HomePage_Banner
HomePage_Banner
HomePage_Banner

ಕಾಣಿಯೂರು ಗ್ರಾ.ಪಂ, ಅಧ್ಯಕ್ಷರನ್ನು ವಜಾಗೊಳಿಸುವಂತೆ ಪಿಡಿಓಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಕಾಣಿಯೂರು ಗ್ರಾ.ಪಂ, ಅಧ್ಯಕ್ಷರು ಪಂಚಾಯತ್‌ನಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ತಕ್ಷಣ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಗ್ರಾ.ಪಂ, ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅವರಿಗೆ ಜೂ ೮ರಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಗ್ರಾ.ಪಂ, ಅಧ್ಯಕ್ಷರಾಗಿರುವ ಮಾಧವಿ ಕೋಡಂದೂರು ಅವರು ಗ್ರಾಮ ಪಂಚಾಯತ್‌ನಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸದೇ ಇರುವುದು ಮತ್ತು ತಮ್ಮ ಸ್ವಹಿತಕ್ಕಾಗಿ ಸರಕಾರದಿಂದ ಬರುವ ಹಲವು ಯೋಜನೆಗಳನ್ನು ದುರುಪಯೋಗ ಪಡಿಸಿಕೊಂಡು ಅದರಲ್ಲಿ ಮುಖ್ಯವಾಗಿ ಬಿಪಿಎಲ್ ಪಡಿತರ ಮತ್ತು ಸೂಕ್ತ ದಾಖಲೆಗಳಿಲ್ಲದೇ ಮನೆ ನಿರ್ಮಿಸುತ್ತಿದ್ದು ಹಾಗೂ ದೇಶ ವ್ಯಾಪ್ತಿ ಹರಡಿರುವ ಕೊರೋನಾ ರೋಗದ ವಿರುದ್ದ ಸಕ್ರೀಯವಾಗಿ ಅವಿರತವಾಗಿ ಕೆಲಸ ಮಾಡುತ್ತಿರುವ ಪಂಚಾಯತ್‌ನ ೧೦ ಮಂದಿ ಸದಸ್ಯರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಮೇಲೆ ಮೇ ೧೮ರಂದು ಯಾವುದೇ ಆಧಾರವಿಲ್ಲದೆ ಆರೋಪ ಹೊರಿಸಿ ಕಾರ್ಯನಿರ್ವಹಣಾಧಿಕಾರಿಯವರಿಗೆ ದೂರು ನೀಡಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ.

ಆದರೆ ಕೊರೋನಾ ಸಾಂಕ್ರಾಮಿಕ ರೋಗ ಹರಡಿ ದೇಶ ವ್ಯಾಪ್ತಿ ಸಮಸ್ಯೆ ಹೊಂದಿರುವ ಈ ಸಂದರ್ಭದಲ್ಲಿ ಯಾವುದೇ ಮನೆಗಳಿಗೆ ಭೇಟಿ ನೀಡದೇ ಸಾರ್ವಜನಿಕರಿಗೆ ಯಾವುದೇ ಸಹಕಾರ ನೀಡದ ಅಧ್ಯಕ್ಷರನ್ನು ತಕ್ಷಣದಿಂದಲೇ ವಜಾಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಿದ ಗ್ರಾಮಸ್ಥರು ವಜಾಗೊಳಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಧನಂಜಯ ಕೇನಾಜೆ, ಆನಂದ ಗೌಡ ಮೇಲ್ಮನೆ, ವಿಶ್ವನಾಥ ಕೂಡಿಗೆ, ನೀಲಾಧರ್ ಆತಾಜೆ, ವೆಂಕಪ್ಪ ಬೀರೊಳಿಗೆ, ಹರೀಶ್ ಅಂಬುಲ, ಮಾಧವ ಎಣ್ಮೂರು, ಆನಂದ ಕೂರೇಲು, ಬಾಲಕೃಷ್ಣ ಗೌಡ ಇಡ್ಯಡ್ಕ, ಕೊರಗಪ್ಪ ಇಡ್ಯಡ್ಕ, ಸೀತಾರಾಮ ಎಣ್ಮೂರು, ಯತೀಶ್ ಮೀಜೆ, ಸುಂದರ ಬೆದ್ರಾಜೆ, ಸುರೇಶ್ ಬಂಡಾಜೆ, ಲಕ್ಷ್ಮಣ ಬೆದ್ರಂಗಳ, ವಿಶ್ವನಾಥ ಖಂಡಿಗ, ಅನಂತಕೃಷ್ಣ ಬೈಲಂಗಡಿ, ಬೆಳಿಯಪ್ಪ ದೇವರತ್ತಿಮಾರು, ರಾಧಕೃಷ್ಣ ಮುದುವ ಮನವಿ ಸಲ್ಲಿಸುವ ಸಂದರ್ಭದಲ್ಲಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.