HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಮೂಡಬಿದ್ರೆಯಲ್ಲಿ ಸ್ವರ್ಣೋದ್ಯಮಿಯಾಗಿದ್ದ ಮುರುಳ್ಯದ ಅಬ್ದುಲ್ ಲತೀಫ್ ಮುಲ್ಕಿಯಲ್ಲಿ ಕೊಲೆ

Puttur_Advt_NewsUnder_1
Puttur_Advt_NewsUnder_1

  • ಹಾಡಹಗಲೇ ದುಷ್ಕರ್ಮಿಗಳಿಂದ ನಡೆದ ಕೃತ್ಯ
  • ಮೃತರ ಮಾವ, ಬಾವನಿಗೂ ಮಾರಣಾಂತಿಕ ಹಲ್ಲೆ
  • ಸಮಹಾದಿ ಕುಕ್ಕಟ್ಟೆ ಪರಿಸರದಲ್ಲಿ ನೀರವ ಮೌನ

ನಿಗೂಢವಾಗಿದೆ ಕೊಲೆ ರಹಸ್ಯ…!

ತನ್ನ ಊರಾದ ಕುಕ್ಕೆಟ್ಟಿಯಲ್ಲಿ ಮತ್ತು ವ್ಯವಹಾರ ನಡೆಸುತ್ತಿದ್ದ ಮೂಡಬಿದಿರೆಯಲ್ಲಿ ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಿದ್ದರೆನ್ನಲಾದ ಅಬ್ದುಲ್ ಲತೀಫ್ ಅವರನ್ನು ಯಾಕೆ ಕೊಲೆ ಮಾಡಿದರು ಎನ್ನುವುದು ಮಾತ್ರ ನಿಗೂಢವಾಗಿದೆ.ಅಬ್ದುಲ್ ಲತೀಫ್ ಅವರ ಮಾವ ಮುನೀರ್ ಅವರ ಮೇಲಿನ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅವರನ್ನು ಹತ್ಯೆಗೈಯಲು ದುಷ್ಕರ್ಮಿಗಳು ಬಂದಾಗ ಅವರನು ತಡೆಯಲು ಅಬ್ದುಲ್ ಲತೀಫ್ ಹೋಗಿದ್ದು ಈ ವೇಳೆ ಲತೀಫ್ ಅವರಿಗೆ ಬಲವಾದ ಚೂರಿ ಇರಿತ ಉಂಟಾಗಿ ಮೃತಪಟ್ಟರು ಎನ್ನಲಾಗುತ್ತಿದೆಯಾದರೂ ಅದರ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.
ಅಬ್ದುಲ್ ಲತೀಫ್ ಅವರ ಮಾವನ ವ್ಯವಹಾರದ ದ್ವೇಷದಿಂದ ಇವರು ಕೊಲೆಯಾದರೆ..? ಅಥವಾ ಇನ್ಯಾವುದೋ ಪೂರ್ವ ದ್ವೇಷದಿಂದ ಅಬ್ದುಲ್ ಲತೀಫ್ ಅವರನ್ನು ಕೊಲೆ ನಡೆಸಿದರೇ ಅಥವಾ ಇವರಿಂದ ಹಣ ದೋಚುವ ಉzಶಕ್ಕೆ ದುಷ್ಕರ್ಮಿಗಳು ಕೊಲೆ ನಡೆಸಿದರೆ ಎನ್ನುವ ಸಂಶಯವೂ ಉಂಟಾಗಿದೆ.ಇನ್ನೊಂದು ಮೂಲದ ಪ್ರಕಾರ ಮುನೀರ್ ಅವರು ತನ್ನ ಪುತ್ರ ಹಾಗೂ ಅಳಿಯ ಅಬ್ದುಲ್ ಲತೀಫ್ ಅವರ ಜೊತೆ ಮೂಲ್ಕಿಯ ಬ್ಯಾಂಕ್‌ಗೆ ಹಣದ ವ್ಯವಹಾರಕ್ಕೆ ಬಂದಾಗ ಹಣದ ವಿಚಾರಕ್ಕೆ ಬ್ಯಾಂಕ್ ಬಳಿಯೇ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿರುವುದಾಗಿ ಹೇಳಲಾಗುತ್ತಿದೆ.

