HomePage_Banner
HomePage_Banner
HomePage_Banner
HomePage_Banner

ಕಡಬ: ಹರಿಹರದ ಯುವತಿ, ಚಾರ್ವಾಕದ ಯುವಕ ನಾಪತ್ತೆ, ದೂರು ದಾಖಲು

Puttur_Advt_NewsUnder_1
Puttur_Advt_NewsUnder_1

ಕಡಬ: ಹರಿಹರ ಪಲ್ಲತಡ್ಕ ಗ್ರಾಮದ ಕಲ್ಲೆಮಠದ ಯುವತಿ ಹಾಗೂ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಯುವಕ ಇಬ್ಬರು ಒಂದೇ ದಿನ ನಾಪತ್ತೆಯಾಗಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ.ಸಿ. ಬಸ್ ತಂಗುದಾಣದಲ್ಲಿ ಹೋಂ ಗಾರ್ಡ್ ಆಗಿದ್ದ ಅಭಿಲಾಷ್ ಹಾಗೂ ಕಲ್ಲೇಮಠದ ಯುವತಿ ಲಿಖಿತಾ ನಡುವೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಜೂ.3ರಂದು ಮನೆಯಿಂದ ಕಾಣೆಯಾಗಿದ್ದ ಲಿಖಿತಾ, ತಾನು ಇಷ್ಟಪಟ್ಟ ಹುಡುಗನೊಂದಿಗೆ ಹೋಗುವುದಾಗಿ ಪತ್ರ ಬರೆದಿಟ್ಟಿದ್ದಾಳೆ. ಇತ್ತ ಅದೇ ದಿನ ಯುವಕ ಅಭಿಲಾಷ್ ಕೂಡ ಕಾಣೆಯಾಗಿದ್ದಾನೆ. ಐದು ದಿನಗಳ ಹಿಂದೆ ಯುವಕ ಹಾಗೂ ಯುವತಿ ಒಂದೇ ದಿನ ಕಾಣೆಯಾಗಿದ್ದು, ಮನೆಯವರು ಹುಡುಕಾಡಿದರೂ ಅವರಿಬ್ಬರೂ ಪತ್ತೆಯಾಗಲಿಲ್ಲ. ಈ ಕುರಿತು ಇಬ್ಬರ ಪೋಷಕರು, ಸೋಮವಾರದಂದು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವಕ ಹಾಗೂ ಯುವತಿ ಒಂದೇ ದಿನ ಕಾಣೆಯಾಗಿರುವುದರಿಂದ ಇವರಿಬ್ಬರು ಒಟ್ಟಿಗೆ ಹೋಗಿರಬಹುದೆಂದು ಹೇಳಲಾಗುತ್ತಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.