ಪಡೀಲ್ ಕನ್ನಡಿಗರ ಬಡವಾಣೆಯಲ್ಲಿ ಚರಂಡಿ ಅಭಿವೃದ್ಧಿ ಶಿಲನ್ಯಾಸ, ರಸ್ತೆ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಾಸಕರ ವಿಶೇಷ ಅನುದಾನದಿಂದ ಪಡೀಲು ಕನ್ನಡಿಗರ ಬಡವಾಣೆಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ರೂ ರೂ. 5ಲಕ್ಷದ ಕಾಮಗಾರಿಗೆ ಸಂಬಂಧಿಸಿ ಚರಂಡಿ ಕಾಮಗಾರಿಗೆ ಶಿಲನ್ಯಾಸ ಮತ್ತು ರಸ್ತೆ ಉದ್ಘಾಟನಾ ಕಾರ್ಯಕ್ರಮ ಜೂ. 9ರಂದು ನಡೆಯಿತು.

ಶಾಸಕ ಸಂಜೀವ ಮಠಂದೂರು ಅವರು ಶಿಲಾನ್ಯಾಸ ಮತ್ತು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಬೂತ್ ಅಧ್ಯಕ್ಷ ವಿಠಲ್‌ದಾಸ್ ಆಚಾರ್ಯ, ನಗರಮಂಡಲದ ಬಿಜೆಪಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ನಗರಸಭಾ ಸದಸ್ಯರಾದ ವಿದ್ಯಾ ಆರ್ ಗೌರಿ, ಗೌರಿ ಬನ್ನೂರು, ನಗರ ಮಂಡಲದ ಉಪಾಧ್ಯಕ್ಷೆ ಜ್ಯೋತಿ ನಾಯಕ್, ಶಿವಪ್ರಸಾದ್ ಕಲ್ಲಿಮಾರ್, ಇಂದುಶೇಖರ್, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಶೆಟ್ಟಿ, ಕಾರ್ಯದರ್ಶಿ ಅರ್ಪಣಾ ಶಿವಾನಂದ್, ನಗರ ಮಂಡಲದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್ ಹಾರಾಡಿ, ಸ್ಥಳೀಯರಾದ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ದಯಾನಂದ್, ನವೀನ್, ಪವನ್ ಕುಮಾರ್ ಗುತ್ತಿಗೆದಾಗ ಹಂಝ, ಇರ್ಷಾದ್ ಉಪಸ್ಥಿತರಿದ್ದರು. ನಗರಸಭಾ ಸದಸ್ಯ ಪದ್ಮನಾಭ ನಾಕ್ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.