ಕೊರೋನ ಲಾಕ್‌ಡೌನ್: ಒಂದು ತಿಂಗಳ ಬಾಡಿಗೆ ಮನ್ನಾ | ಮಾನವೀಯತೆ ಮೆರೆದ ಕುಂಬ್ರ ಹೇಮಾವತಿ ಸಂಕೀರ್ಣದ ಹೇಮಾವತಿ ರೈ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನ ಸಂಕಷ್ಟದಿಂದ ತತ್ತರಿಸಿದ ಜನರಿಗೆ ಸರಕಾರ,ದಾನಿಗಳು ಸಂಘ ಸಂಸ್ಥೆಗಳು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿವೆ. ಈ ನಡುವೆ ಅಂಗಡಿ ವ್ಯಾಪಾರಸ್ಥರಿಗೆ ಕಟ್ಟಡ ಮಾಲೀಕರು ಒಂದು ತಿಂಗಳ ಬಾಡಿಗೆ ಮನ್ನಾ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ಲಾಕ್‌ಡೌನ್‌ನಿಂದ ಒಂದು ತಿಂಗಳು ಕಾಲ ವ್ಯಾಪಾರವಿಲ್ಲದೆ ಮನೆಯಲ್ಲೇ ಇರಬೇಕಾದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ನಿರ್ಧಾರವನ್ನು ಈಗಾಗಲೇ ಗ್ರಾಮೀಣ ಪ್ರದೇಶದ ಹಲವು ಕಾಂಪ್ಲೆಕ್ಸ್ ಮಾಲಕರು ಕೈಗೆತ್ತಿಕೊಂಡಿದ್ದಾರೆ. ಕುಂಬ್ರ ಪೇಟೆಯಲ್ಲಿರುವ ಹೇಮಾವತಿ ಸಂಕೀರ್ಣದ ಹೇಮಾವತಿ ರೈಯವರು ತನ್ನ ಮಾಲಕತ್ವದ ಹೇಮಾವತಿ ರೈ ಸಂಕೀರ್ಣದಲ್ಲಿ ಬಾಡಿಗೆಗೆ ಇರುವ ಎಲ್ಲಾ ವ್ಯಾಪಾರಸ್ಥರಿಗೆ ಎಪ್ರಿಲ್ ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

10 ಕೊಠಡಿಯ ಬಾಡಿಗೆದಾರರಿಗೆ ಬಾಡಿಗೆ ಮನ್ನಾ
ಕುಂಬ್ರ-ಬೆಳ್ಳಾರೆ ರಸ್ತೆಯಲ್ಲಿರುವ ಹೇಮಾವತಿ ಸಂಕೀರ್ಣವು ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ಸುಸಜ್ಜಿತ ಸಂಕೀರ್ಣವಾಗಿದ್ದು ಇದರಲ್ಲಿ 10 ಬಾಡಿಗೆ ಕೊಠಡಿಗಳಿದ್ದು ಇದರಲ್ಲಿರುವ ಎಲ್ಲಾ ವ್ಯಾಪಾರಸ್ಥರಿಗೆ ಎಪ್ರಿಲ್ ತಿಂಗಳ ಬಾಡಿಗೆಯನ್ನು ಹೇಮಾವತಿ ರೈಯವರು ಮಾನವೀಯತೆ ದೃಷ್ಟಿಯಿಂದ ಮನ್ನಾ ಮಾಡಿದ್ದಾರೆ.

ಕೊರೋನ ಲಾಕ್‌ಡೌನ್‌ನಿಂದಾಗಿ ವ್ಯಾಪಾರಸ್ಥರಿಗೆ ತೊಂದರೆಯುಂಟಾಗಿರುವ ಹಿನ್ನೆಲೆಯಲ್ಲಿ ನನ್ನ ಮಾಲಕತ್ವದ ಸಂಕೀರ್ಣದಲ್ಲಿರುವ ಎಲ್ಲಾ ಬಾಡಿಗೆದಾರರಿಗೆ ಎಪ್ರಿಲ್ ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದೇನೆ. ಶೀಘ್ರದಲ್ಲೆ ಕೊರೋನ ಮುಕ್ತ ದೇಶ ನಮ್ಮದಾಗಲಿ ಎನ್ನುವುದೇ ನಮ್ಮೆಲ್ಲರ ಹಾರೈಕೆ. – ಹೇಮಾವತಿ ರೈ ಕುಂಬ್ರ, ಮಾಲಕರು ಹೇಮಾವತಿ ಸಂಕೀರ್ಣ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.