HomePage_Banner
HomePage_Banner
HomePage_Banner

ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡವರಿಗೆ ಉದ್ಯೋಗದ ಭರವಸೆ ನೀಡಿದ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೊನಾ ಲಾಕ್‌ಡೌನ್‌ನಿಂದಾಗಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟ ವಲಸೆ ಉದ್ಯೋಗಿಗಳು ಉದ್ಯೋಗವಿಲ್ಲದೆ ತವರು ಊರಿಗೆ ಮರಳಿ ಬಂದಿದ್ದು, ಅವರಿಗೆಲ್ಲಾ ಉದ್ಯೋಗ ಕಲ್ಪಸಿಕೊಡುವಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪುತ್ತೂರಿನಿಂದ ಸಾವಿರಾರು ಮಂದಿ ಹೊರ ರಾಜ್ಯ, ಹೊರ ದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದವರು ಕೊರೊನಾದಿಂದಾಗಿ ತವರು ಊರಿಗೆ ಮರಳುವಂತಾಗಿದೆ. ಉದ್ಯೋಗವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಅಂತಹ ವಲಸೆ ನಿರುದ್ಯೋಗಿಗಳಿಗೆ ಮತ್ತು ಈಗಾಗಲೇ ಉದ್ಯೋಗವಿಲ್ಲದೇ ಇರುವ ಯುವಕರಿಗೆ ಉದ್ಯೋಗ ಕಲ್ಪಿಸಲು ಪ್ರಯತ್ನ ನಡೆಸುತ್ತಿದ್ದೇನೆ ಎಂದರು.

ಕೌಶಲ್ಯಾಭಿವೃದ್ಧಿ ಎಂಡಿ ಜೊತೆ ಮಾತುಕತೆ
ಉದ್ಯೋಗಕ್ಕಾಗಿ ಈಗಾಗಲೇ ಕೇಂದ್ರ ಸರಕಾರದ ಕೌಶಲ್ಯಾಭಿವೃದ್ಧಿ ಯೋಜನೆಯ ಎಂಡಿ ಅಶ್ವಿನ್ ಗೌಡ ಜೊತೆ ಮಾತುಕತೆ ನಡೆಸಿದ್ದೇನೆ. ಅದರ ಫಲವಾಗಿ ಐಟಿಐ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶದ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

ಪುತ್ತೂರಿನಲ್ಲಿ ಉದ್ದಿಮೆ ಆರಂಭಿಸಲು ಪ್ರಯತ್ನ
ಪುತ್ತೂರಿನಲ್ಲಿ ಗೃಹೋದ್ಯಮ, ಸಣ್ಣ ಕೈಗಾರಿಕೆಗಳನ್ನು ಸೃಷ್ಟಿಸಿ ಆ ಮೂಲಕವೂ ಉದ್ಯೋಗ ಕಲ್ಪಿಸುವ ಯೋಜನೆಯ ಬಗ್ಗೆ ಮಾತುಕತೆ ನಡೆಯುತ್ತಿದೆ. ಬೆಂಗಳೂರಿನ ಕೆಲವು ಗಾರ್ಮೆಂಟ್ಸ್ ಮತ್ತು ಬಿಲ್ಡರ್ಸ್ ಜೊತೆ ಮಾತುಕತೆ ನಡೆಸಿ ಪುತ್ತೂರಿನಲ್ಲಿ ಉದ್ದಿಮೆ ಆರಂಭಿಸುವಂತೆ ಮಾತುಕತೆ ನಡೆಸಲಾಗಿದೆ. ಪುತ್ತೂರನ್ನು ಕೈಗಾರಿಕ ವಲಯವನ್ನಾಗಿ ಮಾಡುವಲ್ಲಿಯೂ ನಿರಂತರ ಪ್ರಯತ್ನ ನಡೆಸುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ, ತಾ.ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ್, ತಾ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಉಪಸ್ಥಿತರಿದ್ದರು.

ಪತ್ರಿಕಾಗೋಷ್ಠಿಯ ಅಂಶಗಳು:

  • ಬಜತ್ತೂರಿನಲ್ಲಿ ಡಾ. ಅಂಬೇಡ್ಕರ್ ವಸತಿ ಶಾಲೆ

ಬಜತ್ತೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗಾಗಿ ಡಾ. ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ ರೂ. ೧೮.೫೫ ಕೋಟಿ ಅನುದಾನ ಮಂಜೂರುಗೊಂಡಿದೆ. ಇದರ ಕಾರ್ಯ ಯೋಜನೆ ಆರಂಭವಾಗಲಿದೆ.

  • ಮೂರು ರೈತ ಸಂಪರ್ಕ ಕಟ್ಟಡ ನಿರ್ಮಾಣ

ಕೃಷಿ ಇಲಾಖೆಯ ಯೋಜನೆಯಡಿಯಲ್ಲಿ ತಲಾ ರೂ. ೫೦ ಲಕ್ಷದಂತೆ ಒಟ್ಟು ೧.೫೦ ಕೋಟಿ ರೂ. ವೆಚ್ಚದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ರೈತ ಸಂಪರ್ಕ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು

  • ಪ್ರಧಾನಮಂತ್ರಿ ಜನ ವಿಕಾಸ್ ಕಾರ್ಯಕ್ರಮ

ಪ್ರಧಾನಮಂತ್ರಿ ಜನ ವಿಕಾಸ್ ಕಾರ್ಯಕ್ರಮ ಅಡಿಯಲ್ಲಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಸತಿ ಶಾಲೆಗೆ, ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್, ಹುನಾರ್ ಹಬ್, ಸದ್ಭಾವ್ ಮಂಟಪ್ ಮತ್ತು ನಗರಸಭೆ ಮಿತಿಯಲ್ಲಿ ಮಾರ್ಕೆಟ್ ಶೆಡ್ ನಿರ್ಮಾಣಕ್ಕೆ ಜಮೀನು ಕೇಳಲಾಗಿದೆ. ಲಭ್ಯತೆಯ ಆಧಾರದಲ್ಲಿ ಅದನ್ನು ಒದಗಿಸಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.