Home_Page_Advt
Home_Page_Advt
Home_Page_Advt

ಬೆಳ್ಳಿಪ್ಪಾಡಿ ಗ್ರಾಮದ ಕಠಾರದಲ್ಲಿ ಕೋಳಿ ಅಂಕ -ಪೊಲೀಸರ ಕಾರ್ಯಾಚರಣೆ -೪ ಮಂದಿ ಬಂಧನ, ಓರ್ವ ಪರಾರಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಣವನ್ನು ಪಣವನ್ನಾಗಿರಿಸಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಪುತ್ತೂರು ನಗರ ಠಾಣಾ ಎಸ್.ಐ ಜಂಬುರಾಜ್ ಮಹಾಜನ್ ಅವರ ನೇತೃತ್ವದಲ್ಲಿ ನಡೆದ ದಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ ೪ ಮಂದಿಯನ್ನು ಬಂಧಿಸಿದ ಘಟನೆ ಬೆಳ್ಳಿಪ್ಪಾಡಿ ಗ್ರಾಮದ ಕಠಾರದಲ್ಲಿ ಜೂ.7ರಂದು ನಡೆದಿದೆ.
ಬೆಳ್ಳಿಪ್ಪಾಡಿ ಗ್ರಾಮದ ಕಠಾರ ಹೊಳೆಯ ಬಳಿ ಕೋಳಿ ಅಂಕ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿಸಿ ನಡೆಸಿದ ಪೊಲೀಸರು ಆರೋಪಿಗಳಾದ ಕುರಿಯ ಗ್ರಾಮದ ಕಲ್ಲರ್ಪೆ ದಿ.ಅಣ್ಣಿಪೂಜಾರಿ ಅವರ ಪುತ್ರ ಪ್ರವೀಣ್(33ವ), ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ದಿ.ಕುಂಜರ ಅವರ ಪುತ್ರ ಜನಾರ್ದನ(35ವ), ಬೆಳ್ಳಿಪ್ಪಾಡಿ ಗ್ರಾಮದ ಕಠಾರ ನಿವಾಸಿ ಬೇಬಿ ಪೂಜಾರಿ(70ವ), ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ದಿ.ಚೆನ್ನಪ್ಪ ಅವರ ಪುತ್ರ ಸುರೇಶ್(26ವ) ಬಂಧಿತ ಆರೋಪಿಗಳು. ಕಾರ್ಯಾಚರಣೆ ವೇಳೆ ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾರೆ. ಬಂಧಿತ ಆರೋಪಿಗಳಿಂದ ಮೂರು ಹೂಂಜ ಕೋಳಿ, ಎರಡು ದ್ವಿಚಕ್ರ ವಾಹನ, 1 ಮೊಬೈಲ್, ಮತ್ತು ಕೋಳಿ ಅಂಕಕ್ಕೆ ಬಳಸಿದ ರೂ. 2.210 ನಗದನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಡಿವೈಎಸ್ಪಿ ದಿನಕರ್ ಶೆಟ್ಟಿಯ ಮತ್ತು ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ತಿಮ್ಮಪ್ ನಾಯ್ಕ್ ಅವರ ನಿರ್ದೇಶನದಂತೆ, ಎಸ್.ಐ ಜಂಬುರಾಜ್ ಮಹಾಜನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎ.ಎಸ್.ಐ ಲೋಕನಾಥ್, ಹೆಡ್‌ಕಾನ್‌ಸ್ಟೇಬಲ್‌ಗಳಾದ ಜಯರಾಮ, ಕೃಷ್ಣಪ್ಪ, ಕಾನ್‌ಸ್ಟೇಬಲ್‌ಗಳಾದ ನಾಗರಾಜ್, ಶರೀಫ್, ಶ್ರೀಶೈಲ ಅವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.