HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ದರ್ಶನಕ್ಕೆ ಭಕ್ತಾದಿಗಳಿಗೆ ಮಾರ್ಗಸೂಚಿ

Puttur_Advt_NewsUnder_1
Puttur_Advt_NewsUnder_1
  • ಜ್ವರ, ಕೆಮ್ಮು, ಶೀತ ಭಾಧಿತ ಭಕ್ತರಿಗೆ ಪ್ರವೇಶವಿಲ್ಲ.
  • ಗಂಧ, ತೀರ್ಥ, ಪ್ರಸಾದ ಅನ್ನಪ್ರಸಾದ ಇಲ್ಲ
  • ದೇವಳದಲ್ಲಿ ಅಡ್ಡ ಬೀಳುವುದು, ಕೂರುವುದಕ್ಕೆ ಅವಕಾಶವಿಲ್ಲ
  • ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ

ಪುತ್ತೂರು : ಕೊರೊನಾ ಲಾಕ್‌ಡೌನ್‌ನಿಂದಾಗಿ ಸುಮಾರು ಎರಡೂವರೆ ತಿಂಗಳ ಕಾಲ ಭಕ್ತರ ಪ್ರವೇಶಕ್ಕೆ ನಿಶೇಧವಿದ್ದ ಧಾರ್ಮಿಕ ಕೇಂದ್ರಗಳು ಜೂ.೮ರಿಂದ ಭಕ್ತರ ದರ್ಶನಕ್ಕೆ ತೆರೆಯಲಿದೆ. ಕೊರೊನಾ ಲಾಕ್ ಡೌನ್ ಬಳಿಕ ಕೇಂದ್ರ ಸರಕಾರ ಅನ್ ಲಾಕ್ ೧ ನಿಯಮಗಳನ್ನು ಜಾರಿಗೆ ತಂದಿದ್ದು ಕೆಲವು ನಿಯಮಗಳನ್ನು ಪಾಲಿಸುವ ಮೂಲಕ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ದೇವರ ದರ್ಶನದ ಅವಕಾಶವನ್ನು ಕಲ್ಪಿಸಲಾಗಿದೆ.

ನಿಯಮಗಳು: ಕುಕ್ಕೆ ಶ್ರಿಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಬೆಳಗ್ಗೆ ೮.೩೦ ರಿಂದ ಸಂಜೆ ೫.೩೦ ರವರೆಗೆ ಮಾತ್ರ ಶ್ರೀ ದೇವರ ದರ್ಶನಕ್ಕೆ ಅವಕಾಶವಿದೆ. ಜೂ.೩೦ ರವರೆಗೆ ದೇವಳದ ವಸತಿಗೃಹಗಳಲ್ಲಿ ತಂಗಲು ಅವಕಾಶವಿರುವುದಿಲ್ಲ. ದೇವಳದ ಮುಂಭಾಗದಲ್ಲಿ ಕಡ್ಡಾಯವಾಗಿ ಥರ್ಮಾಮೀಟರ್‌ನಿಂದ ನಿಂದ ತಪಾಸಣೆ ಮಾಡಲಾಗುವುದು. ಕೈಗಳಿಗೆ ಸ್ಯಾನಿಟೈಸರ್ ನೀಡಲಾಗುವುದು. ಜ್ವರ, ಕೆಮ್ಮು, ಶೀತದ ಲಕ್ಷಣವಿರುವ ಭಕ್ತರಿಗೆ ಕಡ್ಡಾಯವಾಗಿ ದೇಗುಲದ ಒಳಗೆ ಪ್ರವೇಶವಿಲ್ಲ. ದರ್ಶನಕ್ಕೆ ಸ್ವತಃ ಭಕ್ತರೇ ಶಲ್ಯ/ಶಾಲು ತಂದು ಮೇಲು ಹೊದ್ದು, ದರ್ಶನ ಮಾಡುವುದು. ದೇವಳದ ಆಡಳಿತ ಮಂಡಳಿಯಿಂದ ಯಾವುದೇ ಶಲ್ಯ / ಶಾಲಿನ ವ್ಯವಸ್ಥೆ ಇರುವುದಿಲ್ಲ. ದೇವಳದಲ್ಲಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿದೆ. ಗಂಧ, ತೀರ್ಥ, ಮಂಗಳಾರತಿ, ಪ್ರಸಾದ ಹಾಗೂ ಅನ್ನಪ್ರಸಾದ ವಿನಿಯೋಗವಿರುವುದಿಲ್ಲ. ದೇವಾಲಯದ ಒಳಗಡೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಗುರುತಿಸಿರುವ ಪ್ರದೇಶದಲ್ಲಿ ಮಾತ್ರ ನಿಲ್ಲುವ ಅವಕಾಶವಿದೆ. ದೇವಳದ ಗೋಡೆ, ಕಂಭ ಇತ್ಯಾದಿಗಳನ್ನು ಭಕ್ತಾದಿಗಳು ಮುಟ್ಟುವಂತಿಲ್ಲ. ದೇವಳದಲ್ಲಿ ಅಡ್ಡ ಬೀಳುವುದು ಹಾಗೂ ಕೂರುವುದಕ್ಕೆ ಅವಕಾಶವಿಲ್ಲ. ಮಾಸ್ಕ್ ಧರಿಸದ ಭಕ್ತಾದಿಗಳಿಗೆ ಪ್ರವೇಶವಿಲ್ಲ. ಪ್ರಸ್ತುತ ಕೋವಿಡ್ ಸನ್ನಿವೇಶವು ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ ೬೫ ವರ್ಷ ದಾಟಿದವರು ಹಾಗೂ ೧೦ ವರ್ಷಗಳ ಒಳಗಿನ ಮಕ್ಕಳು, ಗರ್ಭಿಣಿಯರಿಗೆ ಮುಂಜಾಗೃತಾ ಕ್ರಮವಾಗಿ ದೇವಾಲಯದ ಭೇಟಿ ಇಲ್ಲ. ದೇವಳದ ಒಳಗೆ ನಿರ್ಧಿಷ್ಟ Time Slot ಗಳಲ್ಲಿ ಭಕ್ತಾದಿಗಳಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಟೋಕನ್ ವಿತರಿಸಿ, ಸೂಕ್ತ ಕ್ರಮ ವಹಿಸಲಗುವುದು. ದೇವಳದ ಕಲ್ಯಾಣಿ, ಸ್ನಾನಘಟ್ಟಗಳಲ್ಲಿ ಸ್ನಾನ ಮಾಡಲು ಅನುಮತಿ ಇರುವುದಿಲ್ಲ.

ಈ ಎಲ್ಲಾ ಕ್ರಮಗಳನ್ನು ಪಾಲಿಸಿ ಕೋವಿಡ್ ಸೋಂಕು ಹರಡದಂತೆ ಕ್ರಮವಹಿಸಲು ಎಲ್ಲಾ ಭಕ್ತಾದಿಗಳು ದೇವಳದ ಆಡಳಿತ ಮಂಡಳಿಯೊಂದಿಗೆ ಸಹಕರಿಸಬೇಕೆಂದು ಆಡಳಿತಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ರೂಪ ಎಂ.ಜೆ. ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.