Home_Page_Advt
Home_Page_Advt
Home_Page_Advt

ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ವಿಶ್ವಪರಿಸರ ದಿನ

Puttur_Advt_NewsUnder_1
Puttur_Advt_NewsUnder_1
  • ಖಾಯಿಲೆಗಳಿಗೆ ಪ್ರಕೃತಿಯೇ ಪರಿಹಾರ – ಸಂಜೀವ ಮಠಂದೂರು

ಪುತ್ತೂರು: ಹೊಸ ಖಾಯಿಲೆಗಳು ಬರುತ್ತಿವೆ. ಆದರೆ ಖಾಯಿಲೆಗಳಿಗೆ ಪ್ರಕೃತಿಯೇ ಪರಿಹಾರ ಎಂದು ನಾವು ಅರ್ಥೈಸಬೇಕು. ಈ ನಿಟ್ಟಿನಲ್ಲಿ ಇವತ್ತು ಶುದ್ದ ಗಾಳಿ, ಶುದ್ದ ನೀರು, ಶುದ್ದ ಆಹಾರಕ್ಕಾಗಿ ಒಂದಷ್ಟು ನಾಗರಿಕ ಸಮಜ ಪರಿತಪಿಸುತ್ತಿದೆ. ಹಾಗಾಗಿ ನಾವು ಮತ್ತೊಮ್ಮೆ ಪರಿಸರದ ಜೊತೆ ನಮ್ಮ ಜೀವನ ಮಾಡಿಕೊಳ್ಳಬೇಕೆಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ವಿಶ್ವಪರಿಸರ ದಿನದ ಅಂಗವಾಗಿ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯದ ಸಹಯೋಗದಲ್ಲಿ ಜೂ. ೫ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ೧ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಪರಿಸರಕ್ಕೆ ಅತೀ ಹತ್ತಿರವಾದ ಸ್ವಾಭಾವಿಕವಾಗಿ ಬೆಳೆಯುವ ಕಾಟು ಮಾವಿನ ಗಿಡವನ್ನು ನೆಟ್ಟು ಅದಕ್ಕೆ ನೀರೆರೆದ ಅವರು ಇವತ್ತು ಪರಿಸರವನ್ನು ಕಾಯ್ದುಟ್ಟು ಕೊಂಡು ನೆಮ್ಮದಿ ಸಮೃದ್ಧಿಯಾಗಿ ಬದುಕ ಬೇಕಾದರೆ ಪರಿಸರ ಪರಿಸರವಾಗಿಯೇ ಉಳಿಯಬೇಕು ಎನ್ನುವ ದೃಷ್ಟಿಯಿಂದ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಹೊಸ ಹೊಸ ರೋಗರುಜಿನಗಳಿಂದಾಗಿ ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಇತ್ತೀಚೆಗೆ ಜಾಸ್ತಿಯಾಗಿದೆ.

ಸಾಲುಮರ ತಿಮ್ಮಕ್ಕ ಕೂಡ ನಾನು ಅಶೋಕ ಚಕ್ರವರ್ತಿಗಿಂತ ಕಡಿಮೆ ಇಲ್ಲ ಎಂದ ತೋರಿಸಿಕೊಟ್ಟಿರುವುದು ನಮಗೆ ಪ್ರೇರಣೆ. ಹೊಸ ಖಾಯಿಲೆಗಳು ಬರುವಾಗ ಆ ಖಾಯಿಲೆಗಳಿಗೆ ಪ್ರಕೃತಿಯೇ ಪರಿಹಾರ. ಹಾಗಾಗಿ ಶುದ್ದ ಗಾಳಿ, ಶುದ್ದ ನೀರು, ಆಹಾರಕ್ಕಾಗಿ ಒಂದಷ್ಟು ನಾಗರಿಕ ಸಮಾಜ ಪರಿತಪಿಸುತ್ತಿದೆ. ಪೇಟೆ ಪಟ್ಟಣದಲ್ಲೂ ಹಳ್ಳಿಯ ಪರಿಸರ ಕಾಣುವ ಸಂದರ್ಭ ಇನ್ನು ದೂರ ಇಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಪುತ್ತೂರು ವಲಯ ಅರಣ್ಯಾಧಿಕಾರಿ ಮೋಹನ್, ಸಾಮಾಜಿಕ ಅರಣ್ಯಾಧಿಕಾರಿ ವಿದ್ಯಾರಾಣಿ, ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಡಾ. ಅಮೃತ, ನ್ಯಾಯವಾದಿ ಶ್ರೀಗಿರೀಶ್ ಮಲ್ಲಿ, ಪ್ರಸನ್ನ ಕುಮಾರ್, ರಾಮಚಂದ್ರ, ಹರೀಶ್ ಪೈ, ಕಿರಣ್ ಶಂಕರ್ ಮಲ್ಯ, ದೇವಳದ ಸಿಬ್ಬಂದಿಗಳು ಮತ್ತು ಕರಸೇವಕರು ಉಪಸ್ಥಿತರಿದ್ದರು. ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.