HomePage_Banner
HomePage_Banner
HomePage_Banner

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಲಾಕ್‌ಡೌನ್ ಘೋಷಣೆಗೆ ಮೊದಲೆ ಭಕ್ತರ ಪ್ರವೇಶ ನಿರ್ಬಂಧಿಸಲ್ಪಟ್ಟಿದ್ದ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯ 73 ದಿನಗಳ ಬಳಿಕ ಜೂ.8ರ ಸೋಮವಾರದಿಂದ ಭಕ್ತರಿಗೆ ಶ್ರೀದೇವರ ದರ್ಶನಕ್ಕೆ ಅವಕಾಶ ಸಿಕ್ಕಿದೆ.

ಬೆಳಗ್ಗೆ ಗಂಟೆ 6 ಕ್ಕೆ ದೇವಾಲಯದ ಮುಂಭಾಗದ ಬಾಗಿಲಿನಿಂದ ಭಕ್ತರಿಗೆ ಪ್ರವೇಶಾವಕಾಶ ನೀಡಲಾಗಿದೆ. ಶ್ರೀ ದೇವರ ದರುಶನವಂಚಿರಾಗಿದ್ದ ಭಕ್ತರು ಸೋಮವಾರ ದೇವಾಲಯಕ್ಕೆ ಭೇಟಿ ನೀಡಿ ಶ್ರೀಮಹಾಲಿಂಗೇಶ್ವರ ದೇವರ ಸಹಿತ ಪರಿವಾರ ದೇವರುಗಳ ದರುಶನ ಗೈದು ಹುಂಡಿಗಳಿಗೆ ಕಾಣಿಕೆ, ಎಳ್ಳೆಣ್ಣೆ, ಸೀಯಾಳ ಸಮರ್ಪಣೆ ಮಾಡಿ ಪುನೀತರಾದರು.

ದೇವಸ್ಥಾನದ ಸುತ್ತುಪೌಳಿಯ ಸುತ್ತು ಚೌಕಾಕಾರದ ಮಾರ್ಕ್ ಮಾಡಿದ್ದು ಭಕ್ತರು ಅದನ್ನು ಬಳಸಿಕೊಂಡು ಸರಥಿ ಸಾಲಿನಲ್ಲಿ ದೇವಳದ ಮುಂಭಾಗದ ಬಾಗಿಲಿನಿಂದ ದೇವಳದ ಒಳಾಂಗಣ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಂತೆ ಭಕ್ತರು ದೇವಳದ ಒಳಾಂಗಣ ಪ್ರವೇಶಿಸಿದರು. ಒಳಾಂಗಣ ಪ್ರವೇಶಕ್ಕೂ ಮುಂದೆ ಭಕ್ತರಿಗೆ ಸ್ಯಾನಿಟೈಸರ್ ನೀಡಿ ಬಳಿಕ ದೇಹದ ಉಷ್ಣತೆ ಪರೀಕ್ಷಿಸಿ ನಂತರ ದೇವಾಲಯವನ್ನು ಪ್ರವೇಶಿಸಲು ಅವಕಾಶ ನೀಡಲಾಯಿತು. ದೇವಾಲಯಕ್ಕೆ ಪ್ರದಕ್ಷಿಣೆ ಬಂದ ಬಳಿಕ ಭಕ್ತರು ಬಲ ಬದಿಯ ದ್ವಾರದಿಂದ ಹೊರಬರಲು ವ್ಯವಸ್ಥೆ ಮಾಡಲಾಗಿತ್ತು. ಹತ್ತು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮತ್ತು ಅರುವತ್ತೈದು ದಾಟಿದ ವೃದ್ಧರಿಗೆ ಪ್ರವೇಶಾವಕಾಶವನ್ನು ನೀಡಲಿಲ್ಲ. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ನವೀನ್‌ಕುಮಾರ್ ಭಂಡಾರಿ, ದೇವಾಲಯದ ಕಛೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಬೆಳಗ್ಗಿನ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದೇವಳದ ಸಿಬಂದಿಗಳು ಮತ್ತು ನಿತ್ಯ ಕರಸೇವಕರು ಭಕ್ತರಿಗೆ ಹೋಗುವ ದಾರಿಯ ಕುರಿತು ಮಾಹಿತಿ ನೀಡುತ್ತಿದ್ದಾರೆ.

ನಂದಿ ಮಂಟಪದ ಬಳಿ ದೇವರ ದರ್ಶನ
ಶ್ರೀ ಮಹಾಲಿಂಗೇಶ್ವರ ದೇವರ ಗರ್ಭಗುಡಿಯ ಮುಂದಿನ ನಡೆಯಲ್ಲಿ ನಿಂತು ಶ್ರೀದೇವರ ದರುಶನ ಮಾಡಲು ಅವಕಾಶ ಇರಲಿಲ್ಲ. ನಂದಿ ಮಂಟಪದ ಬಳಿ ನಿಂತು ಶ್ರೀದೇವರಿಗೆ ಕೈಮುಗಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಹಣ್ಣು-ಕಾಯಿ ಸಹಿತ ಯಾವುದೇ ಸೇವೆಗಳಿಗೆ ಅವಕಾಶವಿರಲಿಲ್ಲ. ಭಕ್ತರು ಶ್ರೀದೇವರಿಗೆ ಸೀಯಾಳ, ಎಳ್ಳೆಣ್ಣೆ ಸಮರ್ಪಣೆ, ಹೂವುಗಳನ್ನು ತಂದು ಸಮರ್ಪಿಸಿದರು. ಗಣಪತಿ ಗುಡಿ, ಉಳ್ಳಾಲ್ತಿ ನಡೆ, ಶಾಸ್ತಾವು ದೇವರ ಗುಡಿ, ದೇವಿ ಗುಡಿಗೂ ಸುತ್ತು ಬರುವುದನ್ನು ನಿಷೇಧಿಸಲಾಗಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.