HomePage_Banner
HomePage_Banner
HomePage_Banner

ಉಪ್ಪಿನಂಗಡಿಯಲ್ಲಿ ಪರಿಸರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
  • ಗಿಡ, ಮರಗಳ ಪ್ರೀತಿ ದಿನಾಚರಣೆಗೆ ಸೀಮಿತ ಆಗಬಾರದು- ಮಠಂದೂರು

ಉಪ್ಪಿನಂಗಡಿ: ಪರಿಸರ ಆಹಾರ, ನೀರು, ಶುದ್ಧ ಗಾಳಿಯನ್ನು ಕೊಡುವುದರ ಮುಖೇನ ಭೂಮಿ, ಆರೋಗ್ಯ ಸಮತೋಲನವನ್ನು ಕಾಪಾಡುತ್ತದೆ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳ ಬದುಕು ಪರಿಸರವನ್ನು ಅವಲಂಭಿಸಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಜೂ. 5ರಂದು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಪರಿಸರ ದಿನಾಚರಣೆ ಕಾರ್‍ಯಕ್ರಮದಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿ  ಮಾತನಾಡಿ, ಗಿಡ, ಮರಗಳ ಪ್ರೀತಿ ಪರಿಸರ ದಿನಾಚರಣೆಗೆ ಸೀಮಿತ ಆಗಬಾರದು ಅದು ನಿತ್ಯ ನಿರಂತರವಾಗಿರಬೇಕು, ನಮಗೆ ಸಾಲುಮರ ತಿಮ್ಮಕ್ಕ ಮಾದರಿ ಆಗಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ  ಶಯನಾ ಜಯಾನಂದ ಮಾತನಾಡಿ ಪರಿಸರ ದಿನಾಚರಣೆ ದಿನದಂದು ನೆಡುವ ಗಿಡ ಮುಂದಿನ ದಿನಾಚರಣೆಯಂದು ನೋಡುವ ಹಾಗೆ ಇರಬೇಕು, ಅದನ್ನು ಪೋಷಿಸಿ, ಬೆಳೆಸುವ ಪ್ರವೃತ್ತಿ ಇರಬೇಕು, ಆಗ ಮಾತ್ರ ಇಂದಿನ ದಿನಾಚರಣೆ ಮಹತ್ವ ದೊರಕುವುದು ಎಂದರು.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್ ಮಾತನಾಡಿ ಅರಣ್ಯ ಇಲಾಖೆ ಪರಿಸರ ಅಭಿವೃದ್ಧಿ ಪಡಿಸುವ ಸಲುವಾಗಿ ಹಲವು ಉಪಯುಕ್ತ ಯೋಜನೆಗಳನ್ನು ರೂಪಿಸಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ಸುಜಾತಕೃಷ್ಣ ಆಚಾರ್ಯ, ಗ್ರಾಮ ಪಂಚಾಯಿತಿ ಸದಸ್ಯ ಸುನಿಲ್ ಕುಮಾರ್, ಸ್ಥಳೀಯ ಪ್ರಮುಖರಾದ ಇಸ್ಮಾಯಿಲ್ ಮಠ ಮತ್ತಿತರರು ಉಪಸ್ಥಿತರಿದ್ದರು. ಉಪ ವಲಯಾರಣ್ಯಾಧಿಕಾರಿ ಸಂದೀಪ್ ಸ್ವಾಗತಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.