Home_Page_Advt
Home_Page_Advt
Home_Page_Advt

ಪಡೀಲು: ಗಾಡಿಯಲ್ಲಿ ಕಬಾಬ್ ವ್ಯಾಪಾರ ಮಾಡುತ್ತಿದ್ದ ವಿಠಲ ನಾಯ್ಕ್ ರವರ ಮೃತದೇಹ ಬಾವಿಯಲ್ಲಿ ಪತ್ತೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೀದಿ ಬದಿ ತಳ್ಳುಗಾಡಿಯಲ್ಲಿ ಕಬಾಬ್ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೃತ ದೇಹ ಪುತ್ತೂರು ಉಪ್ಪಿನಂಗಡಿ ರಸ್ತೆಯ ಪಡೀಲು ಸರಕಾರಿ ಬಾವಿಯಲ್ಲಿ ಪತ್ತೆಯಾಗಿರುವುದು ಜೂ. 11ರಂದು ಬೆಳಕಿಗೆ ಬಂದಿದೆ.

ಪಡೀಲು ಸಮೀಪ ಹಲವಾರು ಸಮಯಗಳಿಂದ ತಳ್ಳುಗಾಡಿಯಲ್ಲಿ ಚಿಕನ್ ಕಬಾಬ್ ವ್ಯಾಪಾರ ನಡೆಸುತ್ತಿದ್ದ ನಂದಿಲ ನಿವಾಸಿ ವಿಠಲ ನಾಯ್ಕ್ (63ವ)ರವರು ಮೃತಪಟ್ಟವರು.

ಕೊರೋನಾ ವೈರಸ್ ಹರಡದಂತೆ ಲಾಕ್‌ಡೌನ್ ಬಳಿಕ ಸಂಕಷ್ಟಕ್ಕೆ ಒಳಗಾದ ಅವರು ಲಾಕ್‌ಡೌನ್ ಸಡಿಲಿಕೆ ಬಳಿಕ ಮತ್ತೆ ತನ್ನ ವ್ಯವಹಾರ ಆರಂಭಿಸಿದ್ದರೂ ನಡುವೆ ಅನಾರೋಗ್ಯ ಅವರನ್ನು ಕಾಡಿತ್ತೆನ್ನಲಾಗಿದೆ. ಜೂ.10ರಂದು ರಾತ್ರಿ ಮನೆಯಲ್ಲಿ ಊಟ ಮಾಡಿ ಹೊರಗೆ ಹೋದವರು ಮತ್ತೆ ನಾಪತ್ತೆಯಾಗಿದ್ದರು. ಈ ಕುರಿತು ಮನೆ ಮಂದಿ ಪರಿಸರದಲ್ಲಿ ಹಡುಕಾಡಿದರೂ ಪತ್ತೆಯಾಗಿರಲಿಲ್ಲ. ಜೂ. 11ರಂದು ಪಡೀಲು ಸರಕಾರಿ ಬಾವಿಯ ಕಟ್ಟೆಯಲ್ಲಿ ಚಪ್ಪಲಿ ಮತ್ತು ವೇಸ್ಟಿಯೊಂದನ್ನು ಕಂಡ ಕೆಲವರು ಸಂಶಯ ವ್ಯಕ್ತಪಡಿಸಿ ಬಾವಿಯನ್ನು ನೋಡಿದಾಗ ವ್ಯಕ್ತಿಯೊಬ್ಬರ ಮೃತ ದೇಹ ಬಾವಿಯಲ್ಲಿರುವುದು ಪತ್ತೆಯಾಗಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನು ಬಾವಿಯಿಂದ ಮೇಲೆತ್ತಿದಾಗ ವಿಠಲ ನಾಯ್ಕ್ ಅವರ ಮೃತದೇಹ ಎಂದು ಗುರುತಿಸಲಾಗಿದೆ. ಮೃತರು ಪತ್ನಿ ಮಾಲಿನಿ, ಮೂವರು ಪುತ್ರಿಯರು ಮತ್ತು ಪುತ್ರನನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.