ಕಡಬ ಠಾಣೆಯ ಪರಿಸರದಲ್ಲಿ ಪೋಲಿಸರಿಂದ ಸ್ವಚ್ಚತೆ

Puttur_Advt_NewsUnder_1
Puttur_Advt_NewsUnder_1

ಕಡಬ: ದಿನಾಲು ಖಾಕಿತೊಟ್ಟು,ಲಾಠಿ ಹಿಡಿದು ಕಾನೂನು ಪಾಲನೆಯಲ್ಲಿ ತೊಡಗುತ್ತಿದ್ದ ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ್ ನೇತೃತ್ವದ ಪೋಲೀಸರ ತಂಡ ಇಂದು (ಜೂ.09) ಮುಂಜಾನೆ ಗುದ್ದಲಿ, ಹಾರೆ ಬುಟ್ಟಿಗಳನ್ನು ಹಿಡಿದು ಪೋಲೀಸ್ ಠಾಣಾ ಪರಿಸರದ ಸುತ್ತ ಸ್ವಚ್ಚತೆ ಕಾರ್ಯ ನಡೆಸಿದರು.


ಈಗಾಗಲೇ ಕಡಬ ಪ್ರದೇಶದಲ್ಲಿ ಕಾನೂನು ಪಾಲಿಸದೇ ಇರುವವರಿಗೆ ಸಿಂಹಸ್ವಪ್ನವಾಗಿರುವ ಕಡಬ ಪೋಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್ ರ ನೇತೃತ್ವದ ಪೋಲೀಸರ ತಂಡವು ಅದೇ ತರಹ ಸಮಾಜ ಸೇವೆಯಲ್ಲೂ ಒಂದು ಹೆಜ್ಜೆ ಮುಂದಿದೆ.ಕೊರೋನಾ ಲಾಕ್ ಡೌನ್ ಸಮಯದಲ್ಲಿ ದಾನಧರ್ಮಗಳ ಮೂಲಕ ಇದನ್ನು ಕಡಬ ಪೋಲಿಸರು ಸಾಬೀತುಪಡಿಸಿದ್ದರು. ಕಡಬ ಪೋಲೀಸ್ ಠಾಣೆಯಲ್ಲಿ ಈಗಾಗಲೇ ಹಲವಾರು ಸುಧಾರಣೆಗಳನ್ನು ತರಲಾಗಿದೆ. ಇದೀಗ ಠಾಣಾಧಿಕಾರಿ ರುಕ್ಮ ನಾಯ್ಕ್ ನೇತೃತ್ವದ ತಂಡವು ಹಲವಾರು ಜನಪರ ಕೆಲಸವನ್ನು ಆರಂಭಿಸಿದೆ. ಪೋಲೀಸ್ ಠಾಣೆಯಲ್ಲಿ ಮಾತ್ರವಲ್ಲದೇ ಕಡಬ ಪೇಟೆಯಲ್ಲೂ ಸಿಸಿ ಟಿವಿ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಠಾಣೆಗೆ ನೂತನ ನಾಮಫಲಕ, ಗೇಟ್ ಅಳವಡಿಸಲಾಗಿದೆ. ಠಾಣಾ ಆಸ್ತಿಯ ಜಾಗಕ್ಕೆ ತಂತಿಬೇಲಿ ಅಳವಡಿಸಿ ಸಂಪೂರ್ಣವಾಗಿ ಸುರಕ್ಷಿತ ವಲಯವನ್ನಾಗಿ ಮಾಡಲಾಗುತ್ತಿದೆ. ಕಾಂಪೌಂಡ್ ಕೆಲಸ ಪ್ರಗತಿಯಲ್ಲಿದೆ. ಮಾತ್ರವಲ್ಲದೆ ಇಂದು ಕಡಬ ಠಾಣೆಯ ಪೋಲೀಸರ ತಂಡವು ಗಿಡಗಂಟಿಗಳು ಬೆಳೆದು ಅಸಹ್ಯ ರೀತಿಯಲ್ಲಿ ಗೋಚರಿಸುತ್ತಿದ್ದ ಠಾಣಾ ಪರಿಸರದ ಸ್ವಚ್ಚತಾ ಕೆಲಸಗಳನ್ನು ಮಾಡುತ್ತಿರುವುದು ಕಂಡುಬಂದಿದೆ. ಸ್ವತಃ ಠಾಣಾಧಿಕಾರಿ ರುಕ್ಮ ನಾಯ್ಕ್ ರವರೇ ಗುದ್ದಲಿ ಹಿಡಿದು ಈ ಕೆಲಸಕ್ಕೆ ನೇತೃತ್ವ ನೀಡುತ್ತಿದ್ದರು. ಒಟ್ಟಿನಲ್ಲಿ ಕಡಬ ಪೋಲೀಸ್ ಠಾಣೆಯನ್ನು ಮಾದರಿ ಠಾಣೆಯನ್ನಾಗಿ ಮಾಡಲು ಹೊರಟಿರುವ ಕಡಬ ಪೋಲೀಸರ ಜನಪರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.