ಸವಾಲಿನ ಮಧ್ಯೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿ ಯಶಸ್ವಿಯಾಗಬೇಕು: ಮುಖ್ಯಶಿಕ್ಷಕರ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಭೀತಿ ಇಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಉಚ್ಛ ನ್ಯಾಯಾಲಯ ಮತ್ತು ಸರಕಾರ ಮಾರ್ಗದರ್ಶಿ ಸೂತ್ರ ಕೊಟ್ಟಿದೆ. ಅದರ ಆಧಾರದಲ್ಲಿ ಪರೀಕ್ಷೆಗಳು ನಡೆಯಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಪಾಲನೆಯಿಂದ ನಾವು ಸುರಕ್ಷಿತರಾಗಿದ್ದೇವೆ. ಆದರೂ ಪೊಷಕರು ಮತ್ತು ಮಕ್ಕಳ ಭಯದ ಸವಾಲಿನ ಮಧ್ಯೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿ ಯಶಸ್ವಿಯಾಗಬೇಕೆಂದು ಶಾಸಕ ಸಂಜೀವ ಮಠಂದೂರು ಅವರು ಶಿಕ್ಷಕರಿಗೆ ಸೂಚನೆ ನೀಡಿದರು.

ಜೂ. ೨೫ರಿಂದ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಪೂರಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ದ ಸಹಯೋಗದಲ್ಲಿ ಇಲ್ಲಿನ ಸಂತ ವಿಕ್ಟರ್ ಬಾಲಿಕ ಪ್ರೌಢಶಾಲೆಯ ಸಭಾಂಗಣದಲ್ಲಿ ಜೂ.೬ರಂದು ನಡೆದ ಮುಖ್ಯ ಶಿಕ್ಷಕರ ಪೂರ್ವಭಾವಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸವಾಲಿನ ಮಧ್ಯೆ ಪರೀಕ್ಷೆ ಎದುರಿಸಬೇಕಾಗಿದೆ. ಮಕ್ಕಳ ಫಲಿತಾಂಶ ಕಾಯ್ದು ಕೊಳ್ಳುವುದು, ಆರೋಗ್ಯದ ಬಗ್ಗೆ ಕಾಳಜಿ, ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೊಠಡಿಗೆ ಬರಲು ಮತ್ತು ನಿರ್ಗಮಿಸುವ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದೆ ಎಂದ ಅವರು ಕೊರೋನಾ ಜೊತೆಗೆ ಡೆಂಗ್ಯೂ, ಮಲೇರಿಯಗಳು ಕೂಡಾ ಇವೆ. ಇವೆಲ್ಲದರ ನಡುವೆ ಪರೀಕ್ಷಾ ತಯಾರಿ ನಡೆಸಬೇಕು. ಹಾಗಾಗಿ ಏನೆನು ಮುನ್ನೆಚ್ಚರಿಕೆ ಕ್ರಮ ಇದೆಯೋ ಅದನ್ನು ಕೈಗೊಂಡು, ಮಕ್ಕಳ ಭವಿಷ್ಯದ ದೃಷ್ಠಿಯಲ್ಲಿ ಮುಂಜಾಗೃತಾ ಕೃಮ ಕೈಗೊಳ್ಳುವುದು ಅಗತ್ಯವಾಗಿದೆ. ಮುಂದಿನ ೨೦ ದಿನಗಳಲ್ಲಿ ಫಲಿತಾಂಶದ ಬಗ್ಗೆಯು ಯೋಚನೆ ಮಾಡಬೇಕು. ಈ ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಹಾಕಿದ ಯೋಜನೆಯಂತೆ ತಾಲೂಕಿನಲ್ಲಿ ೯೫ ಫ್ಲಸ್ ಫಲಿತಾಂಶ ದಾಖಲಿಸುವ ನಮ್ಮ ಗುರಿ ತಲುಪುವ ಬಗ್ಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳನ್ನು ಸಿದ್ದಗೊಳಿಸಲು ಅನುಸರಿಸಬಹುದಾದ ಕ್ರಮಗಳ ಬಗ್ಗೆಯು ಯೋಜನೆ ರೂಪಿಸಬೇಕು ಎಂದು ಶಾಸಕರು ಹೇಳಿದರು.