ಪುತ್ತೂರು: ಮೂಡಬಿದ್ರೆಯಲ್ಲಿ ಚಿನ್ನದ ಮಳಿಗೆ ಹೊಂದಿರುವ ಕಾಣಿಯೂರು ಸಮೀಪದ ಮುರುಳ್ಯ ಗ್ರಾಮದ ಯುವಕನನ್ನು ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಜೂ.೫ರಂದು ಮುಲ್ಕಿಯಲ್ಲಿ ನಡೆದಿದೆ.ಸುಳ್ಯ ತಾಲೂಕಿನ, ಕಾಣಿಯೂರು ಸಮೀಪದ ಮುರುಳ್ಯ ಗ್ರಾಮದ ಕುಕ್ಕಟ್ಟೆ ನಿವಾಸಿ ಸುಲೈಮಾನ್ ಅವರ ಮಗ ಅಬ್ದುಲ್ ಲತೀಫ್ ಕೊಲೆಯಾದ ಯುವಕ.
ಮೂಡಬಿದಿರೆಯ ಅಮರಶ್ರೀ ಚಿತ್ರಮಂದಿರದ ಬಳಿ ಅಲೈನ್ ಗೋಲ್ಡ್ ಎಂಬ ಹೆಸರಿನ ಚಿನ್ನದ ಮಳಿಗೆ ನಡೆಸುತ್ತಿದ್ದ ಯುವ ಉದ್ಯಮಿ ಅಬ್ದುಲ್ ಲತೀಫ್ ಅವರು ತನ್ನ ಮಾವ ಮುನೀರ್ ಹಾಗೂ ಅವರ ಪುತ್ರ ಹಯಾತ್ ಎಂಬವರ ಜೊತೆ ಮುಲ್ಕಿ ವಿಜಯಾ ಬ್ಯಾಂಕ್ ಬಳಿ ಕಾರಿನಲ್ಲಿ ಬರುತ್ತಿದ್ದ ವೇಳೆ ಅಲ್ಲಿಗೆ ಬಂದ ಐದು ಮಂದಿ ದುಷ್ಕರ್ಮಿಗಳ ತಂಡ ಚಾಕು ಮತ್ತು ಇನ್ನಿತರ ಮಾರಕಾಯುಧಗಳಿಂದ ಮೂವರ ಮೇಲೆ ದಾಳಿ ನಡೆಸಿದ್ದಾರೆ.ಈ ವೇಳೆ ಮೂವರಿಗೂ ಮಾರಣಾಂತಿಕ ಹಲ್ಲೆಯಾಗಿದ್ದು ಕೂಡಲೇ ಅವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲು ಮಾಡಲಾತ್ತು, ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅಬ್ದುಲ್ ಲತೀಫ್ ಅವರು ಮೃತಪಟ್ಟರೆಂದು ತಿಳಿದು ಬಂದಿದೆ. ದುಷ್ಕರ್ಮಿಗಳ ತಂಡ ಮೂವರಿಗೂ ಏಕಾಏಕಿ ದಾಳಿ ನಡೆಸಲು ಕಾರಣವೇನು ಎನ್ನುವುದು ಮಾತ್ರ ತಿಳಿದು ಬಂದಿಲ್ಲ. ಅಬ್ದುಲ್ ಲತೀಫ್ ಅವರ ಪತ್ನಿ ಮುಬೀನಾ ಅವರು ಮೂಡಬಿದಿರೆಯಲ್ಲಿ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಮೃತರು ತಂದೆ, ತಾಯಿ ಬೀಫಾತಿಮ, ಪತ್ನಿ ಮುಬೀನಾ, 7 ತಿಂಗಳು ಪ್ರಾಯದ ಪುತ್ರಿ ಹಾಗೂ ಸಹೋದರರಾದ ಸಮೀರ್, ರಿಯಾಝ, ಸಿಯಾಬ್ ಹಾಗೂ ಸಹೋದರಿ ಸಕೀನಾ ಅವರನ್ನು ಅಗಲಿದ್ದಾರೆ.
