Home_Page_Advt
Home_Page_Advt
Home_Page_Advt

ಕೊಳ್ತಿಗೆ: ಮದುರ ದುಗ್ಗಳ ಸಂಘಟನೆಯಿಂದ ಬಾಯಂಬಾಡಿ ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೊರೋನ ವೈರಸ್ ಸೊಂಕು ಹರಡದಂತೆ ದೇಶಾದ್ಯಂತ ಲಾಕ್ ಡೌನ್ ಕ್ರಮದ ಸಡಿಲಿಕೆ ನಂತರ ಇದೀಗ ಸರ್ಕಾರದ ಆದೇಶದಂತೆ ಮೇ.08ರಿಂದ ಎಲ್ಲಾ ಪ್ರಾರ್ಥನಾ ಮಂದಿರಗಳು ತೆರೆದಿದ್ದು, ಈ ಸಂದರ್ಭದಲ್ಲಿ ಕೊಳ್ತಿಗೆ ಗ್ರಾಮದ ಬಾಯಂಬಾಡಿ ಶ್ರೀ ಷಣ್ಮುಖ ದೇವ ದೇವಸ್ಥಾನದಲ್ಲಿ ಮದುರ ಯುವ ಫ್ರೆಂಡ್ಸ್ ದುಗ್ಗಳ ಸಂಘಟನೆಯ ವತಿಯಿಂದ ಸಂಘದ ಸದಸ್ಯರುಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಚ್ಛತಾ ಕಾರ್ಯ ನಡೆಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ವಸಂತ್ ಕುಮಾರ್ ರೈ ದುಗ್ಗಳ, ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ತೀರ್ಥಾನಂದ ಗೌಡ ದುಗ್ಗಳ, ಮಾಜಿ ಕಾರ್ಯದರ್ಶಿ ದಿವಾಕರ ರೈ ಕೆರೆಮೂಲೆ, ಮದುರ ಯುವ ಫ್ರೆಂಡ್ಸ್ ಸಂಘದ ಅಧ್ಯಕ್ಷ ಮಂಜುನಾಥ್ ದುಗ್ಗಳ, ಕಾರ್ಯದರ್ಶಿ ಯಶವಂತ್ ದುಗ್ಗಳ, ಖಜಾಂಜಿ ಕಾರ್ತಿಕ್ ಬರಡಿಮಜಲು, ಸಂಘದ ಮಾಜಿ ಪದಾಧಿಕಾರಿಗಳಾದ ಕೇತನ್ ದುಗ್ಗಳ, ಹರಿಪ್ರಸಾದ್ ಆಂತಿಕಡಲು, ಸದಸ್ಯರುಗಳಾದ ಅವಿನಾಶ್ ಬರಡಿಮಜಲು, ಅಭಿಲಾಷ್ ಬರಡಿಮಜಲು, ಅನ್ವಿತ್ ಬರಡಿಮಜಲು, ಜಯಪ್ರಕಾಶ್ ಆಂತಿಕಡಲು, ಅಕ್ಷತ್ ದುಗ್ಗಳ, ಕಾರ್ತಿಕ್ ಮೂಲೆಮಜಲು, ಹೃತೀಕ್ ಮೂಲೆಮಜಲು, ಮಧುಕೃಷ್ಣ ಮೂಲೆಮಜಲು, ಹರ್ಷಿತ್ ಮೂಲೆಮಜಲು, ರಕ್ಷಿತ್ ಮೂಲೆಮಜಲು, ಪ್ರಶಾಂತ್ ದೊಡ್ಡಡ್ಕ, ದೇವಿಪ್ರಸಾದ್ ದುಗ್ಗಳ, ಮನೋಜ್ ಪುಂಡ್ಯಾವನ, ಶ್ರವಣ್ ಕರ್ತಡ್ಕ, ಸುಮಂತ್ ದುಗ್ಗಳ, ಕೃಪೇಶ್ ದೊಡ್ಡಡ್ಕ, ಗಣೇಶ್ ದುಗ್ಗಳ ಮತ್ತಿತರರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.