HomePage_Banner
HomePage_Banner
HomePage_Banner

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಕೇಂದ್ರ ಕಚೇರಿ, ಪುತ್ತೂರು ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ

Puttur_Advt_NewsUnder_1
Puttur_Advt_NewsUnder_1
  • ನಂಬಿಕೆ, ವಿಶ್ವಾಸಕ್ಕೆ ಮಾದರಿಯಾಗಿ ರಾಜ್ಯದ್ಯಾಂತ ಶಾಖೆ ಬೆಳೆಯಲಿ – ಶ್ರೀ ಧರ್ಮಪಾಲನಾಥ ಸ್ವಾಮೀಜಿ
  • ಆರ್ಥಿಕ ಡಿಸಿಪ್ಲೀನ್‌ನಿಂದ ಸಹಕಾರಿ ಸಂಘ ಬೆಳೆದಿದೆ – ಸಂಜೀವ ಮಠಂದೂರು
  • ಸಂಘ ಮಾನವೀಯ ಚಿಂತನೆಯನ್ನೊಳಗೊಂಡಿದೆ – ರಾಧಾಕೃಷ್ಣ ಬೋರ್ಕರ್
  • ಶೀಘ್ರದಲ್ಲಿ ಆಲಂಗಾರು ಶಾಖೆ ಉದ್ಘಾಟನೆ – ಚಿದಾನಂದ ಬೈಲಾಡಿ

ಪುತ್ತೂರು: ಕಳೆದ ೧೮ ವರ್ಷಗಳಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಕಟ್ಟಡದಲ್ಲಿ ವ್ಯವಹಾರ ನಡೆಸುತ್ತಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕೇಂದ್ರ ಕಚೇರಿ ಮತ್ತು ಪುತ್ತೂರು ಶಾಖೆಯು ಎಪಿಎಂಸಿ ರಸ್ತೆಯಲ್ಲಿನ ಮಾಣಾಯಾರ್ಚ್ ಸಂಕೀರ್ಣದಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಜೂ.5ರಂದು ಉದ್ಘಾಟನೆಗೊಂಡಿತು. ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಪ್ರಧಾನ ಕಚೇರಿಯನ್ನು, ಶಾಸಕ ಸಂಜೀವ ಮಠಂದೂರು ಶಾಖಾ ಕಚೇರಿಯನ್ನು ಉದ್ಘಾಟಿಸಿದರು. ಸರಕಾರದ ನಿಯಮದಂತೆ ಸಾಮಾಜಿಕ ಅಂತರ ಕಾಯ್ದು ಕೊಂಡು, ಮಾಸ್ಕ್ ಧರಿಸಿಯೇ ಸರಳ ರೀತಿಯಲ್ಲಿ ಕಾರ್ಯಕ್ರಮ ನಡೆಯಿತು.

ನಂಬಿಕೆ, ವಿಶ್ವಾಸಕ್ಕೆ ಮಾದರಿಯಾಗಿ ರಾಜ್ಯದ್ಯಾಂತ ಶಾಖೆ ಬೆಳೆಯಲಿ:
ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆದ ಸರಳ ಕಾರ್ಯಕ್ರಮದಲ್ಲಿ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಶ್ರದ್ಧೆ, ಪರಿಶ್ರಮ, ಉದ್ದೇಶ, ಗುರಿ, ಚಿಂತನೆ, ಕೈ, ಬಾಯಿ ಸ್ವಚ್ಛವಿದ್ದಾಗ ಸಂಘ ಹೆಮ್ಮರವಾಗಿ ಬೆಳೆಯಲು ಸಾಧ್ಯ. ಒಬ್ಬರಿಂದ ಸಂಸ್ಥೆ ಬೆಳೆಲು ಸಾಧ್ಯವಿಲ್ಲ. ಪ್ರೀತಿ, ನಂಬಿಕೆ, ವಿಶ್ವಾಸಕ್ಕೆ ಮಾದರಿಯಾಗಿ ಸಂಘವು ರಾಜ್ಯಾದ್ಯಂತ ಹಲವು ಶಾಖೆಗಳನ್ನು ತೆರೆಯಲಿ ಎಂದ ಅವರು ಅನುಕಂಪ ಮಾನವಿಯ ಚಿಂತನೆಯಲ್ಲಿ ನೊಂದು ಬೆಂದಂತಹ ಮಾನವೀಯ ವರ್ಗವನ್ನು ಮೇಲೆ ಎತ್ತಿದ್ದಾಗ ಅವರ ಪುಣ್ಯದ ಫಲವಾಗಿ ಇಂತಹ ಶಾಖೆಗಳು ನೂರಾರು ಬೆಳೆಯಲು ಸಾಧ್ಯ ಎಂದರು. ಕೃಷಿ ಸಂಸ್ಕೃತಿಯನ್ನು ಹೊಂದಿರುವ ಸಮುದಾಯವನ್ನು ಎಷ್ಟು ಒಪ್ಪಿ ಕೊಂಡು ಅಪ್ಪಿಕೊಳ್ಳುತ್ತವೆಯೋ ಅಲ್ಲಿಯ ತನಕ ಇಂತಹ ಸಹಕಾರಿ ಸಂಸ್ಥೆಗಳು ಉತ್ತರೋತ್ತರವಾಗಿ ಬೆಳೆಯುತ್ತದೆ. ಕೃಷಿ ಮತ್ತು ಋಷಿ ಸಂಸ್ಕೃತಿ ಎರಡೂ ಬಂದಾಗ ಸಹಕಾರಿ ಸಂಸ್ಕೃತಿ ಮೇಲೆ ಬರುತ್ತದೆ ಎಂದರು.

