Home_Page_Advt
Home_Page_Advt
Home_Page_Advt

ಆಶೀರ್ವಾದ ತರಕಾರಿ, ಹಣ್ಣು ಹಂಪಲುಗಳ ಅಂಗಡಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
  • ಗುಣಮಟ್ಟ, ನಗುಮೊಗದ ಸೇವೆಯೆಡೆಗೆ ಗ್ರಾಹಕರು – ಜೀವಂಧರ್ ಜೈನ್

ಪುತ್ತೂರು: ತಾಜಾ ತರಕಾರಿ ಮತ್ತು ಹಣ್ಣು ಹಂಪಲುಗಳ ಅಂಗಡಿ ಜೂ.9ರಂದು ನೆಹರುನಗರ ಸಮೀಪದ ಸುಲೈಮಾನ್ ಟವರ್ ಹೊಟೇಲ್ ಕೀರ್ತನಾ ಬಳಿ ಶುಭಾರಂಭಗೊಂಡಿತ್ತು.

ನೂತನ ತರಕಾರಿ, ಹಣ್ಣು ಹಂಪಲುಗಳ ಅಂಗಡಿಯನ್ನು ಉದ್ಘಾಟಿಸಿದ ನಗರಸಭಾ ಸದಸ್ಯ ಜೀವಂಧರ್ ಜೈನ್ ಅವರು ಮಾತನಾಡಿ ಗುಣಮಟ್ಟ ಮತ್ತು ನಗುಮೊಗದ ಸೇವೆ ಎಲ್ಲಿದೆಯೋ ಅಲ್ಲಿಗೆ ಗ್ರಾಹಕರು ಬಂದೇ ಬರುತ್ತಾರೆ. ಈ ನಿಟ್ಟಿನಲ್ಲಿ ನೂತನ ಅಂಗಡಿಯಿಂದ ಗ್ರಾಹಕರಿಗೆ ಉತ್ತಮ ಸೇವೆ ಸಿಗುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹೊಟೇಲ್ ಕೀರ್ತನಾದ ಮಾಲಕ ಪ್ರತಾಪ್ ಸಿಂಹ ಬಳ್ಳಾಲ್, ಸ್ಥಳೀಯ ನಗರಸಭಾ ಸದಸ್ಯ ಶಿವರಾಮ ಸಪಲ್ಯ, ಬಿ.ಎಮ್.ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ, ಮಾಜಿ ಅಧ್ಯಕ್ಷ ದೇವಪ್ಪ ಗೌಡ, ಬಿಎಮ್‌ಎಸ್ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಸುಧಾಕರ್, ಮಹೇಶ್ ಮಣಿಯ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಬಿಎಮ್‌ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ್ ನಾಕ್ ಅವರು ಮಾತನಾಡಿ ನಮ್ಮಲ್ಲಿ ತಾಜಾ ತರಕಾರಿ ಮತ್ತು ಹಣ್ಣುಗಳು ಉತ್ತಮ ರೀತಿಯಲ್ಲಿ ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ವಿತರಣೆ ಮಾಡಲಾಗುತ್ತದೆ. ಸಭೆ ಸಮಾರಂಭಕ್ಕೂ ತರಕಾರಿಗಳನ್ನು ವ್ಯವಸ್ಥಿತವಾಗಿ ತಲುಪಿಸುವ ಸೌಲಭ್ಯ ಇದೆ ಎಂದು ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.