್ತಿ ರಕ್ಷಣೆಗಾಗಿ ದೂರದ ಮಂಗಳೂರಿನಿಂದ ರಕ್ಷಣಾ ತಂಡವನ್ನು ಕರೆಸಿಕೊಳ್ಳುವ ಬದಲು ಸ್ಥಳಿಯವಾಗಿ ಪೌರ ರಕ್ಷಣಾ ಪಡೆಯನ್ನು ಬಳಸಿಕೊಳ್ಳಲಾಗುತ್ತದೆ. ಪುತ್ತೂರಿನಲ್ಲಿ ೧೦೦ ಮಂದಿಯ ರಕ್ಷಣಾ ಪಡೆಯನ್ನು ರಚಿಸಿಲಾಗುವುದು. ಜಿಲ್ಲೆಯಲ್ಲಿ ೧೦೦೦ ಮಂದಿಯ ಪೌರ ರಕ್ಷಣಾ ತಂಡವನ್ನು ರಚಿಸಿಕೊಳ್ಳಲಾಗುವುದು. ಪುತ್ತೂರಿನಲ್ಲಿ ಈಗಾಗಲೇ ೪೦ ಮಂದಿ ನೋಂದಾವಣೆ ಮಾಡಿಕೊಂಡಿರುತ್ತಾರೆ. ಆಯ್ಕೆಯಾದವರಿಗೆ ಬೆಂಕಿ ಅವಘಡ ಹಾಗೂ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಕಾರ್ಯಚರಿಸುವ ಕುರಿತು ಸೂಕ್ತ ತರಬೇತಿಯನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಏನಿದು ಪೌರರಕ್ಷಣಾ ಪಡೆ:
೧೯೬೮ರಲ್ಲಿ ಅಸ್ಥಿತ್ವಕ್ಕೆ ಬಂದ ಪೌರ ರಕ್ಷಣಾ ಪಡೆಯು ಮೊದಲು ಸೇನೆಯೊಂದಿಗೆ ಕಾರ್ಯನಿರ್ವಹಿಸಿತ್ತು. ೨೦೧೦ರಲ್ಲಿ ವಿಪತ್ತು ನಿರ್ವಹಣೆ ಘಟಕದ ಜತೆ ಸೇರಿಸಿ ಹೊಸ ಕಾನೂನು ಜಾರಿಗೊಳಿಸಲಾಗಿತ್ತು. ದೇಶದ ಒಟ್ಟು ಜನಸಂಖ್ಯೆ ಶೇ.೧ರಷ್ಟು ಪೌರ ರಕ್ಷಣೆ ಕಾರ್ಯಕರ್ತರು ಇರಬೇಕೆಂಬ ನಿಯಮವಿದೆ. ಪೌರ ರಕ್ಷಣಾ ಪಡೆಗೆ ಸೇರಲಿಚ್ಚಿಸುವವರು ಕನಿಷ್ಠ ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಹಾಗೂ ೧೦ರಿಂದ ೫೦ ವರ್ಷದೊಳಗಿನವರಾಗಿರಬೇಕು. ಆಸಕ್ತರು ಮಂಗಳೂರಿನ ಮೇರಿಹಿಲ್‌ನಲ್ಲಿರುವ ಜಿಲ್ಲಾಗೃಹರಕ್ಷಕ ದಳದ ಕಛೇರಿಯಿಂದ ಅರ್ಜಿಯನ್ನುಪಡೆದುಕೊಳ್ಳಬಹುದು ಪೌರ ರಕ್ಷಣಾ ವಿಭಾಗದ ಚೀಫ್ ವಾರ್ಡ್‌ನ ಡಾ|ಮುರಳಿಕೃಷ್ಣ ಚೂಂತಾರು ಹೇಳಿದರು.

ಸಮಾಜ ಸೇವೆಗೆ ಅವಕಾಶ:
ಗೃಹರಕ್ಷಕರಿಗೆ ನೀಡುವಂತೆ ಪ್ರಥಮ ಚಿಕಿತ್ಸೆ, ಬೆಂಕಿ ಅವಘಡ ತರಬೇತಿ, ನೆರೆ ಸಂತ್ರಸ್ಥರ ರಕ್ಷಣೆ ಮತ್ತು ಇತರ ತರಬೇತಿಗಳನ್ನು ಪೌರ ರಕ್ಷಣಾ ತಂಡಕ್ಕೆ ನೀಡಲಾಗುತ್ತದೆ. ಸಮಾಜ ಸೇವೆ ಮಾಡುವ ಅವಕಾಶ ಇದಾಗಿದ್ದು ಯಾವುದೇ ವೇತನ, ಗೌರವಧನ ಇರುವುದಿಲ್ಲ. ಆಯ್ಕೆಯಾದ ಪೌರ ರಕ್ಷಕರಿಗೆ ಹಳದಿ ಬಣ್ಣದ ಜಾಕೆಟ್ ಉಚಿತವಾಗಿ ನೀಡಲಾಗುತ್ತದೆ. ಗುರುತು ಚೀಟಿಯನ್ನು ನೀಡಲಾಗುತ್ತದೆ. ತುರ್ತು ಸಂದರ್ಭದಲ್ಲಿ ಪೌರ ರಕ್ಷಣೆ ಪಡೆಯ ಸೇವೆಯನ್ನು ಪಡೆಯಲಾಗುತ್ತದೆ. ಪುತ್ತೂರಿನಲ್ಲಿ ಈಗಾಗಲೇ ತಂಡದ ಉದ್ಘಾಟನೆ ನಡೆದಿದೆ. ಮುಂದೆ ಉಪ್ಪಿನಂಗಡಿ, ಕಡಬ, ನೆಲ್ಯಾಡಿ ಮೊದಲಾದ ಪ್ರದೇಶಗಳನ್ನು ರಕ್ಷಣಾ ಪಡೆಯನ್ನು ರಚಿಸಲಾಗುವುದು ಎಂದು ಡಾ|ಮುರಳಿಕೃಷ್ಣ ಚೂಂತಾರು ಹೇಳಿದರು.

ವಿವೇಕಾನಂದಲ್ಲಿ ಉದ್ಘಾಟನೆ:
ಪುತ್ತೂರಿನಲ್ಲಿ ಅಸ್ಥಿತ್ವಕ್ಕೆ ಬಂದಿರುವ ಪೌರ ರಕ್ಷಣಾ ಪಡೆಯ ಉದ್ಘಾಟನೆಯು ಜೂ.೫ರಂದು ನೆಹರು ನಗರದ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಿತು. ಡಿವೈಎಸ್‌ಪಿ ಡಿನಕರ ಶೆಟ್ಟಿ ಪೌರ ರಕ್ಷಣಾ ಪಡೆಯ ಪುತ್ತೂರು ಘಟಕವನ್ನು ಉದ್ಘಾಟಿಸಿದರು. ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಸಭೆಯ ಬಳಿಕ ತರಬೇತಿಯನ್ನು ನೀಡಲಾಯಿತು ಎಂದು ಪಾಲಿಟೆಕ್ನಿಕ್ ಕಾಲೇಜಿನ ಸಂಚಾಲಕ ಮಹಾದೇವ ಶಾಸ್ತ್ರಿ ಮಣಿಲ ಹೇಳಿದರು. ರೆಡ್‌ಕ್ರಾಸ್ ಪುತ್ತೂರು ಘಟಕದ ಅಧ್ಯಕ್ಷ ಆಸ್ಕರ್ ಆನಂದ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.