ಕಡಬದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಕೊರೋನಾ ಮುಂಜಾಗೃತಾ ತುರ್ತು ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಭೆಯಲ್ಲಿ ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ವರ್ತಕರು-ಒಮ್ಮತದ ನಿರ್ಧಾರಕ್ಕೆ ಬರಲು ವಿಫಲ
  • ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಪೇಟೆ ಯಥಾ ಸ್ಥಿತಿ ಮುಂದುವರಿಸಲು ನಿರ್ಧಾರ

ಕಡಬ: ಕಡಬದ ವ್ಯಕ್ತಿಗೆ ಕೊರೋನಾ ಸೊಂಕು ದೃಢವಾದ ಹಿನ್ನಲೆಯಲ್ಲಿ ಕಡಬ ತಹಸೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ನೇತೃತ್ವದಲ್ಲಿ ಕಂದಾಯ, ಪೋಲಿಸ್, ಆರೋಗ್ಯ, ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ವರ್ತಕರ ಸಭೆ ಜೂ.೬ರಂದು ಅಪರಾಹ್ನ ಕಡಬ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಈ ಸಭೆಯಲ್ಲಿ ವರ್ತಕರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದರಿಂದ ಸಭೆ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರಲು ವಿಫಲವಾಗಿ, ಕೊನೆಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ಪೇಟೆಯಲ್ಲಿ ಯಥಾ ಸ್ಥಿತಿಯಲ್ಲಿ ವ್ಯಾಪಾರ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.

ಸಭೆಯು ತಹಸೀಲ್ದಾರ್ ಜಾನ್ ಪ್ರಕಾಶ್ ಅಧ್ಯಕ್ಷತೆಯಲ್ಲಿ, ಕಡಬ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ಮಾಜಿ ಜಿ.ಪಂ. ಸದಸ್ಯ ಕೃಷ್ಣ ಶೆಟ್ಟಿ, ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ, ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಕಡಬ ವೈದ್ಯಾಧಿಕಾರಿ ಡಾ. ಸುಚಿತ್ರಾ ರಾವ್, ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ರುಕ್ಮ ನಾಕ್, ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್. ಮೊದಲಾದವರ ಉಪಸ್ಥಿತಿಯಲ್ಲಿ ನಡೆಯಿತು. ಸಭೆಯಲ್ಲಿ ಕಡಬದ ಹೆಚ್ಚಿನ ಎಲ್ಲ ವರ್ತಕರು ಪಾಲ್ಗೋಂಡಿದ್ದರು. ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ ಸ್ವಾಗತಿಸಿ, ಕಡಬ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ ವಂದಿಸಿದರು.