ಆರ್ಥಿಕ ಡಿಸಿಪ್ಲೀನ್‌ನಿಂದ ಸಹಕಾರಿ ಸಂಘ ಬೆಳೆದಿದೆ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಜನರಿಗೆ ಮೂಲಭೂತವಾಗಿ ಹಣದ ಸಮಸ್ಯೆ ಬಂದಾಗ ತಕ್ಷಣ ಸ್ಪಂಧನ ಕೊಡವ ಕೆಲಸ ಸಹಕಾರಿ ಸಂಘದಿಂದ ಆಗುತ್ತದೆ. ಅದಕ್ಕೆ ಪ್ರೇರಣೆಯಾಗಿ ದ.ಕ.ಜಿಲ್ಲೆ ಸಹಕಾರಿ ಕಾಶಿ ಆಗಿದೆ. ಮೊಳಹಳ್ಳಿ ಶಿವರಾಯರು ಸಹಕಾರಿ ಸಂಘದ ಪಿತಾಮಹ. ಅದೇ ರೀತಿ ಗೌಡ ಸಮುದಾಯಲ್ಲಿಯೂ ಸಹಕಾರ ಸಂಘದ ದುರೀಣರಾದ ಕೆಮ್ಮಾರ ಬಾಲಕೃಷ್ಣ ಗೌಡ, ಸಿ.ಪಿ.ಜಯರಾಮ ಗೌಡ, ಸೀತರಾಮ ಗೌಡ, ಬೊಮ್ಮೆಟ್ಟಿ ಜಗನ್ನಾಥ ಗೌಡರು ಮುಂದಿನ ಪೀಳಿಗೆಗೆ ಆದರ್ಶ ಪ್ರಾಯರಾಗಿದ್ದಾರೆ. ಯುವ ಸಮುದಾಯ ಉದ್ಯೋಗ ಅರಸಿ ವಲಸೆ ಹೋಗಿ ಯಾವುದೋ ಊರಿನಲ್ಲಿ ದುಡಿಯುವುದಕ್ಕಿಂತ ನಮ್ಮೂರಿನ ಜನರಿಗೆ ಒಂದಷ್ಟು ಇಂತಹ ಪತ್ತಿನ ಸಹಕಾರಿ ಸಂಘಗಳು ಆರಂಭವಾಗಿ ಒಂದಷ್ಟು ಜನರಿಗೆ ಉದ್ಯೋಗ ಕೊಡುವುದು ಮತ್ತು ಆರ್ಥಿಕತೆಗೂ ಕೊಡುಗೆಯನ್ನು ಕೊಡುವ ಕೆಲಸ ಆಗಬೇಕು. ದ.ಕ.ಜಿಲ್ಲೆಯಲ್ಲಿ ಈಗಾಗಲೇ ರಾಷ್ಟ್ರೀಕೃತ ಬ್ಯಾಂಕ್‌ನ ವ್ಯವಸ್ಥೆಗಿಂತ ಬಹಳ ಚೆನ್ನಾಗಿ ಸಹಕಾರಿ ಸಂಘಗಳು ನಡೆಯುತ್ತಿದೆ. ಇದಕ್ಕೆ ಕಾರಣ ಆರ್ಥಿಕ ಡಿಸಿಪ್ಲೀನ್, ನಂಬಿಕೆ ವಿಶ್ವಾಸ, ಗ್ರಾಹಕರ ಪ್ರೋತ್ಸಾಹ, ನೌಕರ ಸೇವಾ ಮನೋಭಾವನೆ ಎಂದು ಹೇಳಿದರು.

