ವಿಶ್ವ ಪರಿಸರ ದಿನಾಚರಣೆ- ಯುವ ಗೌಡ ಸಂಘದ ನೇತೃತ್ವದಲ್ಲಿ ಸಸಿ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ವಾಣಿಜ್ಯ ಬೆಳೆಗೆ ಪರ್ಯಾಯವಾಗಿ ರಕ್ತಚಂದನ ಗಿಡಗಳನ್ನು ಬೆಳೆಸಿ –ಜಿ.ಮೋಹನ್
  • ಪ್ರಾಣಿ, ಸಸ್ಯ ಸಂಕುಲದಿಂಗದ ಪರಿಸರ ಸಮತೋಲನ- ಹೆಚ್.ಡಿ.ಶಿವರಾಮ್
  • ಪರಿಸರವಿದ್ದರೆ ನಮ್ಮ ಬದುಕು – ಚಿದಾನಂದ ಬೈಲಾಡಿ
  • ಕಳೆದ ವರ್ಷ ಸಾರ್ವಜನಿಕ ಸಸಿ ವಿತರಣೆ – ರಾಧಾಕೃಷ್ಣ ನಂದಿಲ

ಪುತ್ತೂರು: ವಾಣಿಜ್ಯ ಬೆಳೆಗಳಾದ ಅಡಿಕೆ, ರಬ್ಬರ್, ಸೇರಿದಂತೆ ಹಲವಾರು ಕೃಷಿಗಳಿಗೆ ತಗಲುವ ರೋಗ ಬಾದೆ, ಕಾಡು ಪ್ರಾಣಿಗಳ ಉಪ್ಪಟಳಕ್ಕೆ ಪರ್ಯಾಯ ಬೆಳೆಯಾಗಿ ಕೃಷಿಕರು ತಮ್ಮ ಕೃಷಿ ಜಾಗದ ಬೌಂಡ್ರಿ ಸುತ್ತ ರಕ್ತಚಂದನ ಗಿಡಗಳನ್ನು ಬೆಳೆಸಿದರೆ ವಾಣಿಜ್ಯ ಬೆಳೆಯೊಂದಿಗೆ ಪರಿಸರವನ್ನು ಉಳಿಸಿದಂತೆ ಆಗುತ್ತದೆ ಎಂದು ಪುತ್ತೂರು ವಲಯ ಅರಣ್ಯಾಧಿಕಾರಿ ಜಿ.ಮೋಹನ್ ಅವರು ಹೇಳಿದ್ದಾರೆ.

ವಿಶ್ವ ಪರಿಸರ ದಿನದ ಅಂಗವಾಗಿ ತಾಲೂಕುಕ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವ ಮತ್ತು ಯುವ ಒಕ್ಕಲಿಗ ಗೌಡ ಸಂಘದ ನೇತೃತ್ವದಲ್ಲಿ ಪುತ್ತೂರು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಇಲಾಖೆಯಿಂದ ನೀಡಿದ ರಕ್ತ ಚಂದನ ಸೇರಿದಂತೆ ಕಾಡುಉತ್ಪತಿ ಗಿಡಗಳನ್ನು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜೂ.೭ರಂದು ಸಮಾಜ ಬಾಂಧವರಿಗೆ ವಿತರಿಸಿ ಮಾತನಾಡಿದರು. ದಕ್ಷಿಣ ಕನ್ನಡ ಭಾಗದಲ್ಲಿ ಅನೇಕ ಮಂದಿ ವಾಣಿಜ್ಯ ಬೆಳೆಯಾಗಿ ಅಡಿಕೆ, ಬಾಳೆ, ರಬ್ಬರ್, ತೆಂಗುವನ್ನು ಹೊಂದಿಕೊಂಡಿದ್ದಾರೆ. ಆದರೆ ಬಹುಪಾಲು ಕೃಷಿಯನ್ನು ಕಾಡು ಪ್ರಾಣಿಗಳ ಉಪಟಳದಿಂದ ಹಾನಿಯಾಗುತ್ತದೆ. ಇದರ ಜೊತೆಗೆ ಅಡಿಕೆ ಕೊಳೆರೋಗ ಬಾದೆಯಿಂದ ಕೃಷಿಕರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ ರೈತರ ಆರ್ಥಿಕತೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ತಮ್ಮ ತಮ್ಮ ತೋಟಗಳ ಬೌಂಡ್ರಿಗಳ ಸುತ್ತ ರಕ್ತಚಂದನ, ಗಂಧ, ಸಾಗುವಾಣಿ ಗಿಡಗಳನ್ನು ಬೆಳೆಸಿ. ೨೦ ರಿಂದ ೩೦ ವರ್ಷದ ಒಳಗೆ ಉತ್ತಮ ಬೆಲೆ ಬಾಳುವ ಮರಗಳಾಗುತ್ತವೆ. ಇದರ ಜೊತೆ ಪರಿಸರವನ್ನು ಕಾಪಾಡಿದಂತಾಗುತ್ತದೆ ಎಂದು ಅವರು ಹೇಳಿದರು.

