HomePage_Banner
HomePage_Banner
HomePage_Banner

ಕರ್ಮಲದಲ್ಲಿ ರೂ. 20 ಲಕ್ಷ ವೆಚ್ಚದ ತಡೆಗೋಡೆ ಲೋಕಾರ್ಪಣೆ | ಸಣ್ಣ ನೀರಾವರಿ ಇಲಾಖೆಯಿಂದ ಪುತ್ತೂರಿಗೆ ರೂ. 18 ಕೋಟಿ ಅನುದಾನ – ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ ಯಡಿಯೂರಪ್ಪ ಸರಕಾರ ಬಂದ ತಕ್ಷಣ ಅಭಿವೃದ್ಧಿಗೆ ಒತ್ತುಕೊಡುವ ಕೆಲಸ ಆಗಿದೆ. ಹಾಗಾಗಿ ಸಣ್ಣ ನೀರಾವರಿ ಇಲಾಖೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ರೂ. 18 ಕೋಟಿ ಅನುದಾನ ಬಂದಿದ್ದು, ಅದರಲ್ಲಿ ರೂ. 20 ಲಕ್ಷ ವೆಚ್ಚದಲ್ಲಿ ಕರ್ಮಲದ ತಡೆಗೋಡೆ ನಿರ್ಮಾಣ ಆಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.‌

ಸಣ್ಣನೀರಾವರಿ ಇಲಾಖೆಯಿಂದ ಬೊಳುವಾರು ವಾರ್ಡ್ 15ರ ಕರ್ಮಲದಲ್ಲಿ ಜೂ.9ರಂದು ರಸ್ತೆ ಅಭಿವೃದ್ದಿ ಶಿಲಾನ್ಯಾಸದ ಸಂದರ್ಭದಲ್ಲಿ ಹೊಸದಾಗಿ ನಿರ್ಮಾಣಗೊಂಡ ತಡೆಗೋಡೆಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ನಗರದ ಮೂಲಭೂತ ಸೌಕರ್ಯ, ಜನರ ಬೇಡಿಕೆಗೆ ತಕ್ಕಂತೆ ಸ್ಪಂಧಿಸುವ ಕೆಲಸ ಆಗುತ್ತಿದೆ ಎಂದ ಅವರು ಮುಂದಿನ ದಿನದಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ನಡೆಯಲಿದೆ. ಸ್ವಚ್ಛ ಪುತ್ತೂರು ಸುಂದರ ಪುತ್ತೂರು ನಮ್ಮ ಕಲ್ಪಣೆ. ಹಾಗಾಗಿ ಅಧಿಕಾರ ಇಲ್ಲದೆಯೂ ನಗರಸಭೆ ಸದಸ್ಯರು ಹಗಲಿರುವು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಆಶಾ ಕಾರ್ಯಕರ್ತರಿಗೆ ಗೌರವ:
ಬೊಳುವಾರು ವಾರ್ಡ್‌ನಲ್ಲಿ ವಿಶೇಷ ಸೇವೆ ನೀಡುತ್ತಿರುವ ಆಶಾ ಕಾರ್ಯಕರ್ತೆ ಮೀನಾಕ್ಷಿ ಅವರನ್ನು ಶಾಸಕರು ಗೌರವಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಸಂತೋಷ್ ಬೊಳುವಾರು, ಡಿ.ಎಸ್. ಭಟ್, ಬಿಜೆಪಿ ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ನಗರಸಭಾ ಸದಸ್ಯರಾದ ಗೌರಿ ಬನ್ನೂರು, ವಿದ್ಯಾ ಆರ್. ಗೌರಿ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಜಯಶ್ರೀ ಎಸ್ ಶೆಟ್ಟಿ, ಯುವರಾಜ್, ನಿಕಟಪೂರ್ವ ಕಾರ್ಯದರ್ಶಿ ರಾಮ್‌ದಾಸ್ ಹಾರಾಡಿ, ವಿಠಲ್ ಮೋಹನ್, ಉದಯ ಕುಮಾರ್, ದಯಾಕರ, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.