Home_Page_Advt
Home_Page_Advt
Home_Page_Advt

ಶಾಂತಿಗೋಡು:ಸಂಶಯಾಸ್ಪದ ಡೆಂಗ್ಯು ಪ್ರದೇಶಗಳಿಗೆ ಜಿ.ಪಂ ಅಧ್ಯಕ್ಷೆ ಭೇಟಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಾಂತಿಗೋಡು ಗ್ರಾಮದ ಕಲ್ಲುಕೋಟೆ ಹಾಗೂ ಪಾಣಂಬು ಪರಿಸರದಲ್ಲಿ ಸಂಶಯಾಸ್ಪದ ಡೆಂಗ್ಯು ಜ್ವರ ಕಾಣಿಸಿಕೊಂಡಿದ್ದು ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಲ್ಲುಕೋಟೆ ಹಾಗೂ ಪಾಣಂಬು ಪರಿಸರ‌ದ ಹಲವು ಮನೆಗಳಿವೆ ಭೇಟಿ ಮಾಡಿ ಜನರಲ್ಲಿ ಡೆಂಗ್ಯು ಸೊಳ್ಳೆಗಳು ಉತ್ಪತ್ತಿಯಾಗುವ ವಿಧಾನಗಳು, ಸೊಳ್ಳೆ‌ ಉತ್ಪತ್ತಿಯಾಗದಂತೆ  ಮುಂಜಾಗ್ರತೆ ವಹಿಸುವುದು, ಮನೆಯ ಪರಿಸರದಲ್ಲಿ ನೀರು‌ ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅರಿವು ಮೂಡಿಸಲಾಯಿತು. ಜನರಿಗೆ ಆರೋಗ್ಯ ಶಿಕ್ಷಣ ನೀಡುವುದರ ಜೊತೆಗೆ ಲಾರ್ವಾ ಪ್ರಾತ್ಯಕ್ಷಿಕೆಯೊಂದಿಗೆ ಅರಿವು ಮೂಡಿಸಲಾಯಿತು.
 

ತಾಲೂಕು ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ಎಂ.ಎನ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಮಿತಾ, ಹಿರಿಯ ಆರೋಗ್ಯ ಸಹಾಯಕರು, ಕ್ಷಯ ವಿಭಾಗ ಆರೋಗ್ಯಾಧಿಕಾರಿ  ವೆಂಕಟೇಶ್ ಹುದ್ಧಾರ,  ಆಶಾ ಮೇಲ್ವಿಚಾರಕಿ ಸುಜಾತಾ, ಕಿರಿಯ ಆರೋಗ್ಯ ಸಹಾಯಕ ರವಿಶಂಕರ್, ಕಿರಿಯ ಆರೋಗ್ಯ ಸಹಾಯಕಿಯರು, ಆಶಾ ಸುಗಮಕಾರರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.