ಸಂಘ ಮಾನವೀಯ ಚಿಂತನೆಯನ್ನೊಳಗೊಂಡಿದೆ:
ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಮಾತನಾಡಿ ಸಂಘವು ಒಕ್ಕಲಿಗ ಸಮುದಾಯ ಪತಿನ ಸಹಕಾರಿ ಸಂಘವು ೧೮ ವರ್ಷದಲ್ಲಿ ೬ ಶಾಖೆಗಳನ್ನು ಮಡುವ ಮೂಲಕ ಒಂದಷ್ಟು ಮಾನವೀಯ ಚಿಂತನೆಯನ್ನೊಳಗೊಂಡಿರುವುದು ಉತ್ತಮ ಬೆಳವಣಿಗೆ. ಲಾಕ್‌ಡೌನ್ ಸಂದರ್ಭದಲ್ಲೂ ಸಾರ್ವಜನಿಕ ಬಂಧುಗಳಿಗೆ ಸಹಾಯ ಮಾಡಿದ ಗುಣ ಈ ಸಂಸ್ಥೆಯಲ್ಲಿದೆ. ಮುಂದಿನ ದಿನದಲ್ಲಿ ಇನ್ನಷ್ಟು ಸಂಸ್ಥೆಗಳು ಈ ಸಂಘದ ಮೂಲಕ ತೆರೆದು ಉದ್ಯೋಗ ಸೃಷ್ಟಿಯಾಗಲಿ ಎಂದು ಹೇಳಿದರು.

ಶೀಘ್ರದಲ್ಲಿ ಆಲಂಗಾರು ಶಾಖೆ ಉದ್ಘಾಟನೆ:
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ (ರಿ.) ಇದರ ಪ್ರಾಯೋಜಕತ್ವದಲ್ಲಿ ಪ್ರಾರಂಭಗೊಂಡ ೨೦೦೨ರಲ್ಲಿ ಇಡ್ಯಡ್ಕ ಮೋಹನ್ ಗೌಡ ಅವರ ನೇತೃತ್ವದಲ್ಲಿ ಸಮಾನ ಮನಸ್ಕರ ತಂಡ ಪ್ರವರ್ತಕರಾಗಿ ಶ್ರೀ ಮಹಾಲಿಂಗೇಶ್ವರ ದೇವಳದ ಸಭಾಭವನದ ಕಟ್ಟಡದಲ್ಲಿ ಪ್ರಾರಂಭಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಪುತ್ತೂರು, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ ಶಾಖೆಗಳಲ್ಲಿ ಸುಮಾರು ೫,೫೦೦ಕ್ಕಿಂತಲೂ ಮಿಕ್ಕಿ ಸದಸ್ಯರನ್ನು ಹೊಂದಿದ್ದು, ಕಳೆದ ಅವಧಿಯಲ್ಲಿ ರೂ. ೧೪೦ ಕೋಟಿಗಿಂತಲೂ ಮಿಕ್ಕಿ ವ್ಯವಹಾರಗಳನ್ನು ಮಾಡಿ ಸುಮಾರು ರೂ. ೬೦ಲಕ್ಷ ಲಾಭ ಪಡೆದಿದ್ದು ಇದೀಗ ಮುಂದೆ ಶೀಘ್ರದಲ್ಲಿ ಆಲಂಗಾರಿನಲ್ಲೂ ಶಾಖಾ ಕಚೇರಿ ಉದ್ಘಾಟನೆ ಗೊಳ್ಳಲಿದೆ ಎಂದು ಹೇಳಿದ ಅವರು ಪ್ರಧಾನ ಕಚೇರಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡರು ಶ್ರೀ ಮಹಾಲಿಂಗೇಶ್ವರ ದೇವಳದ ಸಭಾ ಭವನದಲ್ಲಿ ಪ್ರಾರಂಭಗೊಂಡ ವ್ಯವಹಾರವು ಈ ಹಿಂದಿನಿಂತೆ ಅದೇ ಕಟ್ಟಡದಲ್ಲಿ ಮುಂದುವರಿಯಲಿದ್ದು, ಅಲ್ಲಿ ಎಲ್ಲಾ ಸೇವೆಗಳು ಕೂಡಾ ಲಭ್ಯವಿರುತ್ತದೆ ಎಂದರು.