ಗ್ರಾ.ಪಂ ಮಟ್ಟದಲ್ಲಿ ತಪಾಸಣೆ:
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮೊದಲು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಬೇಕಿದೆ. ಥರ್ಮಲ್ ಸ್ಕ್ರೀನಿಂಗ್ ಗ್ರಾ.ಪಂ. ಒದಗಿಸುವ ಬಗ್ಗೆ ತಾ.ಪಂ.ಇಓ ಅವರಿಗೆ ನಿರ್ದೇಶನ ನೀಡಲಾಗಿದೆ. ಗ್ರಾ.ಪಂ.ಮಟ್ಟದಲ್ಲೇ ತಪಾಸಣೆ ಮಾಡಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸುವ ಬಗ್ಗೆಯು ಚಿಂತನೆ ನಡೆಸಲಾಗುವುದು ಎಂದು ಶಾಸಕರು ತಿಳಿಸಿದರು.

ಬಸ್‌ಗಳು ಎಂದಿನಂತೆ ಓಡಾಡಲಿದೆ:
ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಬರುವಲ್ಲಿ ತೊಂದರೆ ಆಗಬಾರದು ಎಂಬ ನೆಲೆಯಲ್ಲಿ ಹಿಂದೆ ಹೇಗೆ ಬಸ್‌ಗಳು ಸಂಚರಿಸುತ್ತಿದ್ದವೋ ಅದೇ ರೀತಿ ಪರೀಕ್ಷಾ ಸಮಯ ಬಸ್‌ಗಳು ಬೆಳಿಗ್ಗೆ ಮತ್ತು ಸಂಜೆ ಓಡಾಟ ನಡೆಸಲಿದೆ. ಈ ಕುರಿತು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕರು ಹೇಳಿದರು.

ವಿದ್ಯಾರ್ಥಿಗಳು, ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿಸಿ:
ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಸಿ ಅವರು ಮಾತನಾಡಿ ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಕೊರೋನಾ ವೈರಸ್ ಬಗ್ಗೆ ಆತಂಕ ಬೇಡ ಈ ಕುರಿತು ಶಿಕ್ಷಕರು ಅವರಲ್ಲಿ ಆತ್ಮವಿಶ್ವಾಸ ತುಂಬಿಸಿ ಎಂದ ಅವರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ನೂರಕ್ಕೆ ನೂರು ಸುರಕ್ಷತೆಗೆ ಮಾಡಲಾಗಿದೆ. ಪರೀಕ್ಷಾ ಕೇಂದ್ರವನ್ನು ಸ್ಯಾನಿಟೈಸರ್ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಯಾವುದೆ ಸಿಂಪಡಣೆ ಮಾಡುವುದಿಲ್ಲ. ಎಲ್ಲಾ ಶಿಕ್ಷಕರು ಈ ಪರೀಕ್ಷಾ ಕಾರ್ಯಕ್ಕೆ ಹಾಜರಾಗಬೇಕು. ಅವರಿಗೆ ಕೆಲಸ ಇಲ್ಲ ಎಂದು ತಿಳಿದು ಕೊಳ್ಳಬೇಡಿ. ಅವರನ್ನು ನಿಯೋಜನೆ ಮಡಿ ಪರೀಕ್ಷಾ ಕೇಂದ್ರದಲ್ಲಿ ರಿಸರ್ವ್ ಇಡುತ್ತೇವೆ. ವಿದ್ಯಾರ್ಥಿಗಳು ಬರುವ ರೂಟ ಮ್ಯಾಪ್ ಈಗಾಗಲೇ ಆಗಿದೆ. ಪ್ರತಿ ಮಗುವಿನ ಮಾಹಿತಿ ಶಿಕ್ಷಕರಲ್ಲಿ ಇರಬೇಕು. ಶಿಕ್ಷಕರು ಖುದ್ದಾಗಿ ಅವರಿಗೆ ಪೋನ್ ಮಾಡಿ ಪರೀಕ್ಷಾ ಕೇಂದ್ರಕ್ಕೆ ಬರುವ ಕುರಿತು ಮಾಹಿತಿ ನೀಡಬೇಕು. ಪ್ರತಿ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆದು ಕೊಂಡು ಬರುವ ಜವಾಬ್ದಾರಿ ಶಿಕ್ಷಕರದ್ದು, ಎಲ್ಲಾ ಕೇಂದ್ರಗಳಲ್ಲಿ ಸಿ.