Home_Page_Advt
Home_Page_Advt
Home_Page_Advt

ಎಲ್ಲರಂತೆ ನಮಗೂ ವಿಶೇಷ ಪ್ಯಾಕೇಜ್ ನೀಡಿ, ವೇತನ ಏರಿಕೆ ಮಾಡಿ | ಅಕ್ಷರದಾಸೋಹ ನೌಕರರ ಸಂಘದಿಂದ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೂಲಿ ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರ ಜೀವನ ನಿರ್ವಹಣೆಗೆ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದಂತೆ ನಮಗೂ ವಿಶೇಷ ಪ್ಯಾಕೇಜ್ ನೀಡಿ. ಜೊತೆಗೆ ನಮ್ಮ ಮಾಸಿಕ ವೇತನವನ್ನೂ ಏರಿಕೆ ಮಾಡುವಂತೆ ಆಗ್ರಹಿಸಿ ದ.ಕ ಜಿಲ್ಲಾ ಅಕ್ಷರದಾಸೋಹ ಸಂಘದ ಪುತ್ತೂರು ತಾಲೂಕು ಸಮಿತಿಯ ವತಿಯಿಂದ ಜೂ.೯ರಂದು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.


ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನ್ಯಾಯವಾದಿ, ಕಾರ್ಮಿಕ ಮುಕಂಡ ಬಿ.ಎಂ ಭಟ್‌ರವರು, ಸರಕಾರ ಬಹುತೇಕ ಕಾರ್ಮಿಕರಿಗೆ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ. ಆದರೆ ಅಕ್ಷರದಾಸೋಹ ಸಿಬಂದಿಗಳನ್ನು ಸರಕಾರ ಕಡೆಗಣಿಸಿದೆ. ಕಳೆದ ಮಾರ್ಚ್ ತಿಂಗಳಿನಿಂದ ನೌಕರರಿಗೆ ವೇತನವನ್ನು ಸರಕಾರ ನೀಡಿಲ್ಲ. ಈ ನಿಟ್ಟಿನಲ್ಲಿ ಮೂರು ತಿಂಗಳ ವೇತನದ ಜೊತೆಗೆ ಜೂನ್ ತಿಂಗಳ ವೇತನವನ್ನು ಸೇರಿಸಿ ನೀಡಬೇಕು. ಅಕ್ಷರ ದಾಸೋಹ ಸಿಬಂದಿಗಳು ಕಳೆದ ಆರು ವರ್ಷಗಳಿಂದ ಸಿಬಂದಿಗಳ ವೇತನ ಏರಿಕೆ ಮಾಡಿಲ್ಲ. ಹೀಗಾಗಿ ಕಾರ್ಮಿಕರಿಗೆ ಕನಿಷ್ಠ ರೂ.2500 ನೀಡುತ್ತಿದ್ದು ಈ ವೇತನವನ್ನು ಏರಿಕೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ತಂಗುಳಣ್ಣವಾದರೂ ಉಣ್ಣಬೇಕಲ್ಲ:
ಅಕ್ಷರ ದಾಸೋಹ ನೌಕರರು ಅತಿ ಕಡಿಮೆ ಮಾಸಿಕ ವೇತನಕ್ಕೆ ದುಡಿದು ಊರಿನ ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಬಡಿಸುತ್ತಿದ್ದಾರೆ. ಆದರೆ ಅವರ ಮಕ್ಕಳಿಗೆ ತಂಗಳಣ್ಣ ನೀಡಲು ಸಂಬಳ ಸಾಲದಾಗಿದೆ. ಇಂತಹ ಪರಿಸ್ಥಿಯಲ್ಲಿ ಕೊರೋನಾ ಮಾರಿಯಿಂದಾಗಿ ಯಾವುದೇ ಕೆಲಸ ಇಲ್ಲದೇ ಬದುಕಲು ಕಷ್ಟ ಪಡುವ ಬಿಸಿಯೂಟ ನೌಕರರನ್ನು ಕಡೆಗಣಿಸಬಾರದು. ಅವರಿಗೆ ವಿಶೇಷ ಪ್ಯಾಕೇಜು ನೀಡಿ ರಕ್ಷಿಸಬೇಕಾದದ್ದು ಸರಕಾರದ ಆದ್ಯ ಕರ್ತವ್ಯ ಎಂದು ಬಿ. ಎಂ ಭಟ್ ಹೇಳಿದರು.
ಕೊರೋನಾದಿಂದಾಗಿ ಕೆಲಸ ಇಲ್ಲದ ಕಾರಣ ಕೆಲಸ ಇಲ್ಲದ ಸಮಯಗಳ ನಮಗೂ ವೇತನ ನೀಡಬೇಕು, ಹಾಗೂ ಬದುಕಲು ತಕ್ಕ ವೇತನ ನೀಡಿ ಅಕ್ಷರ ದಾಸೋಹ ನೌಕರರನ್ನು ಜೀತದಾಳುತನದಿಂದ ಮುಕ್ತಗೊಳಿಸಬೇಕು. ಕೇರಳದ ಮಾದರಿಯಲ್ಲಿ ದುಡಿಯುವ ಜನರಿಗೆ ಪ್ಯಾಕೇಜು ೧೪ ವಸ್ತುಗಳ ರೇಷನ್ ನೀಡಿದಂತೆ ಇಲ್ಲಿಯೂ ಜಾರಿ ಮಾಡಬೇಕು ಎಂದು ಬಿ.ಎಂ ಭಟ್ ಆಗ್ರಹಿಸಿದರು.
ಅಕ್ಷರದಾಸೋಹ ನೌಕರರ ಸಂಘದ ಕಾರ್ಯದರ್ಶಿ ಸವಿತಾ ಮಾತನಾಡಿ, ನಮಗೆ ಕಳೆದ ಮೂರು ತಿಂಗಳಿನಿಂದ ವೇತನ ದೊರೆತಿಲ್ಲ. ಅಲ್ಲದೆ ವೇತನ ಏರಿಕೆ ಮಾಡುವಂತೆ ಕಳೆದ ಹಲವು ವರ್ಷಗಳಿಂದ ಸರಕಾರಕ್ಕೆ ಬೇಡಿಕೆ ಸಲ್ಲಿಸುತ್ತಿದ್ದರೂ ನಮ್ಮ ವೇತನ ಏರಿಕೆ ಮಾಡಿಲ್ಲ ಎಂದು ಆರೋಪಿಸಿದರು.
ಕಟ್ಟಡ ಕಾರ್ಮಿಕ ಮುಖಂಡ ಕೇಶವ ಗೌಡ, ಅಕ್ಷರದಾಸೋಹ ಸಿಬಂದಿಗಳಾದ ಆಶಾ, ಪುಷ್ಪಾವತಿ, ಪುಷ್ಪಲತಾ, ಶಶಿಕಲಾ, ಸುಂದರಿ, ನಳಿನಿ, ಲಲಿತಾ, ಕಮಲ, ಜಯಂತಿ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನೆಯ ಬಳಿಕ ಸಹಾಯಕ ಆಯುಕ್ತ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ವೀಡಿಯೋಗಾಗಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.