ವಿವಿಧ ಅಭಿಪ್ರಾಯಗಳು:
ಪ್ರಾರಂಭದಲ್ಲಿ ಕಂದಾಯ ನಿರೀಕ್ಷಕ ಅವಿನ್ ರಂಗತ್‌ಮಲೆ ಕಡಬದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದ ಬಗ್ಗೆ ಮಾಹಿತಿ ನೀಡಿದರು. ಬಳಿಕ ತಹಸೀಲ್ದಾರ್ ಎಲ್ಲ ವರ್ತಕರ ಅಭಿಪ್ರಾಯ ತಿಳಿಸುವಂತೆ ಸೂಚನೆ ನೀಡಿದರು. ಈ ವೇಳೆ ಕೆಲ ವರ್ತಕರು ಬೆಳಿಗ್ಗೆ ೭ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟರೆ ಸಾಕು, ಇದರಿಂದ ಜನರಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡುತ್ತದೆ, ಜನರೂ ಪೇಟೆಗೆ ಬರುವುದು ಸ್ವಲ್ಪ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು, ಇನ್ನು ಕೆಲವು ವರ್ತಕರು ಮಧ್ಯಾಹ್ನದವರೆಗೆ ಅಂಗಡಿ ತೆರೆದರೆ ಜನರ ಒತ್ತಡ ಉಂಟಾಗಿ ಗ್ರಾಹಕರು ಅಂತರ ಕಾಯ್ದುಕೊಳ್ಳುವುದಿಲ್ಲ ಆದುದರಿಂದ ದಿನ ಪೂರ್ತಿ ಅಂಗಡಿ ತೆರೆದು ಸಾಮಾಜಿಕ ಅಂತರ ಮಾಸ್ಕ್ ಉಪಯೋಗಿಸುವುದು, ಸ್ಯಾನಿಟೈಸರ್ ಬಳಸುವುದರ ಮೂಲಕ ಈಗೀರುವ ಯಥಾ ಸ್ಥಿತಿ ಮುಂದುವರಿಯುವ ಅಭಿಪ್ರಾಯ ವ್ಯಕ್ತಪಡಿಸಿದರು, ಇನ್ನಿಬ್ಬರು ವರ್ತಕರು ಅಭಿಪ್ರಾಯ ವ್ಯಕ್ತಪಡಿಸಿ, ದೂರದ ದಿಲ್ಲಿಯಲ್ಲಿ ಕೊರೋನಾ ಬಂದಾಗ ನಾವು ಇಲ್ಲಿ ಲಾಕ್ ಡೌನ್, ಜನತಾ ಕರ್ಪ್ಯೂ ಮೂಲಕ ಬೆಂಬಲಿಸಿ, ಜಾಗೃತಿ ಮೂಡಿಸಿದ್ದೆವೆ, ಈಗ ನಮ್ಮ ಊರಿಗೆ ಬಂದಾಗ ನಾವು ಯಾಕೆ ಕಠಿಣ ನಿರ್ಧಾರ ತೆಗೆದುಕೊಳ್ಳಬಾರದು, ಐದು ದಿನ ಅಥಾವ ಏಳು ದಿನ ಸಂಪೂರ್ಣ ಕಡಬ ಬಂದ್ ಮಾಡಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಒಮ್ಮತದ ನಿರ್ಧಾರಕ್ಕೆ ಬರಲು  ವಿಫಲ-ಯಥಾ ಸ್ಥಿತಿ ಮುಂದುವರಿಕೆ
ಕಡಬದ ವಿವಿಧ ವರ್ತಕರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದರಿಂದ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರಲು ವಿಫಲರಾಗಿ ಕೊನೆಗೆ ಈಗೀರುವ ಯಥಾ ಸ್ಥಿತಿಯಲ್ಲಿ ರಾತ್ರಿ ೯ ಗಂಟೆಯವರೆಗೆ ಅಂಗಡಿ ತೆರೆದು ವ್ಯಾಪಾರ ಮಾಡುವುದು, ಈ ಸಂದರ್ಭದಲ್ಲಿ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವಲ್ಲಿ ಕಟ್ಟು ನಿಟ್ಟಿನ ಕ್ರಮವನ್ನು ಅನುಸರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಸಹಕಾರಿ ಸಂಘಕ್ಕೆ ಭೇಟಿ ನೀಡಿದ 174  ಸದಸ್ಯರ ಪಟ್ಟಿ ಆರೋಗ್ಯ ಇಲಾಖೆಗೆ!
ಕಡಬ ಸಿ.ಎ. ಬ್ಯಾಂಕ್ ಅಧ್ಯಕ್ಷ ರಮೇಶ್ ಕಲ್ಪುರೆ ಮಾತನಾಡಿ, ನಮ್ಮ ಸಿ.ಎ ಬ್ಯಾಂಕನ್ನು ಈಗಾಗಲೇ ಮುಂದಿನ ಏಳು ದಿನಗಳವರೆಗೆ ಬಂದ್ ಮಾಡಿ, ಸಿಬ್ಬಂದಿಗಳು, ಕೆಲ ನಿರ್ದೇಶಕರನ್ನು ಸ್ವಯಂ ಹೋಂ ಕ್ವಾರಂಟೈನ್ ಮಾಡಲಾಗಿದೆ, ಕೊರೋನಾ ದೃಢಪಟ್ಟ ವ್ಯಕ್ತಿ ನಮ್ಮ ಬ್ಯಾಂಕಿಗೆ ಭೇಟಿ ನೀಡಿದ್ದು ಅಲ್ಲದೆ ಅವರ ಮನೆಯವರು ಬ್ಯಾಂಕಿಗೆ ಭೇಟಿ ನೀಡಿದ್ದರು, ಈ ಹಿನ್ನಲೆಯಲ್ಲಿ ಆ ಬಳಿಕ ಬ್ಯಾಂಕ್‌ಗೆ ಭೇಟಿ ನೀಡಿದ ಸದಸ್ಯರ ಮಾಹಿತಿಯನ್ನು ಸಿಸಿ ಟಿವಿಯ ಮೂಲಕ ಪರಿಶೀಲಿಸಲಾಗಿ ೧೭೪ ಸದಸ್ಯರ ಪಟ್ಟಿಯನ್ನು ಆರೋಗ್ಯ ಇಲಾಖೆಗೆ ನೀಡಿದ್ದೆವೆ ಎಂದ ರಮೇಶ್ ಕಲ್ಪುರೆ ಆ ಸದಸ್ಯರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಎಲ್ಲರೂ ಸಹಕರಿಸಬೇಕೆಂದರು. ಮತ್ತು ಕಡಬ ಸಿಎ ಬ್ಯಾಂಕ್ ಹಾಗೂ ಶಾಖೆಗಳಲ್ಲಿ ಸ್ಯಾನಿಟೈಸರ್ ಸಿಂಪಡನೆ ಮಾಡಲು ಅಗತ್ಯ ಇರುವ ಸ್ಯಾನಿಟೈಸರ್ ಸಿಗುತ್ತಿಲ್ಲ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಅವರಲ್ಲಿ ವಿನಂತಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.