Home_Page_Advt
Home_Page_Advt
Home_Page_Advt

ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದ್ದ ದಕ್ಷಿಣ ಕಾಶಿ, ಗಯಾಪದ ಕ್ಷೇತ್ರವೆಂದು ಪ್ರಸಿದ್ಧಿ ಪಡೆದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಸ್ಥಾನವು ಜೂ.8ರಂದು ಭಕ್ತರ ಪ್ರವೇಶಕ್ಕೆ ತೆರೆದುಕೊಂಡಿತ್ತಾದರೂ, ಶ್ರೀ ದೇವಾಲಯಕ್ಕೆ ಆಗಮಿಸುವವರ ಭಕ್ತರ ಸಂಖ್ಯೆಯಲ್ಲಿ ವಿರಳತೆ ಕಂಡು ಬಂತು.

ಬೆಳಗ್ಗೆ ೬ಗಂಟೆಗೆ ಶ್ರೀ ದೇವಾಲಯದ ಬಾಗಿಲು ತೆರೆಯಲಾಗಿದ್ದು, ೭:೧೫ಕ್ಕೆ ದಿನದ ಮೊದಲ ಪೂಜೆ ನೆರವೇರಿತು. ಬಳಿಕ ಮಧ್ಯಾಹ್ನದ ಪೂಜೆಯನ್ನು ಬೆಳಗ್ಗೆ ೮:೩೦ಕ್ಕೆ ನೆರವೇರಿಸಲಾಯಿತು. ಈ ಸಮಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಭಕ್ತಾದಿಗಳು ಆಗಮಿಸಿದರು. ಬಳಿಕ ಭಕ್ತರು ಆಗಮನದಲ್ಲಿ ತೀರಾ ವಿರಳತೆ ಕಂಡು ಬಂತು. ಮಧ್ಯಾಹ್ನ ಒಂದು ಗಂಟೆಗೆ ಶ್ರೀ ದೇವಾಲಯದ ಬಾಗಿಲು ಹಾಕಲಾಯಿತು. ಮತ್ತೆ ಸಂಜೆ ೫ ಗಂಟೆಗೆ ಬಾಗಿಲು ತೆರೆದು, ಸಂಜೆ ೭ಕ್ಕೆ ರಾತ್ರಿ ಪೂಜೆಯಾಗಿ ದೇವಾಲಯದ ಬಾಗಿಲು ಹಾಕಲಾಗುತ್ತದೆ.

ಸೇವೆಯೂ ಇಲ್ಲ: ತೀರ್ಥ ಪ್ರಸಾದವೂ ಇಲ್ಲ: ಸರಕಾರದ ನಿಯಮಾವಳಿಯಂತೆ ದೇವಾಲಯದಲ್ಲಿ ಪೂಜೆಯನ್ನು ಬಿಟ್ಟು ಯಾವುದೇ ಸೇವಾಧಿಗಳನ್ನು ನಡೆಸಲಿಲ್ಲ. ಭಕ್ತರಿಗೂ ತೀರ್ಥ, ಪ್ರಸಾದ, ಗಂಧ ಸ್ವೀಕರಿಸಲು ಅವಕಾಶಗಳಿರಲಿಲ್ಲ. ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕಡ್ಡಾಯ ಮಾಡಲಾಗಿದ್ದು, ದೇವಾಲಯದೊಳಗೆ ಪ್ರವೇಶಿಸುವ ಮೊದಲೇ ದೇಹದ ಉಷ್ಣತೆ ಪರೀಕ್ಷೆಯನ್ನೂ ನಡೆಸಲಾಯಿತು. ಕೈ ತೊಳೆಯಲು ಸ್ಯಾನಿಟೈಸರ್ ನೀಡಲಾಯಿತು.

ಮತ್ತೆ ಬಂದ ಹಳೆಯ ಸಂಪ್ರದಾಯ: ೧೮ ವರ್ಷಗಳ ಹಿಂದೆ ಪತ್ತನಾಜೆಯ ಬಳಿಕ ಶ್ರೀ ದೇವಾಲಯದಲ್ಲಿ ಮಧ್ಯಾಹ್ನದ ಪೂಜೆ ಮಾಡುವ ಸಂಪ್ರದಾಯವಿರಲಿಲ್ಲ. ಮಧ್ಯಾಹ್ನದ ಪೂಜೆಯನ್ನು ಬೆಳಗ್ಗಿನ ಪೂಜೆಯ ಬಳಿಕ ನೇತ್ರಾವತಿ ನದಿಯಲ್ಲಿರುವ ಉದ್ಭವಲಿಂಗದ ಬಳಿ ಮಾಡಲಾಗುತ್ತಿತ್ತು. ನದಿಯಲ್ಲಿ ನೀರು ಬಂದು ಉದ್ಭವ ಲಿಂಗಕ್ಕೆ ಅರ್ಪಿಸಲಾದ ಹೂಮಾಲೆಗಳು ನದಿ ನೀರಿನಲ್ಲಿ ತೇಲಿ ಹೋದ ಬಳಿಕ ಶ್ರೀ ದೇವಾಲಯದಲ್ಲಿ ಮಧ್ಯಾಹ್ನದ ಪೂಜೆ ನೆರವೇರಿಸಲಾಗುತ್ತಿತ್ತು. ಈಗಲೂ ದಿನಾ ಉದ್ಭವ ಲಿಂಗಕ್ಕೆ ಪೂಜೆ ನೆರವೇರಿಸಲಾಗುತ್ತದೆ. ಮಳೆಗಾಲದಲ್ಲಿ ಉದ್ಭವಲಿಂಗ ನದಿ ನೀರಿನಲ್ಲಿ ಮುಳುಗಿದರೂ ನದಿ ನೀರು ಯಾವ ಮಟ್ಟದಲ್ಲಿ ಇರುತ್ತದೋ ಅಲ್ಲಿಯೇ ನಿಂತು ನದಿಗೆ ಪೂಜೆ ಮಾಡುವ ಮೂಲಕ ಉದ್ಭವ ಲಿಂಗಕ್ಕೆ ಪೂಜೆ ನೆರವೇರಿಸಲಾಗುತ್ತದೆ. ಆದರೆ ಕಳೆದ ೧೮ ವರ್ಷದ ನಂತರ ಶ್ರೀ ದೇವಾಲಯದಲ್ಲಿ ಮಧ್ಯಾಹ್ನದ ಪೂಜೆ ಮಾಡುವ ಸಂಪ್ರದಾಯ ಆರಂಭವಾಯಿತು. ಆದರೆ ಕೊರೋನಾ ವೈರಸ್‌ನ ಹಿನ್ನೆಲೆಯಲ್ಲಿ ಇದೀಗ ದೇವಾಲಯದೊಳಗೆ ಮಧ್ಯಾಹ್ನದ ಪೂಜೆಯನ್ನು ಕೈಬಿಡಲಾಗಿದ್ದು, ಇದರಿಂದ ಹಳೆಯ ಸಂಪ್ರದಾಯ ಮತ್ತೊಮ್ಮೆ ನಡೆಯುವಂತಾಗಿದೆ.

ಶ್ರೀ ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿಗಳಾದ ಕೃಷ್ಣಪ್ರಸಾದ್ ಬಡಿಲ, ದಿವಾಕರ ಗೌಡ, ಪದ್ಮನಾಭ ಉಪಸ್ಥಿತರಿದ್ದು, ಭಕ್ತಾದಿಗಳ ನಿರ್ವಹಣೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.