ಲಕ್ಷ್ಮೀಪೂಜೆ, ಗಣಪತಿ ಹೋಮ:
ನೂತನ ಕಟ್ಟಡದಲ್ಲಿ ಬೆಳಿಗ್ಗೆ ಲಕ್ಷ್ಮೀಪೂಜೆ ಮತ್ತು ಗಣಪತಿ ಪೂಜೆ ನಡೆಯಿತು. ವೇ ಮೂ ಹರೀಶ್ ಭಟ್ ವೈದಿಕ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ದಂಪತಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಶಿವರಾಮ ಹೆಚ್ ಡಿ, ಉಪಾಧ್ಯಕ್ಷ ವಿಶ್ವನಾಥ ಗೌಡ, ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಸ್ಥಾಪಕ ಅಧ್ಯಕ್ಷ ಪಿ.ಸಿ.ಜಯರಾಮ, ನಿವೃತ್ತ ಸುಪರಿಡೆಂಟ್ ಆಫ್ ಪೊಲೀಸ್ ರಾಮ್‌ದಾಸ್ ಗೌಡ, ಪ್ರಗತಿಪರ ಕೃಷಿಕ ಚಂದ್ರಕಲಾ ಸಿ.ಪಿ.ಜಯರಾಂ ಅರುವಗುತ್ತು, ಕಟ್ಟಡದ ಮಾಲಕ ಜಯರಾಮ ಮಣಾಯಿ, ಜಿ.ಪಂ ಸದಸ್ಯೆ ಆಶಾ ತಿಮ್ಮಪ್ಪ ಗೌಡ, ಒಕ್ಕಲಿಗ ಗೌಡ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ, ಸಂಘದ ಖಜಾಂಜಿ ಸುರೇಶ್ ಗೌಡ ಕಲ್ಲಾರೆ, ಒಕ್ಕಲಿಗ ಗೌಡ ಸಮುದಾಯ ಭವನ ಉಸ್ತುವಾರಿ ಸಮಿತಿ ಅಧ್ಯಕ್ಷ ಪ್ರೇಮಾನಂದ, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಧಾಕೃಷ್ಣ ನಂದಿಲ. ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಪದಾಧಿಕಾರಿಗಳಾದ ಶೋಭಾ ಶಿವಾನಂದ್, ಪ್ರತಿಭಾ, ವಿದ್ಯಾ ಲಿಂಗಪ್ಪ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಗೌರವಾಧ್ಯಕ್ಷ ಎ.ವಿ.ನಾರಾಯಣ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪ್ರಮೋದ್, ಪುತ್ತೂರು ವಲಯ ಅರಣ್ಯಾಧಿಕಾರಿ ಮೋಹನ್, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ, ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಶಿವರಾಮ ಗೌಡ ಇಡ್ಯಪೆ, ಶ್ರೀ ನಾಗೇಶ್ ನಳಿಯಾರು, ವೆಂಕಟ್ರಮಣ ಗೌಡ ಕರೆಂಕಿ, ಸಾಂತಪ್ಪ ಗೌಡ ಪಿಜಕ್ಕಳ, ಜಿನ್ನಪ್ಪ ಗೌಡ ಮಳುವೇಲು, ಮಂಜುನಾಥ ಎನ್.ಎಸ್, ನೇತ್ರಾವತಿ ಕೆ.ಪಿ.ಗೌಡ, ರೇಖಾ ರಾಘವ ಗೌಡ, ಈಶ್ವರ ಗೌಡ ಪಜ್ಜಡ್ಕ, ಪುತ್ತೂರು ಶಾಖೆಯ ಸಲಹಾ ಸಮಿತಿ ಸದಸ್ಯರಾದ ರವಿ ಮುಂಗ್ಲಿಮನೆ, ಶ್ರೀಧರ ಗೌಡ ಕಣಜಾಲು, ಲಿಂಗಪ್ಪ ಗೌಡ ತೆಂಕಿಲ, ಪ್ರವೀಣ್ ಕುಂಟ್ಯಾನ, ಗೌರಿ ಬನ್ನೂರು, ಬಾಬು ಗೌಡ ಭಂಡಾರದ ಮನೆ, ಪ್ರಬಂಧಕರಾದ ಕಡಬ ಶಾಖೆಯ ಧರ್ಮರಾಜ್ ಕೆ, ಉಪ್ಪಿನಂಗಡಿ ಶಾಖೆಯ ರೇವತಿ, ನೆಲ್ಯಾಡಿ ಶಾಖೆಯ ಶಿವಪ್ರಸಾದ್, ಕುಂಬ್ರ ಶಾಖೆಯ ದಿನೇಶ್ ಪಿ, ಪುತ್ತೂರು ಶಾಖೆಯ ತೇಜಸ್ವಿನಿ ಹಾಗೂ ಶೀಘ್ರದಲ್ಲಿ ಪ್ರಾರಂಭಗೊಳ್ಳಲಿರುವ ಆಲಂಕಾರು ಶಾಖೆಯ ವಿನೋದ್‌ರಾಜ್ ಎಸ್ ಸೇರಿದಂತೆ ವಿವಿಧ ಶಾಖೆಗಳ ಸಿಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ. ವಂದಿಸಿದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ನೂತನ ಕಚೇರಿಯಲ್ಲಿ ಸೌಲಭ್ಯಗಳು…….

