ಕಲ್ಲೇಗದ ಮೂರು ಕ್ಷೇತ್ರಗಳ ದೈವ ನರ್ತಕರಿಗೆ ಆರ್ಥಿಕ ನೆರವು

Puttur_Advt_NewsUnder_1
Puttur_Advt_NewsUnder_1
  • ದೈವರಾಧಕರು ತುಳುನಾಡ ಸಂಸ್ಕೃತಿಯ ಮೂಲ – ಸಂಜೀವ ಮಠಂದೂರು

ಪುತ್ತೂರು: ಭೂತಾರಾಧನೆಗೆ ದೊಡ್ಡ ಕೊಡುಗೆ ಕೊಟ್ಟವರು ತುಳುನಾಡ ಸಂಸ್ಕೃತಿ, ಇದನ್ನು ಅರಿಯಲು ಮೂಲ ಕಾರಣರ್ತರಾದ ದೈವರಾಧಕರು ಇವತ್ತು ಕಷ್ಟದಲ್ಲಿದ್ದಾರೆ. ಅವರ ಕಷ್ಟದಲ್ಲಿ ನಾವು ಭಾಗಿಯಾಗಿ ಸಹಕಾರ ನೀಡುವ ಕೆಲಸ ಕಲ್ಲೇಗದ ಮೂರು ಕ್ಷೇತ್ರಗಳಿಂದ ಆಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಕಲ್ಲೇಗ ಕಲ್ಕುಡ ದೈವಸ್ಥಾನ, ಕಾರ್ಜಾಲು ದೂಮವಾತಿ ದೈವಸ್ಥಾನ, ಕಲ್ಲೇಗ ಪುಣ್ಯಕುಮಾರ ದೈವಸ್ಥಾನದಲ್ಲಿ ಭೂತಾರಾಧನೆಯ ನರ್ತನ ಸೇವೆ ಮಾಡುತ್ತಿರುವವರಿಗೆ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ಜೂ. ೬ರಂದು ನಡೆದ ಆರ್ಥಿಕ ನೆರವು ವಿತರಣೆಯ ಸಂದರ್ಭ ಅವರು ಮಾತನಾಡಿದರು. ಕೊರೋನಾ ಮಹಾಮಾರಿಯಿಂದ ಎಲ್ಲರಿಗೂ ತೊಂದರೆ ಆಗಿದೆ. ಈ ತೊಂದರೆಯನ್ನು ನಿವಾರಿಸಲು ಸರಕಾರ, ಸಂಘ ಸಂಸ್ಥೆಗಳು, ಸಹಕಾರ ನೀಡಿದೆ. ಆದರೆ ಅದು ಜೀವನ ಪರಿಯಂತ ಮಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಆಯಾ ಪರಿಸರದಲ್ಲಿ ಹಲವಾರು ಮಂದಿ ತಮ್ಮ ವ್ಯಾಪ್ತಿಗೆ ಸಂಬಂಧಿಸಿ ಬಡವರಿಗೆ ಸಹಕಾರ ನೀಡಿದ್ದಾರೆ. ಈ ನಡುವೆ ಕೆಲವು ವರ್ಗದವರು ಸಹಕಾರ ಸಿಗುವಲ್ಲಿ ಇನ್ನೂ ವಂಚಿತರಾಗಿದ್ದಾರೆ. ಅದರಲ್ಲೂ ತುಳುನಾಡಿನ ಸಂಸ್ಕೃತಿಯ ಮೂಲ ವಿಚಾರವನ್ನು ತಿಳಿಸಿ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟ ಭೂತಾರಾಧಕರು ತುಂಬಾ ಸಂಕಷ್ಟದಲ್ಲಿದ್ದಾರೆ. ಅವರಿಗೆ ದೈವಸ್ಥಾನದ ಮೂಲಕ ಆರ್ಥಿಕ ನೆರವು ನೀಡುವ ಕಾರ್ಯಕ್ರಮದ ಇದೇ ಮೊದಲ ಬಾರಿಗೆ ನಡೆದಿದೆ. ಈ ಕಾರ್ಯಕ್ರಮ ಇತರರಿಗೆ ಮಾದರಿಯಾಗಲಿದ ಎಂದರು.

12 ಮಂದಿಗೆ ಗೌರವ ಧನ:
ನಗರಸಭಾ ಸದಸ್ಯ ಜೀವಂಧರ್ ಜೈನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಲ್ಲೇಗದ ಮೂರು ಕ್ಷೇತ್ರಗಳಲ್ಲಿ ಭೂತಾರಾಧನೆಯಲ್ಲಿ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿರುವ ೧೨ ಮಂದಿಗೆ ಮೂರು ಕ್ಷೇತ್ರಗಳಿಂದ ಪ್ರತ್ಯೇಕವಾಗಿ ಆರ್ಥಿಕ ನೆರವನ್ನು ಗೌರವ ಧನದ ಮೂಲಕ ನೀಡಲಾಗುತ್ತಿದೆ. ಮುಂದೆ ಮಳೆಗಾಲದಲ್ಲಿ ದೈವದ ಚಾಕ್ರಿ ಮಾಡುವವರಿಗೆ ಯಾವುದೇ ಕಾಯಕ ಇಲ್ಲದೆ ತೊಂದರೆ ಅನುಭವಿಸಬಾರದುಂದು ಕ್ಷೇತ್ರದಿಂದ ನಿಶ್ಚಯ ಮಾಡಿದಂತೆ ಈ ಗೌರವ ಧನ ನೀಡಲಾಗುತ್ತಿದೆ ಎಂದು ಹೇಳಿದರು. ದೈವಸ್ಥಾನದ ಜಿನ್ನಪ್ಪ ಗೌಡ, ನಗರಸಭಾ ಸದಸ್ಯರಾದ ವಸಂತ ಕಾರೆಕ್ಕಾಡು, ಶಿವರಾಮ ಸಪಲ್ಯ, ಕ್ಷೇತ್ರದ ಮೊಕ್ತೇಸರ ಅಜಿತ್ ಕುಮಾರ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಡತ್ತಾರು ದೈವಸ್ಥಾನದ ಕಾರ್ಯದರ್ಶಿ ನಾರಾಯಣ ಗೌಡ ವಂದಿಸಿದರು. ಬಿಜೆಪಿ ನಗರ ಮಂಡಲ ಯುವ ಮೋರ್ಚಾ ಅಧ್ತಕ್ಷ ಯುವರಾಜ್ ಪೆರಿಯತ್ತೋಡಿ, ರಾಧಾಪ್ಪ, ಪ್ರಕಾಶ್ ಶೆಟ್ಟಿ ಕಲ್ಲೇಗ, ರವಿಕಿರಣ್ ನೆಲಪ್ಪಾಲು, ಗಣೇಶ್ ಪಡ್ಡಾಯೂರು, ರಾಘವೇಂದ್ರ ಪ್ರಭು, ಮನೋಹರ್ ಕಲ್ಲೇಗ, ಚಂದ್ರಶೇಖರ ಗೌಡ, ಮೀನಾಕ್ಷಿ ಡಿ ಗೌಡ, ವಿಶ್ವನಾಥ ಕುಲಾಲ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.