 

ಪ್ರಾಣಿ, ಸಸ್ಯ ಸಂಕುಲದಿಂಗದ ಪರಿಸರ ಸಮತೋಲನ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಹೆಚ್.ಡಿ.ಶಿವರಾಮ್ ಅವರು ಮಾತನಾಡಿ ಗಿಡ ನೆಟ್ಟರೆ ಸಾಲದು ಅದನ್ನು ಪೋಷಿಸಬೇಕು. ಸಾಲು ಮರದ ತಿಮ್ಮಕ್ಕನಂತೆ ನಾವು ಇತರರಿಗೆ ಪ್ರೇರಣೆ ಆಗಬೇಕು. ಪರಿಸರ ನಾಶ ಮಾಡುವರನ್ನು ತಡೆಯುವ ಕೆಲಸವೂ ಆಗಬೇಕು. ಜೀವ ವೈವಿಧ್ಯ ಇರಲೇ ಬೇಕು. ಪ್ರಾಣಿ ಮತ್ತು ಸಸ್ಯ ಸಂಕುಲದಿಂದ ಪರಿಸರ ಸಮಲೋನ ಸಾಧ್ಯ ಎಂದು ಹೇಳಿದರು.

ಪರಿಸರವಿದ್ದರೆ ನಮ್ಮ ಬದುಕು:
ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ಸಾಂಕ್ರಾಮಿಕ ರೋಗಗಳ ನಡುವೆಯೂ ಪರಿಸರ ಉಳಿಸುವ ಕಾಳಜಿ ನಮ್ಮ ಯುವ ಸಂಘದ ಮೂಲಕ ನಡೆಯುತ್ತಿರುವುದು ಪರಿಸರದ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ. ಪರಿಸರವಿದ್ದರೆ ನಮ್ಮ ಬದುಕು ಎಂಬಂತೆ ಗಿಡ ನೆಡುವ ಮೂಲಕ ಅದನ್ನು ನಿತ್ಯ ಪೋಷಣೆ ಮಾಡುವ ಕಾರ್ಯ ಮಾಡಲಿದ್ದೇವೆ ಎಂದು ಹೇಳಿದರು.

ಕಳೆದ ವರ್ಷ ಸಾರ್ವಜನಿಕ ಸಸಿ ವಿತರಣೆ:
ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಧಾಕೃಷ್ಣ ನಂದಿಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ವರ್ಷ ನಾವು ಸಾರ್ವಜನಿಕವಾಗಿ ಸಸಿ ವಿತರಣೆ ಮಾಡಿದ್ದೆವು. ಈ ಭಾರಿ ಕೊರೋನಾ ಮಹಾಮಾರಿಯಿಂದಾಗಿ ಸಾರ್ವಜನಿಕವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗದಿದ್ದರೂ ಸಂಘದ ಮೂಲಕ ಸಸಿ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸುಮಾರು ೧ಸಾವಿರ ರಕ್ತ ಚಂದನ ಗಿಡಗಳನ್ನು ಸಮಾಜ ಬಾಂದವರಿಗೆ ವಿತರಣೆ ಮಾಡಲಿದ್ದೇವೆ ಎಂದು ಹೇಳಿದರು. ಸಸಿ ವಿತರಣೆ ಬಳಿಕ ಸಮುದಾಯ ಭವನದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಈ ಸಂದಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ವಿಶ್ವನಾಥ, ಖಜಾಂಜಿ ಸುರೇಶ್ ಗೌಡ ಕಲ್ಲಾರೆ, ಸಂಘದ ನಿಕಟಪೂರ್ವ ಕಾರ್ಯದರ್ಶಿ ನಾಗಪ್ಪ ಗೌಡ ಬೊಮ್ಮೆಟ್ಟಿ, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಪದಾಧಿಕಾರಿಗಳಾದ ಪ್ರತಿಭಾ, ವಾರಿಜ, ಗೀತಾ ಎ, ಸಂದ್ಯಾಶಶಿಧರ್, ರಾಧಾ, ಗೌಡ ಸಮುದಾಯ ಭವನದ ಉಸ್ತುವಾರಿ ಸಮಿತಿ ಅಧ್ಯಕ್ಷ ಪ್ರೇಮಾನಂದ ಗೌಡ, ಯುವ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಸಂಜೀವ ಗೌಡಪಾಲ್ತಾಡಿ, ಗೋವರ್ಧನ ಗೌಡ, ರಮೇಶ್ ಬೇರಿಕೆ, ಶಿವರಾಮ ಗೌಡ ಬಂಡಾಡಿ, ಶ್ರೀಧರ ಗೌಡ ಕುಬಲ ಸೇರಿದಂತೆ ಸಮಾಜ ಬಾಂದವರು ಉಪಸ್ಥಿತರಿದ್ದರು. ಯುವ ಗೌಡ ಸಂಘದ ಸಾಂಸ್ಕ್ರತಿಕ ಕಾರ್ಯದರ್ಶಿ ಪರಮೇಶ್ವರ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.