  • ವಿಶಾಲವಾದ ಪಾರ್ಕಿಂಗ್
  • ಹವಾನಿಯಂತ್ರಿತ ಕಚೇರಿ
  • ಎಲ್ಲಾ ಶಾಖೆಗಳ ಸಿ.ಸಿ.ಕ್ಯಾಮರಗಳು ಪ್ರಧಾನ ಕಚೇರಿಗೆ ಲಿಂಕ್
  • ಪ್ರಧಾನ ಕಚೇರಿಯಿಂದಲೇ ಶಾಖಾ ಕಚೇರಿಯ ವ್ಯವಹಾರ
  • ಪ್ರತಿ ಶಾಖೆಯ ದಾಖಲೆ ಪತ್ರಗಳ ಭದ್ರತೆಗಾಗಿ ಪ್ರತ್ಯೇಕ ವ್ಯವಸ್ಥೆ
  • ಶಾಖೆಗಳ ಚಟುವಟಿಕೆಗೆ ಸಂಬಂಧಿಸಿ ಶೀಘ್ರದಲ್ಲೇ ಪ್ರಧಾನ ಕಚೇರಿಯಿಂದ ಎಲ್ಲಾ ಶಾಖೆಗಳಿಗೆ ವಿಡಿಯೋಕಾನ್ಫರೆನ್ಸ್ ಆರಂಭ

ಸಂಸ್ಥೆಯ ಸೇವೆ
ಸಂಸ್ಥೆಯಲ್ಲಿ ಆಸ್ತಿ ಖರೀದಿ, ಆಸ್ತಿ ಅಡವು, ಮನೆ ನಿರ್ಮಾಣ, ವಾಹನ ಸಾಲ, ವ್ಯಾಪಾರ ಸಾಲ, ಚಿನ್ನಾಭರಣ ಅಡವು, ವೇತನ ಆಧಾರಿತ ಸಾಲ ಹೀಗೆ ವಿವಿಧ ರೀತಿಯ ಸಾಲಗಳನ್ನು ಆಕರ್ಷಕ ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದು, ಠೇವಣಿಗಳಿಗೆ ಕೂಡಾ ಆಕರ್ಷಕ ಬಡ್ಡಿಯನ್ನು ನೀಡಲಾಗುತ್ತದೆ – ಚಿದಾನಂದ ಬೈಲಾಡಿ ಅಧ್ಯಕ್ಷರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘ

ಸಂಘದಿಂದ ಕಣ್ಣೀರು ಒರೆಸುವ ಕಾರ್ಯ
ಸ್ವಂತ ಕಟ್ಟಡದಲ್ಲಿ ಅದ್ದೂರಿಯಿಂದ ಕಾರ್ಯಕ್ರಮ ಮಾಡಬೇಕೆಂಬ ಸಂಕಲ್ಪ ಇತ್ತಾದರೂ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಕಂಡರಿಯದ ಕೇಳರಿಯದ ಮಹಾಮಾರಿ ಕೊರೋನಾದಿಂದಾಗಿ ಎಲ್ಲರ ಬದುಕನ್ನು ವಿಸ್ಮಯವನ್ನಾಗಿ ಮಾಡಿದ ಈ ಕಾಲಗಟ್ಟದಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿ ಯಾವುದೋ ರೀತಿಯಲ್ಲಿ ನೊಂದು ಬೆಂದವರ ಕಣ್ಣೀರನ್ನು ಒರೆಸುವ ಕೆಲಸ ಸಂಘದ ಮೂಲಕ ಆಗಿದೆ – ಶ್ರೀ ಧರ್ಮಪಾಲನಾಥ ಸ್ವಾಮೀಜಿ ಶ್ರೀ ಆದಿಚುಂಚನಗಿರಿ ಶಾಖಾ ಮಠ ಮಂಗಳೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.