HomePage_Banner
HomePage_Banner
HomePage_Banner

ಕ್ಯಾಂಪ್ಕೋ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರ್ ವತಿಯಿಂದ ವಿಶ್ವ ಪರಿಸರ ದಿನ | 600 ಉದ್ಯೋಗಿಗಳ ಮನೆಯಲ್ಲಿ ಗಿಡಗಳನ್ನು ನೆಡುವ ತೀರ್ಮಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಕೆಮ್ಮಿಂಜೆ, ಕ್ಯಾಂಪ್ಕೋ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರ್ ವತಿಯಿಂದ ಜೂ.೫ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಡಿ.ಜಿ.ಎಂ ಪ್ರಾನ್ಸಿಸ್ ಡಿಸೋಜ ಹಾಗೂ ಎ.ಜಿ.ಎಂ ಅವಿನಾಶ್ ರೈ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ 600 ಕ್ಯಾಂಪ್ಕೋ ಉದ್ಯೋಗಿಗಳ ಮನೆಯಲ್ಲಿ ಗಿಡಗಳನ್ನು ನೆಡುವುದೆಂದು ತೀರ್ಮಾನಿಸಲಾಯಿತು.

 

ಈ ದಿನಾಚರಣೆಯ ಮೂಲಕ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಹೆಚ್ಚಿಸಲು ಮತ್ತು ಪರಿಸರ ಸಂರಕ್ಷಣೆಗಾಗಿ ಕ್ರಮ ತೆಗೆದುಕೊಳ್ಳಲು ವಿಶ್ವದಾದ್ಯಂತ ಜನರನ್ನು ಪ್ರೋತ್ಸಾಹಿಸಲಾಗುತ್ತದೆ. ಈ ದಿನವನ್ನು ಈಗ ವಿಶ್ವದಾದ್ಯಂತ 100 ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತದೆ ಮತ್ತು ಭೂಮಿ ಮತ್ತು ಪರಿಸರವನ್ನು ನೋಡಿಕೊಳ್ಳುವ ಪ್ರಯತ್ನಕ್ಕಾಗಿ ಇದನ್ನು ಜನಸಾಮಾನ್ಯರ ದಿನವೆಂದೂ ಕರೆಯಲಾಗುತ್ತದೆ.

ಮನುಷ್ಯ ಇನ್ನಾದರೂ ಜಾಗೃತನಾಗಿ ಪರಿಸರ ಸಂರಕ್ಷಣೆಗಾಗಿ ಕ್ರಮ ಕೈಗೊಂಡು ಹಸಿರು ಕ್ರಾಂತಿ ಮಾಡಬೇಕಾಗಿದೆ ಎಂದು ಕ್ಯಾಂಪ್ಕೋ ಉದ್ಯೋಗಿಗಳ ಮನೆ ಮನೆಯಲ್ಲೂ ಗಿಡಗಳನ್ನು ನಡೆವ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರಿಯೇಷನ್ ಸೆಂಟರಿನ ಅಧ್ಯಕ್ಷರಾದ ಶ್ಯಾಮ್ ಪ್ರಸಾದ್ ಎಚ್, ಕಾರ್ಯದರ್ಶಿ ರಮೇಶ ರೈ ನೆಗಳಗುಳಿ ,ಕೋಶಾಧಿಕಾರಿ ಪ್ರಶಾಂತ್ ಭಟ್, ಜತೆ ಕಾರ್ಯದರ್ಶಿ ಜಗದೀಶ್,ಸದಸ್ಯರಾದ ಪ್ರಶಾಂತ್ ಡಿ.ಎಸ್,ಮಹೇಶ್ ಪ್ರಭು ಎನ್, ಹಾಗೂ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಅಧಿಕಾರಿಗಳು ಮತ್ತು ನೌಕರ ವೃಂದದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.