HomePage_Banner
HomePage_Banner
HomePage_Banner
HomePage_Banner

ಕೊರೋನಾ ಮಾಹಾಮಾರಿಯನ್ನು ಹೊಡೆದೋಡಿಸೊ ದೇವಾ | ಲೋಕಕಲ್ಯಾಣಕ್ಕಾಗಿ ಕಿಶೋರ್ ಬೊಟ್ಯಾಡಿ ನೇತೃತ್ವದಲ್ಲಿ ಶ್ರೀಕ್ಷೇತ್ರ ಕದ್ರಿಯಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಸೋಂಕು ಮುನ್ನೆಚ್ಚರಿಕೆ ಕ್ರಮವಾಗಿ ಹಲವು ದಿನಗಳ ಬಳಿಕ ಜೂ.8ರಂದು ದೇವಸ್ಥಾನಗಳಲ್ಲಿ ಶ್ರೀ ದೇವರ ದರ್ಶನಕ್ಕೆ ಅವಕಾಶ ಸಿಕ್ಕಿದ‌ ಬೆನ್ನಲ್ಲೆ ಕೊರೋನಾ ಎಂಬ ಮಹಾಮಾರಿಯನ್ನು ಹೊಡೆದೋಡಿಸಲು ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಉದ್ಯಮಿ ಪುತ್ತೂರು ನಿವಾಸಿ ಕಿಶೋರ್ ಬೊಟ್ಯಾಡಿಯವರ ನೇತೃತ್ವದಲ್ಲಿ ಮಂಗಳೂರಿನಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆ ಯಾತ್ರೆ ನಡೆಸಿದರು.

ಜೂ.7ರಂದು ಸಂಜೆ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಿಂದ ಹೊರಟ ಕಿಶೋರ್ ಬೊಟ್ಯಾಡಿ, ಹರ್ಷಿತ್ ಭಟ್, ವಸಂತ ಪೂಜಾರಿ, ಮಾಜಿ ಕಾರ್ಪೋರೇಟ್ ರಘುವೀರ್ ಪಣಂಬೂರು, ಮಂಜುನಾಥ್ ಅವರು ಜೂ.೮ ರಂದು ಬೆಳಿಗ್ಗೆ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿದ್ದರು. ಬೆಳಿಗ್ಗೆ ಶ್ರೀ ದೇವರ ದರ್ಶನ ಪಡೆದು‌ ಮಂಗಳೂರಿಗೆ ವಾಪಾಸಾದರು.

ಲೋಕಕಲ್ಯಾರ್ಥವಾಗಿ ದೇವರ ಸನ್ನಿಧಾನಕ್ಕೆ ಕಾಲ್ನಡಿಗೆ

ಕೊರೋನಾ ಮಹಾಮಾರಿಯಿಂದ ದೇಶದ‌ ಜನತೆಗೆ ತೊಂದರೆ ಉಂಟಾಗಿದೆ. ಆನೇಕ ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಂಕ್ರಾಮೀಕ ರೋಗಗಳಿಂದ ದೇಶವನ್ನು‌‌ ಮುಕ್ತಗೊಳಿಸಿ ಲೋಕಕಲ್ಯಾಣ ಆಗಬೇಕೆಂದು ಪ್ರಾರ್ಥಿಸಿಕೊಂಡು ಕಾಲ್ನಡಿಗೆ ಮಾಡಿದ್ದೇವೆ – ಕಿಶೋರ್ ಬೊಟ್ಯಾಡಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.