HomePage_Banner
HomePage_Banner
HomePage_Banner

ಪುತ್ತೂರು ನಗರಸಭೆಗೆ ರೂ. 5 ಕೋಟಿ ವಿಶೇಷ ಅನುದಾನ | 12 ವಾರ್ಡ್‌ಗಳಲ್ಲಿ ಶಾಸಕರಿಂದ ಗುದ್ದಲಿ ಪೂಜೆ

Puttur_Advt_NewsUnder_1
Puttur_Advt_NewsUnder_1
  • ಮತದಾರರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ – ಸಂಜೀವ ಮಠಂದೂರು

ಪುತ್ತೂರು: ಮುಖ್ಯಮಂತ್ರಿಗಳ ವಿವೇಚನಾ ನಿಧಿಯಡಿ ಶಾಸಕ ಸಂಜೀವ ಮಠಂದೂರು ಅವರ ಮೂಲಕ ಪುತ್ತೂರು ನಗರಸಭೆಗೆ ಮಂಜೂರಾದ ರೂ. 5 ಕೋಟಿ ಅನುದಾನದಲ್ಲಿ ಸುಮಾರು ರೂ. 1 ಕೋಟಿಯಲ್ಲಿ ನಗರಸಭೆ ಪ್ರತಿ ವಾಡ್‌ಗಳಲ್ಲಿ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿ ತಲಾ ರೂ. 5ಲಕ್ಷ ಹಂಚಿಕೆ ಮಾಡಿದ್ದು, ಈ ಪೈಕಿ ಜೂ. 9ರಂದು 12 ವಾರ್ಡ್‌ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಂಜೀವ ಮಠಂದೂರು ಗುದ್ದಲಿ ಪೂಜೆ ಮಾಡಿದರು.


ಮತದಾರರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ:
೧೨ ವಾರ್ಡ್‌ಗಳಲ್ಲೂ ಶಿಲಾನ್ಯಾಸ ನೆರವೇರಿಸಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ಮತದಾರರೇ ನನಗೆ ಪ್ರೇರಣೆ, ಅವರ ಋಣ ತೀರಿಸುವ ಕೆಲಸ ನಾನು ಮಾಡುತ್ತಿದ್ದೇನೆ ಎಂದರು. ಪುತ್ತೂರು ನಗರದ ಜನಸಂಖ್ಯೆ ಮುಂದಿನ ದಿನಗಳಲ್ಲಿ ಒಂದು ಲಕ್ಷ ಮೀರಲಿದ್ದು ಈ ದಿಸೆಯಲ್ಲಿ ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಪುತ್ತೂರು ನಗರಸಭೆಗೆ ಈಗಾಗಲೇ ರೂ. ಐದು ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ನಗರಸಭೆಯ ಆಡಳಿತ ಕಚೇರಿಯನ್ನು ರೂ. ಆರು ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲು ಯೋಜನೆ ಸಿದ್ಧವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಭೂಗತ ಕೇಬಲ್:
ಪುತ್ತೂರು ನಗರದಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆಗೆ ಸಂಬಂಧಿಸಿದಂತೆ ಭೂಗತ ಕೇಬಲ್ ಲೈನ್‌ಗಳನ್ನು ಹಂತಹಂತವಾಗಿ ಅನುಷ್ಠಾನಗೊಳಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವದ ಯೋಜನೆ ದೀನ್‌ದಯಾಳ್ ವಿದ್ಯುದೀಕರಣ ಯೋಜನೆಯ ಮೂಲಕ ಅನುದಾನಗಳನ್ನು ಸಂಸದರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದೊಂದಿಗೆ ಮಂಜೂರು ಮಾಡಿಸಲಾಗುವುದು. ಸ್ವಯಂ ಘೋಷಿತ ಆಸ್ತಿ ತೆರಿಗೆಯ ಪ್ರಮಾಣವನ್ನು ಹೆಚ್ಚಳ ಮಾಡದಂತೆ ಈಗಾಗಲೇ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ವಿದ್ಯಾ ಆರ್. ಗೌರಿ, ಗೌರಿ ಬನ್ನೂರು, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಜಯಶ್ರೀ ಎಸ್.ಶೆಟ್ಟಿ, ಯುವರಾಜ ಪೆರಿಯತ್ತೋಡಿ, ಜಯಲಕ್ಷ್ಮೀ ನಾಯಕ್, ನಿವೃತ್ತ ಪ್ರಾಂಶುಪಾಲ ಪ್ರೋ. ಎ.ವಿ.ನಾರಾಯಣ, ಅಪರ್ಣಾ ಶಿವಾನಂದ, ಗುತ್ತಿಗೆದಾರ ನಿಸಾರ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು. ನಗರ ಮಂಡಲ ಬಿಜೆಪಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಪಿ.ಜಿ ಜಗನ್ನೀವಾಸ್ ರಾವ್ ಸ್ವಾಗತಿಸಿ, ಕೊಂಬೆಟ್ಟು ವಾರ್ಡ್ ಬಿಜೆಪಿ ಸಮಿತಿ ಕಾರ್ಯದರ್ಶಿ ನವೀನ್ ಪಡಿವಾಳ್ ವಂದಿಸಿದರು.
ಎಲ್ಲೆಲ್ಲಾ ಶಿಲಾನ್ಯಾಸ:
ನಗರಸಭಾ ೪ನೇ ವಾರ್ಡ್ ಸದಸ್ಯೆ ಗೌರಿ ಬನ್ನೂರು ಅವರ ವಾರ್ಡ್‌ಗೆ ಸಂಬಂಧಿಸಿ ನೀರ್ಪಾಜೆ ಮಾಸ್ಟರ್ ಪ್ಲಾನರಿ ರಸ್ತೆ ಮತ್ತು ಶಾಸಕರ ವಿಶೇಷ ಅನುದಾನದಿಂದ ರೂ. ೧೪ ಲಕ್ಷದ ರಸ್ತೆ ಹಾಗೂ ರೂ. ೨ ಲಕ್ಷದಲ್ಲಿ ಬೋರ್‌ವೆಲ್‌ಗೆ ಶಿಲನ್ಯಾಸ ನಡೆಯಿತು. ೭ನೇ ವಾರ್ಡ್‌ನ ನಗರಸಭಾ ಸದಸ್ಯೆ ಲೀಲಾವತಿ ಕೃಷ್ಣನಗರದಲ್ಲಿ ಕೆಮ್ಮಾಯಿ ಭರತಪುರ ರಸ್ತೆ, ೮ನೇ ವಾರ್ಡ್‌ನ ಸುಂದರ ಪೂಜಾರಿ ಬಡಾವು ವಾರ್ಡ್‌ಗೆ ಸಂಬಂಧಿಸಿ ತಾರಿಗುಡ್ಡೆ ಜಯಾನಂದ ಅವರ ಮನೆಯ ಬಳಿಯ ರಸ್ತೆ, ೧೨ನೇ ವಾರ್ಡ್‌ನ ನಗರಸಭಾ ಸದಸ್ಯ ಪದ್ಮನಾಭ ನಾಕ್ ಅವರ ವಾರ್ಡ್‌ಗೆ ಸಂಬಂಧಿಸಿ ಕನ್ನಡಿಗರ ಬಡಾವಣೆ ರಸ್ತೆ, ೧೫ನೇ ವಾರ್ಡ್‌ಗೆ ಸಂಬಂಧಿಸಿ ಬೊಳುವಾರಿನಲ್ಲಿ ಕೆ.ಸಂತೋಷ್ ಕುಮಾರ್ ಬೊಳುವಾರ ವಾರ್ಡ್‌ನಲ್ಲಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರ ಮನೆಯ ಬಳಿಯ ರಸ್ತೆ, ಕೊಂಬೆಟ್ಟು ವಾರ್ಡ್ ೧೩ರ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರ ವಾರ್ಡ್‌ನಲ್ಲಿ ಸುಧಾ ನರ್ಸರಿ ಬಳಿಯ ರಸ್ತೆ, ವಾರ್ಡ್ ೧೬ರ ಸದಸ್ಯ ನವೀನ್ ಕುಮರ್ ಪೆರಿಯತ್ತೋಡಿ ಅವರ ಕಾರ್ಜಾಲ್ ಷಣ್ಮುಗ ರಸ್ತೆ, ವಾರ್ಡ್ ೧ರ ಶಿವರಾಮ ಎಸ್ ಅವರ ಕಾರ್ಜಾಲು ತಿಮ್ಮಪ್ಪ ಪೂಜಾರಿಯವರ ಮನೆಯ ಬಳಿಯ ರಸ್ತೆ, ವಾರ್ಡ್೨ ವಸಂತ ಕಾರೆಕ್ಕಾಡು ಅವರ ಗಣೇಶ್ ಭಾಗ್ ಬಡಾವಣೆ ರಸ್ತೆ, ವಾರ್ಡ್ ೧೪ರ ಪ್ರೇಮಲತಾ ನಂದಿಲ ಅವರ ವಾರ್ಡ್‌ನ ಜಯರಾಜ್ ಮನೆಯ ಬಳಿಯ ರಸ್ತೆ, ವಾರ್ಡ್ ೬ರ ಸದಸ್ಯೆ ಮೋಹಿನಿ ವಿಶ್ವನಾಥ್ ಅವರ ಬನ್ನೂರು ಜನತಾ ಕಾಲನಿ ರಸ್ತೆ, ವಿದ್ಯಾ ಆರ್ ಗೌರಿ ಅವರ ಪಾಂಗ್ಲಾಯಿ ಸಮೀಪದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ಮಾಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.