ಜೂ.8ರಿಂದ ಸಾರ್ವಜನಿಕರಿಗೆ ದೇವಸ್ಥಾನ ಪ್ರವೇಶಾವಕಾಶ | ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿದ್ಧತೆ

Puttur_Advt_NewsUnder_1
Puttur_Advt_NewsUnder_1
  1. ಮುಂದಿನ ಆದೇಶದ ತನಕ ಸೇವೆಗಳು ತಾತ್ಕಾಲಿಕ ಸ್ಥಗಿತ
  2. ದೇವಳದ ಪ್ರವೇಶದ್ವಾರ ಆವರಣಗಳಲ್ಲಿ ಕಡ್ಡಾಯ ಸ್ವಚ್ಛತೆ
  3. ಭಕ್ತಾದಿಗಳ ಉಷ್ಟಾಂಶ ತಪಾಸಣೆ ಕೈಗಳಿಗೆ ಸ್ಯಾನಿಟೈಸರ್ ಕಡ್ಡಾಯ ಮುಖವಸ್ತ್ರ, ಸಾಮಾಜಿಕ ಅಂತರ
  4. ಪಾದರಕ್ಷೆ ಧರಿಸಿ ದೇವಳದ ಆವರಣಕ್ಕೆ ಬರುವಂತಿಲ್ಲ
  5. ಮುಂದಿನ ಆದೇಶ ತನಕ ವೃದ್ಧರು,ಮಕ್ಕಳು,ಗರ್ಭಿಣಿಯರು ಅಸ್ವಸ್ಥರಿಗೆ ಪ್ರವೇಶವಿಲ್ಲ
  6. ದೇವಳದ ಯಾವುದೇ ವಸ್ತುವನ್ನು ಮುಟ್ಟುವಂತಿಲ್ಲ
  7. ದೇವಳದ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಬಳಕೆ

ಪುತ್ತೂರು:ಕೊರೋನಾ ಮಹಾಮಾರಿಯಿಂದಾಗಿ ಭಕ್ತಾದಿಗಳಿಗೆ ದೇವಳದ ಪ್ರವೇಶಾವಕಾಶ ನಿರ್ಬಂಧಿಸಲ್ಪಟ್ಟು ೮೦ ದಿನಗಳ ಬಳಿಕ ಜೂ.೮ರಿಂದ ಭಕ್ತರಿಗೆ ಕೆಲವೊಂದು ನಿಬಂಧನೆಗಳೊಂದಿಗೆ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ದೇವಾಲಯಗಳಲ್ಲಿ ದೇವರ ದರ್ಶನ ಭಾಗ್ಯವನ್ನು ಧಾರ್ಮಿಕ ದತ್ತಿ ಇಲಾಖೆಯು ಅವಕಾಶ ಮಾಡಿಕೊಟ್ಟಿರುವುದರಿಂದ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೆಲವೊಂದು ಕಡ್ಡಾಯ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸರಕಾರದ ಆದೇಶಕ್ಕೆ ತಕ್ಕಂತೆ ಎಲ್ಲಾ ಸಿದ್ಧತೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ದೇವಾಲಯಗಳಲ್ಲಿ ಜೂ.೮ರಿಂದ ಭಕ್ತಾದಿಗಳಿಗೆ ದರ್ಶನ ವ್ಯವಸ್ಥೆ ಕಲ್ಪಿಸಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸುವ ಸಲುವಾಗಿ ಧಾರ್ಮಿಕ ದತ್ತಿ ಆಯುಕ್ತರ ಅಧ್ಯಕ್ಷತೆಯಲ್ಲಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೂ.೮ರಂದು ವಿಡಿಯೋ ಸಂವಾದ ನಡೆದಿದೆ.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದು, ಪುತ್ತೂರು ದೇವಳದಲ್ಲಿ ಕೈಗೊಳ್ಳುವ ವಿವಿಧ ಮುನ್ನೆಚ್ಚರಿಕೆ ಕ್ರಮದ ಕುರಿತು ಅವರು ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ.

