- ವ್ಯಕ್ತಿಯ ಸಂಪರ್ಕದಲ್ಲಿದ್ದವರಿಗೆ ಕ್ವಾರಂಟೈನ್…
ಕಡಬ: ಕೊರೋನಾ ಭಾದಿತ ವ್ಯಕ್ತಿಯ ಮನೆ ಸೇರಿದಂತೆ ಸುತ್ತಮುತ್ತಲಿನ ಎಂಟು ಮನೆಗಳನ್ನು ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ನೇತೃತ್ವದ ಪೊಲೀಸರ ತಂಡ, ಕಂದಾಯ ಅಧಿಕಾರಿಗಳು, ಕಡಬ ವೈದ್ಯಾಧಿಕಾರಿ, ಗ್ರಾ.ಪಂ ಪಿಡಿಒ ನೇತೃತ್ವದಲ್ಲಿ ಆರಿಗ, ದೋಳ ಪ್ರದೇಶದ ಮನೆಗಳನ್ನು ಸೀಲ್ ಡೌನ್ ಮಾಡಲಾಯಿತು.
ಅಲ್ಲದೆ ಕೊರೋನಾ ಭಾದಿತ ವ್ಯಕ್ತಿಯ ಮಾವನ ಮನೆ ಹಾಗೂ ಸುತ್ತಲಿನ ಮನೆಯವರನ್ನು ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ. ಈ ಮಧ್ಯೆ ಕೊರೋನಾ ಭಾದಿತ ವ್ಯಕ್ತಿಯನ್ನು ಆಸ್ಪತ್ರೆ ಗೆ ಕೊಂಡೊಯ್ದು ಅವರ ಜತೆಯಲ್ಲಿದ್ದ ಚಾಲಕರೋರ್ವರು ನಾಪತ್ತೆ ಯಾಗಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ. ಅವರ ನ್ನು ಅಧಿಕಾರಿಗಳು ಹುಡುಕಾಡುತ್ತಿದ್ದಾರೆ. ಅಲ್ಲದೆ ಕೊರೋನಾ ಭಾದಿತ ವ್ಯಕ್ತಿ ಎಲ್ಲೆಲ್ಲಿ ಸುತ್ತಾಡಿದ್ದಾರೆ ಎಂಬ ಮಾಹಿತಿ ಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ, ಈಗಾಗಲೇ ಹೊಸಮಠ ಪೇಟೆಯ ಒಂದು ಅಂಗಡಿಗೆ ಭೇಟಿ ನೀಡಿದ್ದಾರೆಂಬ ಮಾಹಿತಿ ಮೇರೆಗೆ ಅಲ್ಲಿಗೂ ಅಧಿಕಾರಿಗಳು ತೆರಳಿ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಸೂಚಿಸಿದ್ದಾರೆ.
ಕಡಬ ಸಿಎ ಬ್ಯಾಂಕಿನ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಒಟ್ಟಿನಲ್ಲಿ ಕೊರೋನಾ ಮುಂಜಾಗೃತಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ, ಕಡಬ ಎಸ್.ಐ ರುಕ್ಮ ನಾಯ್ಕ್ ಕಡಬ ವೈದ್ಯಾಧಿಕಾರಿ ಡಾ. ಸುಚಿತ್ರಾ ರಾವ್, ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ, ಗ್ರಾ.ಪಂ ಪಿಡಿಒ ಚೆನ್ನಪ್ಪ ಗೌಡ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆ, ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.