ಪುತ್ತೂರು: ಪೊರ್ಲುದ ಕೆಯ್ಯೂರು ವಿಷನ್ ೨೦೨೫ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಕೆಯ್ಯೂರು ದೇವಿನಗರ ಎ.ಆರ್.ಸಂಕೀರ್ಣದ ಬಳಿ ನಡೆಸಲಾಯಿತು. ಪೊರ್ಲುದ ಕೆಯ್ಯೂರು ಸಮಿತಿಯ ಗೌರವಾಧ್ಯಕ್ಷ ದಂಬೆಕ್ಕಾನ ಸದಾಶಿವ ರೈಯವರು ಕೆಯ್ಯೂರು ಗ್ರಾಪಂ ಅಧ್ಯಕ್ಷ ಬಾಬು.ಬಿಯವರಿಗೆ ಸಸಿ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಉಪನ್ಯಾಸಕ, ಸಾಹಿತಿ ಡಾ.ನರೇಂದ್ರ ರೈ ದೇರ್ಲರವರು ಪರಿಸರ ಕಾಳಜಿಯ ಬಗ್ಗೆ ಉಪನ್ಯಾಸ ನೀಡಿದರು. ಸಮಿತಿಯ ರೂವಾತಿ ಇಬ್ರಾಹಿಂ ಮಾಸ್ತರ್ರವರು ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮಸ್ಥರ ಸಹಕಾರ ಕೋರಿದರು.
ಸಮಿತಿಯ ಅಧ್ಯಕ್ಷ ವಿಶ್ವನಾಥ ಪೂಜಾರಿಯವರು ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆಯ್ಯೂರು ಗ್ರಾಪಂ ಸದಸ್ಯರುಗಳಾದ ಎ.ಕೆ ಜಯರಾಮ ರೈ, ಅಬ್ದುಲ್ ಖಾದರ್ ಮೇರ್ಲ, ವಿದ್ಯಾಮಾತ ಪೌಂಡೇಶನ್ನ ಭಾಗ್ಯೇಶ್, ಕೆಯ್ಯೂರು ಗ್ರಾಪಂ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಇಸ್ಮಾಯಿಲ್, ಜಯಂತ್ ಕೆಂಗುಡೇಲು, ಮಹಮ್ಮದ್ ಪಿ.ವೈ,ರಮಾನಾಥ ರೈ ಕೋಡಂಬು ಉಪಸ್ಥಿತರಿದ್ದರು. ಪೊರ್ಲುದ ಕೆಯ್ಯೂರು ಸಮತಿಯ ಕಾರ್ಯದರ್ಶಿ ಆನಂದ ರೈ ದೇವಿನಗರ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು.