Breaking News

ಆನೆಮಜಲು ನೂತನ ನ್ಯಾಯಾಲಯ ಸಂರ್ಕೀಣದ ಆವರಣದಲ್ಲಿ ಔಷಧ ಸಸಿ ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
  • ಬದುಕಿಗೆ ಪರಿಸರ ಅಗತ್ಯ- ರುಡೋಲ್ಫ್ ಪಿರೇರಾ
  • ಪ್ರಕೃತಿ ಉಳಿಸುವ ಹೊಣೆ ನಮ್ಮದು – ಮನೋಹರ್ ಕೆ.ವಿ

ಪುತ್ತೂರು: ಬನ್ನೂರಿನ ಆನೆಮಜಲಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಹೊಸ ನ್ಯಾಯಾಲಯಗಳ ಕಟ್ಟಡದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ಔಷಧ ಸಸಿ ನೆಡುವ ಕಾರ್ಯಕ್ರಮ ಜೂ.೫ ರಂದು ಜಿಲ್ಲಾ ಕಾನೂ ಸೇವೆಗಳ ಪ್ರಾಧಿಕಾರ, ಪುತ್ತೂರು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಇದರ ಆಶ್ರಯದಲ್ಲಿ ನಡೆಯಿತು.

ಬದುಕಿಗೆ ಪರಿಸರ ಅಗತ್ಯ:
೫ ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರುಡೊಲ್ಪ್ ಪಿರೇರಾ ಅವರು ಔಷಧಿ ಸಸಿಯನ್ನು ನೆಡುವ ಮೂಲಕ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ನಮ್ಮ ಬದುಕಿಗೆ ಉತ್ತಮ ಪರಿಸರ ಅಗತ್ಯ. ಈ ನಿಟ್ಟಿನಲ್ಲಿ ಗಿಟ ನೆಟ್ಟು ಅದನ್ನು ಪೋಷಿಸಿ, ಬೆಳೆಸಿ ಪರಿಸರ ಉಳಿಸಿ. ಪ್ರಕೃತಿ ಇಲ್ಲವಾದರೆ ಬದುಕು ಇಲ್ಲದ್ದಂತೆ ಎಂದು ಹೇಳಿದರು.

ಪ್ರಕೃತಿ ಉಳಿಸುವ ಹೊಣೆ ನಮ್ಮದು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರು ಮಾತನಾಡಿ ವಿಶ್ವದಲ್ಲಿ ಪ್ರಕೃತಿಗೆ ಅಘಾತವಾದರೆ ಅದರಿಂದ ನಮಗೆ ತೊಂದರೆ ಸಹಜ. ಇಂತಹ ಸಂದರ್ಭದಲ್ಲಿ ಪ್ರಕೃತಿಯನ್ನು ಉಳಿಸುವ ಪ್ರಯತ್ನ ನಮ್ಮದಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಧೀಶ ಮಂಜುನಾಥ, ಹೆಚ್ಚುವರಿ ಹಿರಿಯ ವ್ಯವಹಾರಿ ನ್ಯಾಯಾಧೀಶೆ ಲತಾದೇವಿ, ಪ್ರಧಾನ ವ್ಯವಹಾರಿಕ ನ್ಯಾಯಧೀಶ ಪ್ರಕಾಶ್ ಪಿ.ಎಂ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಎ.ಉದಯಶಂಕರ ಶೆಟ್ಟಿ, ಸರಕಾರಿ ಅಭಿಯೋಜಕಿ ಕೃಷ್ಣವೇಣಿ ಎಂ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಸುಬ್ರಹ್ಮಣ್ಯ ರಾವ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ರಾಜರಾಂ, ಇಂಜಿನಿಯರ್ ಪ್ರಮೋದ್, ವಲಯ ಅರಣ್ಯಧಿಕಾರಿ ಮೋಹನ್ ಕುಮಾರ್ ಬಿ.ಜಿ., ವಕೀಲರ ಸಂಘದ ಉಪಾಧ್ಯಕ್ಷ ಸುರೇಶ್ ರೈ ಪಡ್ಡಂಬೈಲು, ಎನ್ ಆಸೀಪ್ ಮತ್ತಿತರರು ಉಪಸ್ಥಿತರಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಸುಬ್ರಹ್ಮಣ್ಯ ರಾವ್ ಸ್ವಾಗತಿಸಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಸ್ ಮಂಜುನಾಥ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.