ಸಂಟ್ಯಾರ್ ಪಾಣಾಜೆ ರಸ್ತೆಯಲ್ಲಿ ಅಪಾಯಕಾರಿ ಮರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಸಂಟ್ಯಾರ್ ಪಾಣಾಜೆ ರಸ್ತೆಯಲ್ಲಿ ಅಪಾಯಕಾರಿ ಮರವೊಂದು ಬಾಗಿ ನಿಂತಿದ್ದು, ತಕ್ಷಣ ತೆರವುಗೊಳಿಸಲು ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ. ಸಂಟ್ಯಾರ್‌ನಿಂದ ಪಾಣಾಜೆ ರಸ್ತೆಯಲ್ಲಿ ಅರ್ಧ ಕಿಲೋಮೀಟರ್ ಸಾಗಿದಾಗ ಬಳಕ್ಕ ಎಂಬಲ್ಲಿ ರಸ್ತೆಗೆ ಅಡ್ಡವಾಗಿ ಅಕೇಶಿಯಾ ಮರವೊಂದು ಬಾಗಿ ನಿಂತಿದೆ.

ಗಾಳಿ ಮಳೆಗೆ ಈ ಮರ ಯಾವುದೇ ಕ್ಷಣದಲ್ಲಿ ರಸ್ತೆಗೆ ಅಡ್ಡಲಾಗಿ ಬೀಳುವ ಸಾಧ್ಯತೆ ಇದೆ. ದಿನಂಪ್ರತಿ ನೂರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ಯಾವುದೇ ಸಮಯದಲ್ಲಿ ಅಪಾಯ ಸಂಭವಿಸಬಹುದಾಗಿದೆ. ತಕ್ಷಣ ಲೊಕೋಪಯೋಗಿ ಇಲಾಖೆ ಅಥವಾ ಸಂಬಂಧಿಸಿದ ಇಲಾಖೆಯವರು ಸ್ಪಂದಿಸಿ ಮರವನ್ನು ತೆರವುಗೊಳಿಸುವ ಕಾರ್ಯ ನಡೆಸಬೇಕಿದೆ ಎಂದು ನಿತ್ಯ ಪ್ರಯಾಣಿಕರ ಆಗ್ರಹವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.