HomePage_Banner
HomePage_Banner
HomePage_Banner

ನೀವು ಪ್ರೇರಕರು, ನಾನು ಸೇವಕ ಪ್ರಧಾನಿ ಪತ್ರ ಮನೆಮನೆಗೆ | ಬಿಜೆಪಿ ಕಚೇರಿಯಲ್ಲಿ ಅಭಿಯಾನಕ್ಕೆ ಶಾಸಕರಿಂದ ಚಾಲನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ದೇಶದ ಜನರಿಗೆ ಬರೆದಿರುವ ‘ನೀವು ಪ್ರೇರಕರು ನಾನು ಸೇವಕ’ ಎಂಬ ಪತ್ರದ ಸಾರಾಂಶ ಹಾಗೂ ಒಂದು ವರ್ಷದ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಜೂ. 6ರಂದು ಬಿಜೆಪಿ ಕಚೇರಿಯಲ್ಲಿ ಶಾಸಕ ಸಂಜೀವ ಮಠಂದೂರು ಅವರು ಪತ್ರಕಗಳನ್ನು ಮಂಡಲದ ವಿವಿಧ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಸರಕಾರದ ಕಾರ್ಯಯೋಜನೆ ಯಶಸ್ವಿ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಕೊರೊನಾದಿಂದಾಗಿ ದೇಶ ಸಂಕಷ್ಟದಲ್ಲಿದ್ದರೂ ಆರ್ಥಿಕವಾಗಿ ಮೇಲೆತ್ತುವಲ್ಲಿ ಸರಕಾರದ ಕಾರ್ಯಯೋಜನೆಗಳು ವಿಶೇಷವಾದದ್ದು. ಲಾಕ್‌ಡೌನ್ ಸಂದರ್ಭ ಪ್ರಧಾನಿ ಮೋದಿ ಅವರ ಕರೆಗೆ ಭಾರತೀಯರು ಸ್ಪಂದಿಸಿದ ರೀತಿ ಜನರಿಗೆ ಸರಕಾರದ ಮೇಲಿರುವ ನಂಬಿಕೆಯ ಪ್ರತೀಕವಾಗಿದೆ. ಕಳೆದ ಒಂದು ವರ್ಷದ ಸಾಧನೆ ಕುರಿತು ಹಾಗೂ ದೇಶದ ಜನರಿಗೆ ಪ್ರಧಾನಮಂತ್ರಿಗಳು ಬರೆದಿರುವ ಪತ್ರದ ಸಾರಾಂಶವನ್ನು ಜನತೆಗೆ ತಿಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಶಾಂತಿವನ, ಯುವರಾಜ್ ಪೆರಿಯತ್ತೋಡಿ, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ನವೀನ್ ಪಡ್ನೂರು, ಮಹಿಳಾ ಮೋರ್ಛಾ, ಹಿಂದುಳಿದ ವರ್ಗಗಳ ಮೋರ್ಛಾ, ರೈತ ಮೋರ್ಛಾ, ಎಸ್.ಟಿ ಮೋರ್ಛಾ, ಎಸ್.ಟಿ ಮೋರ್ಛಾದ ಪದಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.