ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ದೇವರ ದರುಶನಕ್ಕೆ ಅವಕಾಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ನಿತ್ಯ ಪೂಜೆಗೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ.  ಸರಕಾರದ ಆದೇಶ ಪಾಲಿಸಿಕೊಂಡು ಕ್ಷೇತ್ರದಲ್ಲಿ ಎಂದಿನಂತೆ ಪೂಜೆ ನಡೆಯಲಿದ್ದು, ಕ್ಷೇತ್ರದಲ್ಲಿ ವಿಶೇಷ ಪೂಜೆ ಮಾಡಿಸುವವರು 2 ದಿನಕ್ಕೆ ಮೊದಲು ತಿಳಿಸಬೇಕು.

ಕ್ಷೇತ್ರದಲ್ಲಿ  ಧರ್ಮದರ್ಶಿಗಳವರ ಸಂದರ್ಶಣಕ್ಕೆ ಅವಕಾಶವಿದ್ದು, ಸಂದರ್ಶಣಕ್ಕೆ ಬರುವವರು ದೂರವಾಣಿ ಮೂಲಕ ತಮ್ಮ ಸಮಯವನ್ನು ನಿಗದಿಪಡಿಸಿಕೊಂಡು ಮದ್ಯಾಹ್ನದ ಒಳಗಾಗಿ ಬರುವುದು. ಭಕ್ತಾಧಿಗಳು ಕ್ಷೇತ್ರಕ್ಕೆ ಬರುವ ವೇಳೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.  ಕ್ಷೇತ್ರದ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತಿದ್ದು, ಭಕ್ತಾಧಿಗಳು ಸಹಕರಿಸಬೇಕಾಗಿದೆ.  ಕ್ಷೇತ್ರದ ಜೀರ್ಣೋದ್ಧಾರದ ಪ್ರಯುಕ್ತ ಅಯೋಜಿಸಿರುವ ಲಕ್ಕಿ ಕೂಪನ್‌ ಡ್ರಾವನ್ನು ಕೊರೋನ ಹಿನ್ನೆಲೆಯಲ್ಲಿ ಲಾಕ್ ಡೌನ್ ಇದ್ದ ಕಾರಣ ಮುಂದೂಡಲಾಗಿದ್ದು, ಜೂ. 20 ರಿಂದ ಪ್ರತಿ ತಿಂಗಳ 20ರಂದು ಸಂಜೆ 5 ಕ್ಕೆ ಎಂದಿನಂತೆ  ಡ್ರಾ ನಡೆಯಲಿದೆ.

ಕ್ಷೇತ್ರ ಸಂದರ್ಶಿಸುವ ಭಕ್ತಾಧಿಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8762821549,  9946573285 ಯನ್ನು ಸಂಪರ್ಕಿಸುವಂತೆ ಕ್ಷೇತ್ರದ ಪ್ರಕಟಣೆ ತಿಳಿಸಿದೆ‌.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.