ಸಿ ಟಿವಿ , ಜನರೇಟರ್ ವ್ಯವಸ್ಥೆ ಇರಬೇಕು. ಈ ಕುರಿತು ಖರ್ಚು ವೆಚ್ಚವನ್ನು ಶಾಲಾ ಸಂಚಿತ ನಿಧಿಯಿಂದ ಭರಿಸಬೇಕೆಂದು ಎಂದ ಅವರು ಳಗ್ಗೆ ೧೦.೩೦ ಕ್ಕೆ ಪರೀಕ್ಷೆ ಆರಂಭಗೊಂಡರೂ, ಆರೋಗ್ಯ ತಪಾಸಣೆ ಇರುವ ಕಾರಣ ಪರೀಕ್ಷಾ ಕೇಂದ್ರಕ್ಕೆ ಬೇಗನೆ ಹಾಜರಾಗಬೇಕು ಎಂದು ಅವರು ಹೇಳಿದರು. ಪರೀಕ್ಷಾ ನೋಡೆಲ್ ಅಧಿಕಾರಿ ಜಯರಾಮ ಶೆಟ್ಟಿ ಪರೀಕ್ಷಾ ತಯಾರಿಗಳ ಬಗ್ಗೆ ಮಾಹಿತಿ ನೀಡಿದರು. ಡಿಡಿಪಿಐ ಮಲ್ಲೇಸ್ವಾಮಿ ಅಗತ್ಯ ಸಲಹೆ ಸೂಚನೆ ನೀಡಿದರು. ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಯ್ದೇ ದೇವುಸ್ ಚರ್ಚ್‌ನ ಧರ್ಮಗುರು ಫಾ. ಆಲ್ಫ್ರೆಡ್ ಜೆ ಪಿಂಟೋ ಮಾತನಾಡಿದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಡಿಡಿಪಿಐ ಮಲ್ಲೇಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್, ಶಿಕ್ಷಣ ಸಮನ್ವಯಾಧಿಕಾರಿ ಮೋನಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದಿವಾಕರ, ಪ್ರೌ.ಸ.ಶಿ.ಸಂಘದ ಅಧ್ಯಕ್ಷ ಅಬ್ರಾಹಂ ಮತ್ತಿತರರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಸ್ವಾಗತಿಸಿದರು. ಕೆಯ್ಯೂರು ಕೆಪಿಎಸ್ ಶಾಲಾ ಮುಖ್ಯಗುರು ವಿನೋದ್ ಕುಮಾರ್ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕರ ಬೇಡಿಕೆ:
ಪರೀಕ್ಷೆ ಮುಗಿದ ಬಳಿಕ ವ್ಯಾಲ್ಯೂವೇಶನ್ ಪುತ್ತೂರಿನಲ್ಲೇ ಮಾಡಬೇಕು. ಮಕ್ಕಳಿಗೆ ಕೊನೆಯ ಹತ್ತು ದಿನಗಳಲ್ಲಿ ತರಬೇತಿಗೊಳಿಸುವ ಕೆಲಸ ಆಗಬೇಕಾಗಿದೆ. ಪರೀಕ್ಷಾ ಸೆಂಟರ್‌ಗೆ ಸ್ವಯಂ ಸೇವಕರು ಸಿದ್ಧರಿದ್ದಾರೆ. ಬೆಳಿಯೂರುಕಟ್ಟೆಗೆ ಖಾಸಗಿ ಬಸ್‌ಗಳು ಇಲ್ಲ ಎಂಬ ಕುರಿತು ಶಿಕ್ಷಕರು ಸಭೆಯಲ್ಲಿ ಪ್ರಸ್ತಾಪಿಸಿದರು ಉತ್ತರಿಸಿದ ಶಾಸಕರು ವ್ಯಾಲ್ಯೂವೆಶನ್ ಕುರಿತು ಸಚಿವರಲ್ಲಿ ಚರ್ಚಿಸುತ್ತೇನೆ. ಮಕ್ಕಳಿಗೆ ತರಬೇತಿ ಗೊಳಿಸಲು ಸಮುದಾಯ ಭವನದ ಸಿದ್ಧತೆ ಕುರಿತು ಸಹಾಯಕ ಕಮೀಷನರ್ ಅವರಲ್ಲಿ ಮಾತನಾಡುತ್ತೇನೆ ಮತ್ತು ಪರೀಕ್ಷಾ ಸಂದರ್ಭದಲ್ಲಿ ಗಡಿ ಪ್ರದೇಶದ ಸರಕಾರಿ ಮತ್ತು ಖಾಸಗಿ ಬಸ್‌ಗಳ ಓಡಾಟ ಕುರಿತು ಸೂಚನೆ ನೀಡುತ್ತೇನೆ ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.