Home_Page_Advt
Home_Page_Advt
Home_Page_Advt

ಯುಪಿಎಸ್‌ಸಿ: ಪರಿಷ್ಕೃತ ವೇಳಾಪಟ್ಟಿ ಪ್ರಕಟ

Puttur_Advt_NewsUnder_1
Puttur_Advt_NewsUnder_1

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2020ನೇ ಸಾಲಿನ ನಾಗರಿಕ ಸೇವೆಗಳ ಪೂರ್ವಭಾವಿ (ಪ್ರಿಲಿಮ್ಸ್) ಮತ್ತು ಮುಖ್ಯ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಕ್ಟೋಬರ್ 4ರಂದು ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಗಳು ನಡೆಯಲಿದೆ. 2021ರ ಜನವರಿ 8ರಂದು ಮುಖ್ಯ ಪರೀಕ್ಷೆ ನಡೆಯಲಿದೆ. ಇದಕ್ಕೂ ಮುನ್ನ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಮೇ 20ಕ್ಕೆ ನಿಗದಿಯಾಗಿತ್ತು. ಕೋವಿಡ್-19 ಪರಿಣಾಮ ಪರೀಕ್ಷೆಯನ್ನು ಆಯೋಗ ಮುಂದೂಡಿತ್ತು. 2019ನೇ ಸಾಲಿನ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ಭಾಗವಾಗಿರುವ ವ್ಯಕ್ತಿತ್ವ ಪರೀಕ್ಷೆ 2020ರ ಜುಲೈ 20ರಿಂದ ಮುಂದುವರಿಯಲಿದೆ. 2020ನೇ ಸಾಲಿನ ಎನ್‌ಡಿಎ ಮತ್ತು ಎನ್‌ಎ ಪರೀಕ್ಷೆಗಳು ಸೆಪ್ಟೆಂಬರ್ 6ರಂದು ನಿಗದಿಯಾಗಿದೆ. ಐಇಎಸ್/ಐಎಸ್‌ಎಸ್ 2020 ಪರೀಕ್ಷೆ ಅಕ್ಟೋಬರ್ 16ರಂದು ಹಾಗೂ ಎಂಜಿನಿಯರಿಂಗ್ ಸರ್ವೀಸಸ್ ಮುಖ್ಯ ಪರೀಕ್ಷೆ ಆಗಸ್ಟ್ 9ರಂದು ನಡೆಯಲಿವೆ.

ಹೆಚ್ಚಿನ ವಿವರಗಳಿಗಾಗಿ: https://www.upsc.gov.in/

ಆನ್‌ಲೈನ್ ಹಾಗೂ ಹೆಚ್ಚಿನ ಮಾಹಿತಿಗಾಗಿ: ಸುದ್ದಿ ಆನ್‌ಲೈನ್ ವಿಭಾಗ, ದೇವಣ್ಣ ಕಿಣಿ ಬಿಲ್ಡಿಂಗ್, ಕಾರ್ಪೋರೇಷನ್ ಬ್ಯಾಂಕ್ ಬಳಿ, ಮುಖ್ಯರಸ್ತೆ, ಪುತ್ತೂರು. ಫೋ: 08251-238949 | 7829503541

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.