Home_Page_Advt
Home_Page_Advt
Home_Page_Advt

ಗೆಜ್ಜೆಗಿರಿ ಕ್ಷೇತ್ರದಲ್ಲಿ ಜೂನ್ 14ರಿಂದ ಭಕ್ತರಿಗೆ ಅವಕಾಶ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಜೂನ್ ೮ರಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಿ ಕೊಡದೇ ಇರಲು ನಿರ್ಧರಿಸಲಾಗಿದೆ.

ಸರಕಾರ ಜೂನ್ ೮ರಿಂದ ದೇವಾಲಯಗಳನ್ನು ತೆರೆಯಲು, ಭಕ್ತರು ದೇವರ ದರ್ಶನ ಪಡೆಯಲು ಅನುಮತಿ ನೀಡಿದ್ದರೂ, ಮುಂಜಾಗರೂಕತಾ ಕ್ರಮವಾಗಿ ಒಂದು ವಾರ ಕಾಲ ದರ್ಶನ ಅವಕಾಶ ಮುಂದೂಡಲು ನಿರ್ಧರಿಸಲಾಗಿದೆ. ಜೂನ್ ೧೪ರ ಸಂಕ್ರಮಣದಂದು ಕ್ಷೇತ್ರವನ್ನು ಭಕ್ತರ ಪ್ರವೇಶಕ್ಕಾಗಿ ತೆರೆಯಲಾಗುವುದು. ಭಕ್ತರು ಸಹಕರಿಸಬೇಕು ಎಂದು ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ, ಕ್ಷೇತ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪೀತಾಂಬರ ಹೇರಾಜೆ ತಿಳಿಸಿದ್ದಾರೆ.
ಜೂ. ೧೪ರಿಂದ ಕ್ಷೇತ್ರದಲ್ಲಿ ಭಕ್ತರ ದರ್ಶನಕ್ಕೆ ಸಾಮಾಜಿಕ ಅಂತರದ ವ್ಯವಸ್ಥೆ ಮಾಡಲಾಗುವುದು. ಅದೇ ರೀತಿ ಸ್ಯಾನಿಟೈಸಿಂಗ್ ಮತ್ತು ಪ್ರತೀ ಭಕ್ತರ ಥರ್ಮಲ್ ಟೆಸ್ಟಿಂಗ್‌ಗೆ ವ್ಯವಸ್ಥೆ ಮಾಡಲಾಗುವುದು. ತೀರ್ಥ ಪ್ರಸಾದ ನೀಡುವುದು, ಸೇವೆಗಳಿಗೆ ಅವಕಾಶ ನೀಡುವುದು ಮತ್ತು ಅನ್ನದಾನ ನೀಡುವ ಬಗ್ಗೆ ಮುಂದಿನ ವಾರದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.