ಅನಧಿಕೃತ ಅಂಗಡಿಗಳ ತೆರವಿಗೆ ಮುಂದಾದ ನಗರಸಭೆ | ಯಾವುದೇ ಹಿಂದೂವಿನ ಅಂಗಡಿಯನ್ನು ಅನಧಿಕೃತ ಎಂದು ತೆರವುಗೊಳಿಸಿದರೆ ನಗರಸಭೆಗೆ ಮುತ್ತಿಗೆ – ಹಿಂಜಾವೆ ಎಚ್ಚರಿಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಅಂಗಡಿಗಳ ತೆರವಿಗೆ ಮುಂದಾದ ಪುತ್ತೂರು ನಗರಸಭೆ ಜೂ.6ರಂದು ರಸ್ತೆ ಬದಿಯಲ್ಲಿ ತರಕಾರಿ, ಮೀನು ವ್ಯಾಪಾರದ ಅಂಗಡಿಗಳಿಗೆ ತೆರಳಿ ಎಚ್ಚರಿಕೆ ನೀಡಿದ ಮತ್ತು ನಮ್ಮದೊಂದೇ ಅಂಗಡಿ ಗುರಿ ಮಾಡುವುದಲ್ಲ ನಗರಸಭೆ ವ್ಯಾಪ್ತಿಯಲ್ಲಿರುವ ಅನೇಕ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಎಂದು ಅಂಗಡಿಯವರೊಬ್ಬರು ಆಗ್ರಹಿಸಿದ ಘಟನೆ ಏಳ್ಮುಡಿಯಲ್ಲಿ ನಡೆದಿದೆ.

ಪರ್ಲಡ್ಕ, ದರ್ಬೆ ಸೇರಿದಂತೆ ಅನೇಕ ಕಡೆ ಅನಧಿಕೃತ ಮೀನಿನ ಅಂಗಡಿಗಳು ಕಾರ್ಯಾಚರಿಸುತ್ತಿವೆ ಎಂದು ನಗರಸಭೆ ಅಧಿಕಾರಿಗಳು ಅನಧಿಕೃತ ಅಂಗಡಿಗಳಿಗೆ ತೆರಳಿ ತೆರವುಗೊಳಿಸುವಂತೆ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ. ಈ ನಡುವೆ ಮೀನು ವ್ಯಾಪಾರದ ಅಂಗಡಿಯೊಬ್ಬರು ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಅದೆಷ್ಟೋ ಅನಧಿಕೃತ ಅಂಗಡಿಗಳಿವೆ ಅದನ್ನು ಮೊದಲು ತೆರವುಗೊಳಿಸಿ ಎಂದು ಆಗ್ರಹಿಸಿದ್ದಾರೆ. ಆದರೆ ನಗರಸಭೆ ಅಧಿಕಾರಿಗಳು ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವಂತೆ ಎಚ್ಚರಿಕೆ ನೀಡಿ ತೆರಳಿದ್ದಾರೆಂದು ತಿಳಿದು ಬಂದಿದೆ.

ನಗರಸಭೆಗೆ ಮುತ್ತಿಗೆ – ಹಿಂಜಾವೆ ಎಚ್ಚರಿಕೆ:
ಪುತ್ತೂರಿನಲ್ಲಿ ಯಾವುದೇ ಹಿಂದೂವಿನ ಅಂಗಡಿಯನ್ನು ಅನಧಿಕೃತ ಎಂದು ತೆರವುಗೊಳಿಸುವ ಪ್ರಯತ್ನ ನಡೆಸಿದರೆ ಬೊಳುವಾರಿನಿಂದ ದರ್ಬೆ ತನಕ ಇರತಕ್ಕ ಎಲ್ಲಾ ಅನಧಿಕೃತ ಅಂಗಡಿಗಳನ್ನು ತಕ್ಷಣ ತೆರವುಗೊಳಿಸಲು ಹಿಂಜಾವೇ ನೇತೃತ್ವದಲ್ಲಿ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಹಿಂದು ಜಾಗರಣಾ ವೇದಿಕೆ ನಗರಸಭೆ ಎಚ್ಚರಿಕೆ ನೀಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.