HomePage_Banner
HomePage_Banner
HomePage_Banner

ನರಿಮೊಗರು ಗ್ರಾ.ಪಂ ಸಿಬ್ಬಂದಿಗಳ ಕಾರ್ಯಾಚರಣೆ -ಮುಕ್ವೆ-ಬೆದ್ರಾಳ ರಸ್ತೆ ಬದಿಯಲ್ಲಿ ಕಸ ಹಾಕಿದ ವ್ಯಕ್ತಿ ಪತ್ತೆ

Puttur_Advt_NewsUnder_1
Puttur_Advt_NewsUnder_1

ಕಸ ಎಸೆದು ಪರಾರಿಯಾಗುತ್ತಿದ್ದ ವಿಡಿಯೋ ಚಿತ್ರೀಕರಣ

ಪೊಲೀಸರಿಗೆ ದೂರು -ಆರೋಪಿ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ನರಿಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಕ್ವೆ-ಬೆದ್ರಾಳ ರಸ್ತೆ ಬದಿಯಲ್ಲಿ ಕಸ ಎಸೆದು ಹೋಗುತ್ತಿದ್ದ ಆಪಾದಿತನೋರ್ವನನ್ನು ಪಂಚಾಯತ್ ಸಿಬ್ಬಂದಿಗಳೇ ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿ ಪೊಲೀಸರಿಗೆ ಹಸ್ತಾಂತರಿಸಿದ ಮತ್ತು ಪೊಲೀಸರು ಆತನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಘಟನೆ ವರದಿಯಾಗಿದೆ.ಕಳೆದ ಕೆಲ ಸಮಯದಿಂದ ಪಂಚಾಯತ್‌ಗೆ ತಲೆನೋವಾಗಿ ಪರಿಣಮಿಸಿದ್ದ ಸಮಸ್ಯೆಯೊಂದು ಪರಿಹಾರವಾದಂತಾಗಿದೆ.
ನರಿಮೊಗರು ಗ್ರಾಮದ ಬದಿನಾರು ನಿವಾಸಿ ಉಮ್ಮರ್ ಯಾನೆ ಟಿಂಬರ್ ಉಮ್ಮರ್ ಎಂಬವರು ಕಸ ಎಸೆದು ಪರಾರಿಯಾಗುತ್ತಿದ್ದ ಆರೋಪಿ ಎಂದು ಗುರುತಿಸಲಾಗಿದೆ. ಗ್ರಾ.ಪಂ.ನವರು ನೀಡಿರುವ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 269, 278ರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಕ್ವೆ-ಬೆದ್ರಾಳ ರಸ್ತೆಯ ಬದಿಯಲ್ಲಿ ದೊಡ್ಡ ದೊಡ್ಡ ಕಸ ತುಂಬಿದ ಪ್ಲಾಸ್ಟಿಕ್ ಚೀಲಗಳು, ಗೋಣಿಗಳು ಪ್ರತಿದಿನ ಬೆಳಗಾಗುವುದರ ಒಳಗೆ ಇಲ್ಲಿ ಪ್ರತ್ಯಕ್ಷವಾಗುತ್ತಿದ್ದವು.ಈ ಕುರಿತು ಪತ್ರಿಕೆಯಲ್ಲೂ ವರದಿ ಪ್ರಕಟಿಸಿದ ಬಳಿಕ ಈ ಭಾಗದ ಕಸವನ್ನು ತೆರವುಗೊಳಿಸಿ ನರಿಮೊಗರು ಗ್ರಾ.ಪಂ. ವತಿಯಿಂದ ಎಚ್ಚರಿಕೆ ಫಲಕ ಅಳವಡಿಸಲಾಗಿತ್ತಾದರೂ ಮತ್ತೆ ರಾತ್ರಿ ಬೆಳಗಾಗುವುದರೊಳಗೆ ಕಸದ ರಾಶಿ ಪ್ರತ್ಯಕ್ಷವಾಗುತ್ತಿತ್ತು.ಈ ಕುರಿತು, ಕಸ ಎಸೆದವರ ಕುರಿತು ಮಾಹಿತಿ ಕೊಟ್ಟಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ನರಿಮೊಗರು ಗ್ರಾ.ಪಂ ಈ ಹಿಂದೆಯೂ ಸಾರ್ವಜನಿಕರಿಗೆ ತಿಳಿಸಿತ್ತಲ್ಲದೆ ಅನೇಕ ಬಾರಿ ಬೀದಿ ನಾಟಕ, ಭಿತ್ತಿ ಪತ್ರ ಹಂಚಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಪ್ರತಿ ಬುಧವಾರ ಗ್ರಾ.ಪಂ ವತಿಯಿಂದ ಪುರುಷರಕಟ್ಟೆ ಮತ್ತು ಮುಕ್ವೆ ಪರಿಸರದಲ್ಲಿ ವಾಹನದ ಮೂಲಕ ಒಣ ಕಸಗಳನ್ನು ಸಂಗ್ರಹಿಸುವ ಕಾರ್ಯ ನಡೆಸಲಾಗುತ್ತಿತ್ತು.ಮುಕ್ವೆ ರಸ್ತೆ ಬದಿಯಲ್ಲಿ ಕಸದ ರಾಶಿ ಹಾಕುವವರ ಪತ್ತೆ ಮಾಡಲು ಪಣ ತೊಟ್ಟ ಗ್ರಾ.ಪಂ ಸಿಬ್ಬಂದಿಗಳು ಜೂ.8ರಂದು ನಸುಕಿನ ಜಾವ ಸುಮಾರು ಗಂಟೆ 5.45ಕ್ಕೆ ಮುಕ್ವೆ ಬಳಿ ಅವಿತು ಕುಳಿತು ಕಸ ಎಸೆಯುವವರ ವಿಡಿಯೋ ಮಾಡಲು ಸಿದ್ಧತೆ ಮಾಡಿದ್ದರು.ಸುಮಾರು ಗಂಟೆ 6.40ರ ಸಮಯಕ್ಕೆ ಮುಕ್ವೆ ಕಡೆಯಿಂದ ಬೆದ್ರಾಳ ಕಡೆಗೆ ಓರ್ವ ವ್ಯಕ್ತಿ ಬೈಕ್‌ನಲ್ಲಿ ಬಂದು ಪ್ಲಾಸ್ಟಿಕ್‌ನಲ್ಲಿ ತುಂಬಿದ ಕಸವನ್ನು ರಸ್ತೆ ಬದಿಯಲ್ಲಿ ಎಸೆದುಹೋಗುವುದನ್ನು ವಿಡಿಯೊ ಮಾಡಿದ್ದರು.ಕಸ ಬಿಸಾಡಿದಾತನ ಗುರುತು ವಿಡಿಯೋ ಮೂಲಕ ಪತ್ತೆ ಮಾಡಿದ ಬಳಿಕ ನರಿಮೊಗರು ಗ್ರಾ.ಪಂ ಪಿಡಿಒ ರವಿಚಂದ್ರ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ದೂರು ಸ್ವೀಕರಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿ ಉಮ್ಮರ್ ಅವರ ವಿರುದ್ಧ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆದು ಪ್ರಾಣಕ್ಕೆ ಅಪಾಯಕಾರಿಯಾದ ಸೋಂಕು ಹರಡಲು ಮತ್ತು ವಾತಾವರಣ ಆರೋಗ್ಯಕ್ಕೆ ಹಾನಿಕರವಾಗುವಂತೆ ಮಾಡಿರುವ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಂಚಾಯತ್ ಸಿಬಂದಿಗಳ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.