ಸಮಹಾದಿ ಕುಕ್ಕಟ್ಟೆ ಪರಿಸರದಲ್ಲಿ ನೀರವ ಮೌನ: ಅಬ್ದುಲ್ ಲತೀಫ್ ಅವರ ಕೊಲೆಯಿಂದ ಮುರುಳ್ಯ ಗ್ರಾಮದ ಸಮಹಾದಿ ಕುಕ್ಕಟೆ ಪರಿಸರದಲ್ಲಿ ಜೂ.5ರಂದು ಸಂಜೆಯಿಂದ ಸ್ಮಶಾನ ಮೌನ ಆವರಿಸಿದೆ. ಅವರ ಗೆಳೆಯರು ಮತ್ತು ಕುಟುಂಬ ವರ್ಗ ಶೋಕ ಸಾಗರದಲ್ಲಿ ಮುಳುಗಿದೆ.ಸಣ್ಣ ಪ್ರಾಯದಲ್ಲೇ ಚಿನ್ನದ ಕ್ಷೇತ್ರ ಆಯ್ದುಕೊಂಡಿದ್ದ ಅಬ್ದುಲ್ ಲತೀಫ್ ಅವರು ಮಂಗಳೂರು ಹಾಗೂ ಇನ್ನಿತರ ಕಡೆಗಳ ಚಿನ್ನದ ಮಳಿಗೆಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ನಂತರ ಮೂಡಬಿದಿರೆಯಲ್ಲಿ ಚಿನ್ನದ ಮಳಿಗೆ ತೆರೆದಿದ್ದ ಅವರು ಕೆಲವು ವರ್ಷಗಳ ಹಿಂದೆಯಷ್ಟೇ ಮುಬೀನಾ ಅವರನ್ನು ವಿವಾಹವಾಗಿದ್ದರು. ವಾರಕ್ಕೊಮ್ಮೆ ತನ್ನ ಊರಾದ ಕುಕ್ಕೆಟ್ಟಿಗೆ ಬಂದು ಹೋಗುತ್ತಿದ್ದ ಅವರು ಸ್ಥಳೀಯವಾಗಿ `ಅದ್ದು’ ಎಂದೇ ಚಿರಪರಿಚಿತರಾಗಿದ್ದರು.
ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದರು: ಕೊಲೆಯಾದ ಅಬ್ದುಲ್ ಲತೀಫ್ ಅವರು ಬಡವರಿಗೆ ಹಾಗೂ ಅಶಕ್ತರಿಗೆ ನೆರವು ನೀಡುತ್ತಿದ್ದರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಂಡಿದ್ದರು ಎಂದು ಅವರು ಗೆಳೆಯರು ತಿಳಿಸಿದ್ದಾರೆ.
ಬೈತ್ತಡ್ಕದಲ್ಲಿ ದಫನ: ಅಬ್ದುಲ್ ಲತೀಫ್ ಅವರ ಜಮಾಅತ್ ಬೈತಡ್ಕ ಮಸೀದಿಯಾಗಿದ್ದು ಈ ಹಿನ್ನೆಲೆಯಲ್ಲಿ ಜೂ.೫ರಂದು ರಾತ್ರಿ ವೇಳೆ ಕುಕ್ಕಟ್ಟೆ ಮನೆಗೆ ಮೃತದೇಹವನ್ನು ತಂದು ಬಳಿಕ ಬೈತ್ತಡ್ಕ ಮಸೀದಿಯಲ್ಲಿ ಮಯ್ಯತ್ ನಮಾಜ್ ನಿರ್ವಹಿಸಿ ಮಸೀದಿಯ ಖಬರ್ ಸ್ಥಾನದಲ್ಲಿ ದಫನ ಮಾಡುವುದಾಗಿ ತಿಳಿದು ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.