Breaking News

ಅಮ್ಚಿನಡ್ಕ: ಅಪಘಾತದ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿ ಮೃತ್ಯು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಕುರಿತು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಮ್ಚಿನಡ್ಕ ಎಂಬಲ್ಲಿ ಜೂ. 8ರಂದು ನಡೆದ ಬಗ್ಗೆ ವರದಿಯಾಗಿದೆ.

ಮೂಲತಃ ಮಾಡ್ನೂರು ನಿವಾಸಿಯಾಗಿದ್ದು ಮಂಗಳೂರಿನಲ್ಲಿ ವಾಸ್ತವ್ಯ ಹೊಂದಿರುವ ಸುಂದರ ಆಚಾರ್ಯ(45ವ)ರವರು ಮೃತಪಟ್ಟವರು. ತಂದೆ ದಿ.ದೂಮಪ್ಪ ಆಚಾರ್ಯ ಅವರ ತಿಥಿ ಕಾರ್ಯಕ್ರಮಕ್ಕೆ ಸಂಬಂಧಿಸಿ ಮಂಗಳೂರಿನಿಂದ ಮಾಡ್ನೂರು ಗ್ರಾಮದ ಮಳಿ ಮನೆಗೆ ಬಂದಿದ್ದ ಅವರು ಸಂಜೆ ಕಾವು ಕಡೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಅವರ ಬೈಕ್ ಹತೋಟಿ ತಪ್ಪಿ ಕಚ್ಚಾ ಮಣ್ಣು ರಸ್ತೆಯಲ್ಲಿ ಬಿದಿದ್ದು, ಈ ಕುರಿತು ರಾತ್ರಿ ಸಾರ್ವಜನಿಕರಿಂದ ಮಾಹಿತಿ ಪಡೆದ ಅವರ ಸಹೋದರ ಬಾಲಕೃಷ್ಣ ಆಚಾರ್ಯ ಸ್ಥಳಕ್ಕೆ ಬಂದು ತಕ್ಷಣ ಪೊಲೀಸರ ಸಹಾಯದೊಂದಿಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಸುಂದರ ಆಚಾರ್ಯ ಅವರು ಆಗಲೇ ಮೃತಪಟ್ಟಿದ್ದರು. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.