ಏನೆಲ್ಲಾ ಕ್ರಮಗಳು: ಜನ ಸಂದಣಿ ಸೇರುವ ಉತ್ಸವಗಳಾದ ಬ್ರಹ್ಮರಥೋತ್ಸವ/ಜಾತ್ರೆ ಮುಂತಾದ ವಿಶೇಷ ಪೂಜೆಗಳನ್ನು ಇತರೆ ಎಲ್ಲಾ ರೀತಿಯ ಉತ್ಸವಗಳನ್ನು ಹಾಗೂ ದೇವಾಲಯದಲ್ಲಿ ನಡೆಯುವ ಸೇವೆಗಳನ್ನು ತಾತ್ಕಾಲಿಕವಾಗಿ ಮುಂದಿನ ಆದೇಶದ ತನಕ ನಿಷೇಧಿಸಲಾಗಿದೆ.ದೇವಳದ ಪ್ರವೇಶದ್ವಾರ ಮತ್ತು ಆವರಣಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆ ಕಾಪಾಡುವುದು ಮತ್ತು ದೇವಳಕ್ಕೆ ಬರುವ ಭಕ್ತಾದಿಗಳ ದೇಹದ ಉಷ್ಟತೆಯನ್ನು ಥರ್ಮೋಮೀಟರ್‌ನಿಂದ ತಪಾಸಣೆ ಮಾಡುವುದು ಮತ್ತು ಕೈಗಳಿಗೆ ಸ್ಯಾನಿಟೈಸರ್ ಬಳಸುವುದು. ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡುವುದು. ಭಕ್ತಾದಿಗಳ ಸರತಿ ಸಾಲಿನಲ್ಲಿ ಮಾರ್ಕ್‌ಗಳನ್ನು ಗುರುತಿಸುವುದು. ಆಯಾ ದೇವಾಲಯಗಳಲ್ಲಿ ಅಗತ್ಯಕ್ಕೆ ತಕ್ಕಂತೆ ತಾತ್ಕಾಲಿಕ ಸರತಿ ಸಾಲುಗಳನ್ನು ನಿರ್ಮಿಸಿಕೊಳ್ಳುವುದು, ಮುಖವಸ್ತ್ರಗಳನ್ನು ಧರಿಸಿದವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ಅವಕಾಶ ನೀಡುವುದು.ಪಾದರಕ್ಷೆಗಳನ್ನು ಅವರವರ ವಾಹನಗಳಲ್ಲಿಯೇ ಅಥವಾ ಪ್ರತ್ಯೇಕ ಸ್ಥಗಳಲ್ಲಿ ಬಿಡುವುದು. ಪಾದರಕ್ಷೆಗಳನ್ನು ಬಳಸಿ ದೇವಳದ ಆವರಣಕ್ಕೆ ಬರುವಂತಿಲ್ಲ.ಮುಂದಿನ ಆದೇಶದ ತನಕ ೬೫ ವರ್ಷದ ವೃದ್ಧರು, ೧೦ ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಆದಷ್ಟು ಮನೆಯಲ್ಲಿಯೇ ಇದ್ದು ಸಹಕರಿಸುವುದು ಹಾಗೂ ಅಸ್ವಸ್ಥರು ದೇವಾಲಯದ ಒಳಗೆ ಪ್ರವೇಶಿಸುವುದನ್ನು ನಿಷೇಧಿಸಿದೆ.ದೇವಾಲಯಕ್ಕೆ ಬರುವ ಭಕ್ತಾದಿಗಳು ದೇವಾಲಯದ ಗೋಡೆ, ಕಂಬ, ವಿಗ್ರಹ, ರಥ, ಪಲ್ಲಕ್ಕಿ, ಧಾರ್ಮಿಕ ಗ್ರಂಥ, ಪುಸ್ತಕ ಮುಂತಾದವುಗಳನ್ನು ಮುಟ್ಟುಂತಿಲ್ಲ.ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು ಹಾಗೂ ದೇವಾಲಯದ ಒಳಾಂಗಣ ಮತ್ತು ಹೊರಾಂಗಣ ಹಾಗೂ ಇತರೆ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಆರೋಗ್ಯ ಸೇತು ಆಪ್‌ನ್ನು ಅವರವರ ಮೊಬೈಲ್‌ಗಳಲ್ಲಿ ಅಳವಡಿಸಿಕೊಳ್ಳಬೇಕು. ಎಂಬಿತ್ಯಾದಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಎಲ್ಲಾ ದೇವಸ್ಥಾನಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.